ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಕರ್ನಾಟಕಕ್ಕೆ ಸತತ ಎರಡನೇ ಜಯ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಚಂದರಗಿ (ಬೆಳಗಾವಿ ಜಿಲ್ಲೆ): ಮೂರು ನಿಮಿಷ ರಕ್ಷಣಾತ್ಮಕ ಓಟ ಓಡಿ ಎದುರಾಳಿಗಳ ಇಬ್ಬರನ್ನು ಔಟ್ ಮಾಡುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದ ಯಲ್ಲಪ್ಪ ಡಾನಕಶಿರೂರ ಮೂಲಕ ಒಟ್ಟು 14 ಪಾಯಿಂಟ್‌ಗಳನ್ನು ಬಾಚಿದ ಕರ್ನಾಟಕದ ಬಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಕೂಲ್ ಗೇಮ್ಸ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದರು.

ಇಲ್ಲಿನ ಕ್ರೀಡಾ ಶಾಲೆಯಲ್ಲಿ ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಒರಿಸ್ಸಾ ತಂಡವನ್ನು ಕರ್ನಾಟಕ 13 ಪಾಯಿಂಟ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ನತ್ತ ಹೆಜ್ಜೆ ಇಟ್ಟಿತು.

ಬಾಲಕಿಯರ ವಿಭಾಗದಲ್ಲೂ ಕರ್ನಾಟಕ ಅಜೇಯತ್ವವನ್ನು ಮುಂದುವರಿಸಿದ್ದು ಮಂಗಳವಾರದ ಪಂದ್ಯದಲ್ಲಿ ಪುಚುಚ್ಚೇರಿ ತಂಡದ ವಿರುದ್ಧ 9 ಪಾಯಿಂಟ್‌ಗಳ ಜಯ ಸಾಧಿಸಿತು. 6.20 ನಿಮಿಷ ಓಡಿದ ಪಿ. ಸಿಂಧು ಹಾಗೂ ಎದುರಾಳಿ ತಂಡದ ಎಂಟು ಮಂದಿಯನ್ನು ಔಟ್ ಮಾಡಿದ ಮೇಘಾ ಭರ್ಜರಿ ಆಟ ಪ್ರದರ್ಶಿಸಿ ತಂಡಕ್ಕೆ 14 ಪಾಯಿಂಟ್‌ಗಳನ್ನು ತಂದುಕೊಟ್ಟರು. ಪುದುಚೇರಿ ತಂಡ ಕೇವಲ 5 ಪಾಯಿಂಟ್ ಗಳಿಸಿ ಸೋಲೊಪ್ಪಿಕೊಂಡಿತು.

ಫಲಿತಾಂಶಗಳು; ಬಾಲಕರ ವಿಭಾಗ: ಎ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡವನ್ನು 9 ಪಾಯಿಂಟ್‌ಗಳಿಂದ (20-11) ಸೋಲಿಸಿದರೆ ಮಧ್ಯ ಪ್ರದೇಶ ತಂಡ ಪುದುಚೇರಿ ತಂಡವನ್ನು 3 ಪಾಯಿಂಟ್(16-13) ಗಳಿಂದ ಮಣಿಸಿತು. ಬಿ ಗುಂಪಿನಲ್ಲಿ  ನವದೆಹಲಿ ತಂಡ ದಾದ್ರಾ ನಗರ ಹವೇಲಿ ತಂಡವನ್ನು 2 ಪಾಯಿಂಟ್‌ಗಳಿಂದ (09-07) ಸೋಲಿಸಿತು. ಕೇರಳ ತಂಡ ಛತ್ತೀಸ್‌ಗಡವನ್ನು 1 ಪಾಯಿಂಟ್‌ನಿಂದ (13-12), ಛತ್ತೀಸಗಡ ತಂಡ ದಾದ್ರಾ ನಗರ ಹವೇಲಿ ತಂಡವನ್ನು 22 ಪಾಯಿಂಟ್‌ಗಳಿಂದ (25-03) ಸೋಲಿಸಿತು

ಬಾಲಕರ ವಿಭಾಗದ ಸಿ ಗುಂಪಿನ ಪಂದ್ಯಗಳಲ್ಲಿ ಒರಿಸ್ಸಾ ತಂಡ ಬಿಹಾರವನ್ನು 5 ಪಾಯಿಂಟ್‌ಗಳಿಂದ (11-06), ಮಹಾರಾಷ್ಟ್ರ ತಂಡ  ಗುಜರಾತ್ ತಂಡವನ್ನು 3 ಪಾಯಿಂಟ್‌ಗಳಿಂದ (11-08), ಮಹಾರಾಷ್ಟ್ರ ತಂಡ ತಮಿಳುನಾಡು ತಂಡವನ್ನು 2 ಪಾಯಿಂಟ್‌ಗಳಿಂದ (14-12) ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT