ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಬೃಹತ್ ಮೊತ್ತದತ್ತ ಶ್ರೀಲಂಕಾ ತಂಡ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೊಲಂಬೊ (ಎಎಫ್‌ಪಿ): ತಿಲಕರತ್ನೆ ದಿಲ್ಯಾನ್ (83), ಆ್ಯಂಜೆಲೊ ಮ್ಯಾಥ್ಯುಸ್ (85) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕುವತ್ತ ದಾಪುಗಾಲಿಟ್ಟಿದ್ದಾರೆ.

ಶನಿವಾರದ ಅಂತ್ಯಕ್ಕೆ 65 ಓವರ್‌ಗಳಲ್ಲಿ 2 ವಿಕೆಟ್‌ಗೆ 166 ರನ್ ಗಳಿಸಿದ್ದ ಆತಿಥೇಯ ತಂಡ ಮೂರನೇ ದಿನ ವೇಗವಾಗಿ ರನ್ ಗಳಿಸುವತ್ತ ಗಮನ ಹರಿಸಿತು. ಐದನೇ ವಿಕೆಟ್‌ಗೆ ದಿಲ್ಯಾನ್ ಹಾಗೂ ಮ್ಯಾಥ್ಯುಸ್ 121 ರನ್‌ಗಳ ಜೊತೆಯಾಟವಾಡಿದರು. ಈ ಪರಿಣಾಮ ಲಂಕಾ ತಂಡ ಭಾನುವಾರದ ಅಂತ್ಯಕ್ಕೆ 155 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 428 ರನ್ ಗಳಿಸಿದೆ. ಈ ಮೂಲಕ 112 ರನ್‌ಗಳ ಮುನ್ನಡೆ ಸಾಧಿಸಿತು.

ಭೋಜನ ವಿರಾಮದ ವೇಳೆಗೆ ಆತಿಥೇಯ ಲಂಕಾ ತಂಡ 92 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತ್ತು. ಸಂಗಕ್ಕಾರ 79ರನ್ ಗಳಿಸಿದ್ದಾಗ ಸಿಡ್ಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮಾಹೇಲ ಜಯವರ್ಧನೆ ಅರ್ಧಶತಕ ಗಳಿಸಿ 77ನೇ ಓವರ್‌ನಲ್ಲಿ ಔಟ್ ಆದರು.

ಸೊಗಸಾದ ಬ್ಯಾಟಿಂಗ್ ಮಾಡಿದ ತಿಲಕರತ್ನೆ ದಿಲ್ಯಾನ್ 131 ಎಸೆತಗಳಲ್ಲಿ 14 ಬೌಂಡರಿ ಸೇರಿದಂತೆ 83 ರನ್ ಗಳಿಸಿ ಆತಿಥೇಯ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.  ಪ್ರಸನ್ನ ಜಯವರ್ಧನೆ ಅರ್ಧ ಶತಕದ ಹೊಸ್ತಿಲಲ್ಲಿದ್ದಾಗ ಟ್ರೆಂಟ್ ಕೊಪ್‌ಲೆಂಡ್ ಎಸೆತದಲ್ಲಿ ಮೈಕಲ್ ಕ್ಲಾರ್ಕ್‌ಗೆ ಕ್ಯಾಚ್ ನೀಡಿದರು. ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ 316 ರನ್ ಗಳಿಸಿದೆ.

ಸ್ಕೋರು: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 104.3 ಓವರ್‌ಗಳಲ್ಲಿ 316. ಶ್ರೀಲಂಕಾ 155 ಓವರ್‌ಗಳಲ್ಲಿ 6 ವಿಕೆಟ್‌ಗೆ 428 (ಸಂಗಕ್ಕಾರ 79,  ಮಾಹೇಲ ಜಯವರ್ಧನೆ 51, ತಿಲಕರತ್ನೆ ದಿಲ್ಶಾನ್ 83, ಆ್ಯಂಜೆಲೊ ಮ್ಯಾಥ್ಯುಸ್ ಔಟಾಗದೇ 85, ಪ್ರಸನ್ನ ಜಯವರ್ಧನೆ 47, ಶಮಿಂದಾ ಇರಂಗಾ ಬ್ಯಾಟಿಂಗ್ 5; ಟ್ರೆಂಟ್ ಕೊಪ್‌ಲೆಂಡ್ 70ಕ್ಕೆ2, ಪೀಟರ್ ಸಿಡ್ಲೆ 76ಕ್ಕೆ2, ಮಿಷೆಲ್ ಜಾನ್ಸನ್ 116ಕ್ಕೆ1, ಶೇನ್ ವ್ಯಾಟ್ಸನ್ 53ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT