ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯರ್ ಸಾಗಿಸಲು ಯುರೋಪ್‌ಗೆ ವಿಮಾನ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಐರೋಪ್ಯ ದೇಶಗಳ ನಡುವೆ ಸರಕು, ಕೊರಿಯರ್ ಸಾಗಣೆಗಾಗಿ ಟಿಎನ್‌ಟಿ ಎಕ್ಸ್‌ಪ್ರೆಸ್ ಈಗ ಪ್ರತ್ಯೇಕ ಸರಕು ಸಾಗಣೆ ವಿಮಾನ ಸೇವೆ ಆರಂಭಿಸಿದೆ. ಇದು ವಾರಕ್ಕೆ ಐದು ದಿನ ದೆಹಲಿ ಮತ್ತು ಮತ್ತು ಬೆಲ್ಜಿಯಂ ನಡುವೆ ಸಂಚರಿಸಲಿದೆ. ಹಿಂತಿರುಗುವಾಗ ದುಬೈನಲ್ಲಿ ಇಳಿಯಲಿದೆ.

 ಈ ನೂತನ ಸೇವೆಯಿಂದ ಒಂದು ವಾರದಲ್ಲಿ 210 ಟನ್‌ಗಳಷ್ಟು ಸರಕು, ಪತ್ರಗಳನ್ನು ರವಾನಿಸಲು ಸಾಧ್ಯವಾಗಲಿದೆ. ಭಾರತದಿಂದ ಒಂದೇ ದಿನದಲ್ಲಿ ಯುರೋಪ್‌ಗೆ ಸರಕು ತಲುಪುತ್ತದೆ ಎಂದು ಟಿಎನ್‌ಟಿಯ ವ್ಯವಸ್ಥಾಪಕ ನಿರ್ದೇಶಕ ಅಭಿಕ್ ಮಿತ್ರಾ ಹೇಳುತ್ತಾರೆ.

ಟಿಎನ್‌ಟಿ ಎಕ್ಸ್‌ಪ್ರೆಸ್ ವಿಶ್ವದ ಪ್ರಮುಖ ಎಕ್ಸ್‌ಪ್ರೆಸ್ ಡೆಲಿವರಿ ಸೇವಾ ಸಂಸ್ಥೆಗಳಲ್ಲಿ ಒಂದು. ಒಂದು ವಾರದಲ್ಲಿ ವಿಶ್ವದ ಎಲ್ಲ ದೇಶಗಳಿಗೆ 47 ಲಕ್ಷ ಪಾರ್ಸಲ್, ಸರಕುಗಳನ್ನು ತಲುಪಿಸುತ್ತದೆ. ಒಟ್ಟೂ 83 ಸಾವಿರ ಉದ್ಯೋಗಿಗಳು 30 ಸಾವಿರ ವಾಹನಗಳು ಮತ್ತು 50 ವಿಮಾನಗಳನ್ನು ಹೊಂದಿದೆ. ಮಾಹಿತಿಗೆ: www.tnt.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT