ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಮತ್ತೊಂದು ಜಯ

ಕೀರನ್ ಪೊಲಾರ್ಡ್ ಶತಕ ವ್ಯರ್ಥ
Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸಿಡ್ನಿ: ಪ್ರವಾಸಿ ವೆಸ್ಟ್‌ಇಂಡೀಸ್ ತಂಡದ ಮತ್ತೊಂದು ಪ್ರಯತ್ನವೂ ವಿಫಲವಾಗಿದೆ. ಏಕೆಂದರೆ ಕಾಂಗರೂ ನಾಡಿನಲ್ಲಿ ಈ ತಂಡದ ಸೋಲಿನ ಸರಪಳಿಗೆ ಮತ್ತೊಂದು ಕೊಂಡಿ ಸೇರಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಕೆರಿಬಿಯನ್ ಬಳಗ 5 ವಿಕೆಟ್‌ಗಳ ಸೋಲು ಕಂಡಿದೆ.

ಈ ಮೂಲಕ ಆತಿಥೇಯ ಆಸ್ಟ್ರೇಲಿಯಾ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ವಿಂಡೀಸ್ ನೀಡಿದ 221 ರನ್‌ಗಳ ಗುರಿಯನ್ನು ಆಸೀಸ್ ಬಳಗ 44.5 ಓವರ್‌ಗಳಲ್ಲಿ 5 ವಿಕೆಟ್ ಕಳೆದು ಕೊಂಡು ತಲುಪಿತು. ಕೀರನ್ ಪೊಲಾರ್ಡ್ (ಔಟಾಗದೆ 109) ಅವರ ಶತಕದ ಪ್ರಯತ್ನ ವ್ಯರ್ಥವಾಯಿತು.

ವಿಂಡೀಸ್ ನೀಡಿದ ಸುಲಭ ಗುರಿ ಆಸ್ಟ್ರೇಲಿಯಾಕ್ಕೆ ಅಷ್ಟೇನು ಸವಾಲಾಗಲಿಲ್ಲ. ಏಕೆಂದರೆ ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ ಹಾಗೂ ಆ್ಯರನ್ ಫಿಂಚ್ ಉತ್ತಮ ಆರಂಭ ನೀಡಿದರು. ವಾಟ್ಸನ್ 84 ಎಸೆತಗಳಲ್ಲಿ 76 ರನ್ ಗಳಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಕೂಡ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ವಿಂಡೀಸ್ ಕೇವಲ 98 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಪೊಲಾರ್ಡ್ ತಂಡಕ್ಕೆ ಆಸರೆಯಾದರು. 136 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಹಾಗೂ 2 ಸಿಕ್ಸರ್ ಎತ್ತಿದರು. ಮಿಷೆಲ್ ಜಾನ್ಸನ್ (36ಕ್ಕೆ3) ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರ್: ವೆಸ್ಟ್‌ಇಂಡೀಸ್: 49.4 ಓವರ್‌ಗಳಲ್ಲಿ 220 (ಕೀರನ್ ಪೊಲಾರ್ಡ್ ಔಟಾಗದೆ 109, ಡರೆನ್ ಸಾಮಿ 25, ಸುನಿಲ್ ನಾರಾಯಣ್ 23; ಮಿಷೆಲ್ ಜಾನ್ಸನ್ 36ಕ್ಕೆ3, ಬೆನ್ ಕಟಿಂಗ್ 45ಕ್ಕೆ3); ಆಸ್ಟ್ರೇಲಿಯಾ: 44.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 (ಶೇನ್ ವಾಟ್ಸನ್ 76, ಆ್ಯರನ್ ಫಿಂಚ್ 25, ಮೈಕಲ್ ಕ್ಲಾರ್ಕ್ 37, ಆ್ಯಡಮ್  ವೋಗ್ಸ್ 28; ಟಿನೊ ಬೆಸ್ಟ್ 38ಕ್ಕೆ2, ಸುನಿಲ್ ನಾರಾಯಣ್ 34ಕ್ಕೆ2);

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ವಿಕೆಟ್ ಜಯ ಹಾಗೂ 5 ಪಂದ್ಯಗಳ ಸರಣಿಯಲ್ಲಿ 4-0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಪೊಲಾರ್ಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT