ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸೋಲಿನತ್ತ ಭಾರತ ಎ

Last Updated 12 ಜೂನ್ 2012, 19:30 IST
ಅಕ್ಷರ ಗಾತ್ರ

ಕಿಂಗ್ಸ್‌ಟೌನ್: ಭಾರತ `ಎ~ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ `ಎ~ ತಂಡದ ವಿರುದ್ಧ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ವಿಂಡೀಸ್ ನೀಡಿರುವ 220 ರನ್‌ಗಳ ಗುರಿ ಬೆನ್ನಟ್ಟಿರುವ ಭಾರತ ನಾಲ್ಕು ದಿನಗಳ ಈ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 57 ರನ್ ಗಳಿಸಿದೆ. ಒಂದು ದಿನದ ಆಟ ಬಾಕಿ ಉಳಿದಿದ್ದು ಗೆಲುವಿಗಾಗಿ ಇನ್ನೂ 163 ರನ್ ಗಳಿಸಬೇಕಾಗಿದೆ.

ಡೆಲೋರ್ನ್ ಜಾನ್ಸನ್ (20ಕ್ಕೆ4) ಅವರ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ಕೇವಲ 30 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಮನೋಜ್ ತಿವಾರಿ (ಬ್ಯಾಟಿಂಗ್15) ತಂಡಕ್ಕೆ ಆಸರೆಯಾದರು.

ಆತಿಥೇಯ ವಿಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 204 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪ್ರವಾಸಿ ತಂಡದ ಅಕ್ಷಯ್ ದಾರೇಕರ್ (67ಕ್ಕೆ6) ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು. ವಿಂಡೀಸ್‌ನ ಜೊನಾಥನ್ ಕಾರ್ಟರ್ (74) ಹಾಗೂ ಡೊನೊವನ್ ಪಗೊನ್ (67) ಮಿಂಚಿದರು. 

 ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ `ಎ~ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 217 ಹಾಗೂ 71.3 ಓವರ್‌ಗಳಲ್ಲಿ 204 (ಕ್ರೇಗ್ ಬ್ರೇಥ್‌ವೇಟ್ 21, ಜೊನಾಥನ್ ಕಾರ್ಟರ್ 74, ಡೊನೊವನ್ ಪಗೊನ್ 67; ಅಕ್ಷಯ್ ದಾರೇಕರ್ 67ಕ್ಕೆ6, ರೋಹಿತ್ ಶರ್ಮ 47ಕ್ಕೆ2); ಭಾರತ `ಎ~ ಮೊದಲ ಇನಿಂಗ್ಸ್: 79.2 ಓವರ್‌ಗಳಲ್ಲಿ 202 ಹಾಗೂ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 57 (ಮನೋಜ್ ತಿವಾರಿ ಬ್ಯಾಟಿಂಗ್ 15; ಡೆಲೋರ್ನ್ ಜಾನ್ಸನ್ 20ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT