ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನ: 38 ನಾಮಪತ್ರ ಸಲ್ಲಿಕೆ

Last Updated 18 ಏಪ್ರಿಲ್ 2013, 9:56 IST
ಅಕ್ಷರ ಗಾತ್ರ

ಗಂಗಾವತಿ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ವಿವಿಧ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಆಗಮಿಸಿ ನಾಮಪತ್ರ ಸಲ್ಲಿಸಿದರು.

ತಾಲ್ಲೂಕಿನ ಕನಕಗಿರಿ ಮತ್ತು ಗಂಗಾವತಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 25 ಅಭ್ಯರ್ಥಿಗಳು 38 ನಾಮಪತ್ರ ದಾಖಲಿಸಿದರು. ಬುಧವಾರದವರೆಗೆ ಒಟ್ಟು ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ 19 ಅಭ್ಯರ್ಥಿಗಳು 42 ನಾಮಪತ್ರ ಸಲ್ಲಿಸಿದರೆ, ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ 16 ಅಭ್ಯರ್ಥಿಗಳು 31 ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರದ ವಿವರ: ಗಂಗಾವತಿ ಕ್ಷೇತ್ರಕ್ಕೆ ಬುಧವಾರ ಎಚ್.ಆರ್. ಶ್ರೀನಾಥ್-ಕಾಂಗ್ರೆಸ್ (3 ನಾಮಪತ್ರ), ಇಕ್ಬಾಲ್ ಅನ್ಸಾರಿ -ಜೆಡಿಎಸ್ (2), ಪರಣ್ಣ ಮುನವಳ್ಳಿ-ಬಿಜೆಪಿ (2), ಮಂಜುಳಾ ಪಾಟೀಲ್-ಬಿಎಸ್‌ಆರ್ (2), ಬಸವರಾಜ ಪಾಟೀಲ್ ಅನ್ವರಿ-ಕೆಜೆಪಿ, ವಿಜಯಕುಮಾರ-ಸಿಪಿಐ ಅಧಿಕೃತವಾಗಿ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ ಶರಣಬಸವ, ನಾರಾಯಣಪ್ಪ ಐಲಿ, ಖಾದರಸಾಬ, ನಾಗರಾಜ ನಂದಾಪುರ ಮತ್ತು ಫಕೃದ್ಧೀನ್ ಎಂಬವವರು ನಾಮಪತ್ರ ಸಲ್ಲಿಸಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಕಾಶ ರಾಠೋಡ-ಜೆಡಿಎಸ್, ರಾಮಾನಾಯ್ಕ-ಬಿಜೆಪಿ (3), ಮುಕುಂದ್‌ರಾವ್ ಭವಾನಿಮಠ-ಬಿಎಸ್‌ಆರ್ ಕಾಂಗ್ರೆಸ್, ದ್ಯಾಮಮ್ಮ-ಸಿಪಿಐಎಂಎಲ್, ಬಸವರಾಜ ದಢೇಸ್ಗೂರ-ಕೆಜೆಪಿ, ಕೆ.ಎಚ್. ಹುಲುಗಣ್ಣ-ಎಸ್‌ಜೆಪಿ, ಶ್ರೀಧರ-ಬಿಎಸ್‌ಪಿ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದರೆ, ಲಂಕೇಶ ಗುಳದಳ್ಳಿ, ನಾಗರಾಜ ವಡ್ಡರ್, ಶಾಮೀಲಪ್ಪ (3), ಶಂಕರ್, ವಿಠೋಬ (2) ಎಂಬುವವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

`ಅಭ್ಯರ್ಥಿ ಬೆಂಬಲಿಗರಿಂದ ಹಲ್ಲೆ'
ಗಂಗಾವತಿ: ಬಿಎಸ್‌ಆರ್ ಅಭ್ಯರ್ಥಿ ಪಂಪನಗೌಡರ ಕುಟುಂಬಿಕರು ಹಾಗೂ ಬೆಂಬಲಿಗರು ಹಳೆಯ ಕಾರ್ಯಕರ್ತರ ಮೇಲೆ ಮಾಡಿದ ಹಲ್ಲೆ ಹಾಗೂ ವರ್ತನೆಯಿಂದ ಬೇಸತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಸಾಮೂಹಿಕವಾಗಿ ಪಕ್ಷ ತೊರೆಯಬೇಕಾಯಿತು ಎಂದು ಮುಖಂಡ ಶರಣಬಸವ ಗದ್ದಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರಿಗೆ ಈಗ ಬಿಎಸ್‌ಆರ್‌ನಲ್ಲಿ ಬೆಲೆಯಿಲ್ಲ. ವಾಸ್ತವವಾಗಿ ಪಂಪನಗೌಡ ಗೆಲ್ಲಬೇಕು ಎಂಬ ಕಾರಣಕ್ಕೆ ಸ್ಪರ್ಧಿಸುತ್ತಿಲ್ಲ. ಪಂಚಮಸಾಲಿ ಮತಗಳನ್ನು ಪಡೆದರಷ್ಟೆ ಸಾಕು ಎಂಬ ಧೋರಣೆಯಲ್ಲಿದ್ದಾರೆ.

ಕ್ಷೇತ್ರದಲ್ಲಿ ಬಲಾಢ್ಯ ಸ್ಥಾನದಲ್ಲಿರುವ ಲಿಂಗಾಯತ ಕೋಮಿನ ಮತಗಳನ್ನು ಒಡೆಯಬೇಕು ಎಂಬ ಕಾರಣಕ್ಕಾಗಿಯೆ ಕೆಲವರು ಪಂಪನಗೌಡರನ್ನು ನಿಲ್ಲಿಸಿದ್ದಾರೆ. ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಶೀಘ್ರ ಬಯಲಿಗೆ ಎಳೆಯುವುದಾಗಿ ಗದ್ದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT