ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ: ಮನೆಗೆ ನುಗ್ಗಿದ ಮಳೆ ನೀರು

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ಮಂಗಳವಾರ ರಾತ್ರಿ ಸುರಿದ ಸತತ ಮಳೆಯಿಂದಾಗಿ ವಿವಿಧ ಬಡಾವಣೆಗಳ ನೂರಕ್ಕೂ ಹೆಚ್ಚು ಮನೆ ಮತ್ತು ಅಂಗಡಿಗಳಿಗೆ ಮಳೆ ನೀರಿನ ಜತೆಗೆ ಚರಂಡಿಯ ಕೊಳಚೆ ನೀರು ನುಗ್ಗಿ ಜನ ಜೀವನಕ್ಕೆ ತೊಂದರೆಯಾಯಿತು.

`ಮುಖ್ಯರಸ್ತೆ ಮತ್ತು ಸಂಪರ್ಕ ರಸ್ತೆಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ನಿಂತು. ಅಲ್ಲಲ್ಲಿ ಚರಂಡಿ ಮೇಲಿನ ಕಲ್ಲುಚಪ್ಪಡಿಗಳನ್ನು ತೆಗೆದು ಅಡ್ಡಾದಿಡ್ಡಿಯಾಗಿ ಸರಿಸಿದ್ದಾರೆ. ಸಾಲದು ಎಂಬಂತೆ ಮುಖ್ಯರಸ್ತೆಯ ಬದಿ ರಾಜಕಾಲುವೆ ಮೇಲೆ ಸಿಮೆಂಟ್ ಕಾಂಕ್ರೆಟ್ ಚಪ್ಪಡಿಗಳನ್ನು ಜೋಡಿಸಿದ್ದಾರೆ.

ಈ ರೀತಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಮತ್ತು ಅಂಗಡಿಯೊಳಗೆ ನುಗ್ಗುತ್ತಿದೆ~ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ದೂರಿದರು.

`ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯ ಮೈದಾನವು ಮಳೆ ಬಂದಾಗಲೆಲ್ಲ ಜಲಾವೃತಗೊಳ್ಳುತ್ತದೆ. ತಗ್ಗು ಪ್ರದೇಶದಲ್ಲಿರುವುದರಿಂದ ಈ ಸಮಸ್ಯೆ ಮರುಕಳಿಸುತ್ತಲೇ ಇದೆ~ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ  ಪ್ರದರ್ಶಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT