ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಇಲೆವೆನ್‌ಗೆ ಇನಿಂಗ್ಸ್ ಮುನ್ನಡೆ

ಶಫಿ ದಾರಾಷ ಕ್ರಿಕೆಟ್: ನಿತಿನ್ ಶತಕ, ಹರಿಯಾಣ ತಂಡದ ಮರು ಹೋರಾಟ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಕೆಎಸ್‌ಸಿಎ ಇಲೆವೆನ್ ತಂಡದವರು ಶಫಿ ದಾರಾಷ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದ್ದಾರೆ.

ಆಲೂರು ಎರಡನೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಕಾರ್ಯದರ್ಶಿ ತಂಡ ಮೊದಲ ಇನಿಂಗ್ಸ್‌ನಲ್ಲಿ 56.4 ಓವರ್‌ಗಳಲ್ಲಿ 205 ರನ್ ಗಳಿಸುವಷ್ಟರಲ್ಲಿ ಆಲ್‌ಔಟ್ ಆಯಿತು. ಈ ತಂಡ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು.

ಸಿ.ಎಂ. ಗೌತಮ್ ಸಾರಥ್ಯದ ಇಲೆವೆನ್ ತಂಡದ ಚುರುಕಿನ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ಕಾರ್ಯದರ್ಶಿ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಈ ತಂಡದವರು ಸೋಮವಾರ ಕೇವಲ 148 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ.

ಉತ್ತಮ ಆರಂಭ: ಮೊದಲ ಇನಿಂಗ್ಸ್‌ನಲ್ಲಿ 341 ರನ್ ಗಳಿಸಿದ್ದ ಕೆಎಸ್‌ಸಿಎ ಇಲೆವೆನ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ರಾಬಿನ್ ಉತ್ತಪ್ಪ (88, 110ಎಸೆತ, 11 ಬೌಂಡರಿ, 2 ಸಿಕ್ಸರ್) ಬ್ಯಾಟಿಂಗ್ ಬಲದಿಂದ ಎರಡನೇ ದಿನದಾಟದ ಅಂತ್ಯಕ್ಕೆ 36 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದೆ. ಕೆ.ಎಲ್. ರಾಹುಲ್ (55, 61ಎಸೆತ, 4ಬೌಂಡರಿ, 1 ಸಿಕ್ಸರ್) ಇದಕ್ಕೆ ನೆರವಾದರು.

ಕುನಾಲ್ ಮತ್ತೊಂದು ಶತಕ: ಕೊನೆಯ ಲೀಗ್ ಪಂದ್ಯದಲ್ಲಿ ತ್ರಿಪುರ ಎದುರು ಶತಕ ಗಳಿಸಿದ್ದ ಕುನಾಲ್ ಕಪೂರ್ ಮತ್ತೊಂದು ಶತಕ ಸಿಡಿಸಿದರು. ಇದರಿಂದ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡ ಹರಿಯಾಣ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 120 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಭಾನುವಾರದ ಅಂತ್ಯಕ್ಕೆ 84 ರನ್ ಗಳಿಸಿದ್ದ ಬಲಗೈ ಬ್ಯಾಟ್ಸ್‌ಮನ್ ಕುನಾಲ್ ಎರಡನೇ ದಿನದಾಟದಲ್ಲಿ 81 ರನ್ ಸೇರಿಸಿದರು. 160 ಎಸೆತಗಳಲ್ಲಿ 21 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ ಅವರು 165 ರನ್ ಗಳಿಸಿದರು. ಹರಿಯಾಣ ಮರು ಹೋರಾಟ ಆರಂಭಿಸಿದ್ದು, 70 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿದೆ. ನಿತಿನ್ ಸೈನಿ (118, 209 ಎಸೆತ, 14ಬೌಂಡರಿ, 1 ಸಿಕ್ಸರ್) ಕೆ. ಅಭಿಮನ್ಯು (92, 180ಎಸೆತ, 7 ಬೌಂಡರಿ, 2 ಸಿಕ್ಸರ್) ಉತ್ತಮ ಬುನಾದಿ ಒದಗಿಸಿದ್ದಾರೆ.  
 
ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ-2. ಕೆಎಸ್‌ಸಿಇ ಇಲೆವೆನ್ 86.2 ಓವರ್‌ಗಳಲ್ಲಿ 341 ಹಾಗೂ ಎರಡನೇ ಇನಿಂಗ್ಸ್ 36 ಓವರ್‌ಗಳಲ್ಲಿ 2 ವಿಕೆಟ್‌ಗೆ 169. (ರಾಬಿನ್ ಉತ್ತಪ್ಪ 88, ಕೆ.ಎಲ್. ರಾಹುಲ್ 55; ಜೆ. ಸುಚಿತ್ 55ಕ್ಕೆ1, ಅಬ್ರಾರ್ ಖಾಜಿ 32ಕ್ಕೆ1). ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ಮೊದಲ ಇನಿಂಗ್ಸ್ 56.4 ಓವರ್‌ಗಳಲ್ಲಿ 205. (ಮಯಂಕ್ ಅಗರ್‌ವಾಲ್ 30, ಕರುಣ್ ನಾಯರ್ 24, ಅರ್ಜುನ್ ಹೊಯ್ಸಳ 32, ಜೆ. ಸುಚಿತ್ 27, ಕೆ. ಹೊಯ್ಸಳ 24; ಎಸ್.ಎಲ್. ಅಕ್ಷಯ್ 42ಕ್ಕೆ2, ಕೆ.ಪಿ. ಅಪ್ಪಣ್ಣ 34ಕ್ಕೆ2, ಎಚ್.ಎಸ್. ಶರತ್ 22ಕ್ಕೆ2, ಮನೀಷ್ ಪಾಂಡೆ 25ಕ್ಕೆ1, ಅಭಿಮನ್ಯು ಮಿಥುನ್ 39ಕ್ಕೆ1, ಕೆ. ಗೌತಮ್ 18ಕ್ಕೆ1).
ಆಲೂರು ಕ್ರೀಡಾಂಗಣ-3

ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ 120 ಓವರ್‌ಗಳಲ್ಲಿ 3 ವಿಕೆಟ್‌ಗೆ 581ಡಿಕ್ಲೇರ್ಡ್ (ಕುನಾಲ್ ಕಪೂರ್ ಔಟಾಗದೆ 165, ಬಿ. ಶಶಿರ್ 75; ಸಚಿನ್ ರಾಣಾ 59ಕ್ಕೆ1, ಜಯಂತ್ ಯಾದವ್ 95ಕ್ಕೆ1. ಹರಿಯಾಣ ಕ್ರಿಕೆಟ್ ಸಂಸ್ಥೆ 70 ಓವರ್‌ಗಳಲ್ಲಿ 2 ವಿಕೆಟ್‌ಗೆ  242. (ನಿತಿನ್ ಸೈನಿ 118, ಕೆ. ಅಭಿಮನ್ಯು 92; ಎಸ್.ಕೆ. ಮೊಯಿನುದ್ದೀನ್ 73ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT