ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ನಗರ: ಹಳ್ಳಿಗಳಿಗೆ ಕಾವೇರಿ ನೀರು ಶೀಘ್ರ

Last Updated 22 ಫೆಬ್ರುವರಿ 2011, 7:10 IST
ಅಕ್ಷರ ಗಾತ್ರ

ಸಾಲಿಗ್ರಾಮ: ‘ಕೆ.ಆರ್.ನಗರ ತಾಲ್ಲೂಕಿನ 200 ಗ್ರಾಮಗಳ ಜನತೆಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯಾೀಜನೆಗೆ ರೂ 92 ಕೋಟಿ ಹಣ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ       ಪ್ರಸ್ತಾವನೆ ಸಲ್ಲಿಸಲಾಗಿದ್ದು ತಮ್ಮ ಅಧಿಕಾರವಧಿ ಮುಗಿಯುವ ವೆಾದಲು ಈ  ಯಾೀಜನೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಶಾಸಕ ಸಾ.ರಾ.ಮಹೇಶ್ ಅವರು ಈಚೆಗೆ ಭರವಸೆ ನೀಡಿದರು.

ಚುಂಚನಕಟ್ಟೆ ಹೋಬಳಿ ಹೊಸಕೋಟೆ ಗ್ರಾಮ ಪಂಚಾಯಿತಿ ಆಯಾೀಜಿಸಿದ್ದ ಜನಸ್ಪಂದನಾ ಕಾರ್ಯಕ್ರ ಮದಲ್ಲಿ ಮಾತನಾಡಿದರು. ಕೆ.ಆರ್.ನಗರ ತಾಲ್ಲೂಕಿನ ಹಲವು ಗ್ರಾಮಗಳು ಕಾವೇರಿ ನದಿಯ ದಂಡೆಯ  ಮೇಲೆ ಇದ್ದರೂ ಕುಡಿಯಲು ಕಾವೇರಿ ನೀರು ಸಿಗದೆ ಕೊಳವೆ ಬಾವಿ ನೀರನ್ನು ಕುಡಿಯುತ್ತಿದ್ದಾರೆ. ಇದರಿಂದ ಜನತೆಯ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಗ್ರಾಮಗಳ ಜನತೆಗೆ ಕಾವೇರಿ ನೀರು ಸಿಗುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಬಡ ಜನತೆಗೆ ಆಶ್ರಯ ಯಾೀಜನೆಯಡಿ ಸೂರು ನೀಡಲು ಸರ್ಕಾರ 200 ಮನೆಗಳನ್ನು ಮಂಜೂರು ಮಾಡಿದೆ ಇದು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಶ್ರಮಿಸಬೇಕು ಹಾಗೊಂದು ವೇಳೆ ಸ್ಥಿತಿವಂತರಿಗೆ ಮನೆಗಳನ್ನು ವಿತರಣೆ ಮಾಡಲು  ಮುಂದಾದರೆ ಅಂತಹ ಗ್ರಾಮ ಪಂಚಾಯಿತಿ ಶಿಫಾರಸು ಮಾಡುವ ಪಟ್ಟಿಯನ್ನು ತಡೆಹಿಡಿಯಲಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಆಶ್ರಯ ಯಾೀಜನೆಯಡಿ  ಸ್ಥಿತಿವಂತರಿಂದ ಹಣವನ್ನು ಪಡೆದು ಕೊಂಡು ಮನೆಗಳನ್ನು ವಿತರಣೆ  ಮಾಡುವುದು ನನ್ನ ಗಮನಕ್ಕೆ ಬಂದರೆ ಅಂತಹ ಕಾರ್ಯದರ್ಶಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ತಾಲ್ಲೂಕು ಪಂಚಾಯಿತಿ ಇಓ ಬಸವ ರಾಜ್ ಅವರಿಗೆ ಸೂಚನೆ ನೀಡಿದರು.ತಹಶೀಲ್ದಾರ್ ಟಿ.ಜವರೇಗೌಡ, ಜಿ.ಪಂ.ಸದಸ್ಯ ಚಿಕ್ಕಕೊಪ್ಪಲು ದ್ವಾರಕೀಶ್, ತಾ.ಪಂ.ಸದಸ್ಯ ಹಾಡ್ಯ  ಮಹದೇವಸ್ವಾಮಿ, ಬಿಇಓ ಮಂಜುಳ, ಎಇಇ ವಾಸುದೇವ್, ದೊಡ್ಡಕೊಪ್ಪಲು ಜಗದೀಶ್, ಹೊಸೂರು  ಕೀರ್ತಿ, ಎಚ್.ಡಿ.ಲೋಕೇಶ್, ಚಿಕ್ಕಕೊಪ್ಪಲು ಲೋಕೋಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT