ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಜಿಂಬಾಬ್ವೆ ತಂಡ ಸಾಧಾರಣ ಮೊತ್ತ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹರಾರೆ (ಎಎಫ್‌ಪಿ): ಹ್ಯಾಮಿಲ್ಟನ್‌ ಮಸಕಜ (75) ಮತ್ತು ನಾಯಕ ಬ್ರೆಂಡನ್‌ ಟೇಲರ್‌ (51) ಗಳಿಸಿದ ಅರ್ಧಶತಕದ ನೆರವಿನಿಂದ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಾಣುವ ಅಪಾಯದಿಂದ ಪಾರಾಗಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 237 ರನ್‌ ಗಳಿಸಿದೆ.

ಟಾಸ್‌ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ತಂಡದ ಆರಂಭ ಆಘಾತಕಾರಿಯಾಗಿತ್ತು. ಟಿನೊ ಮವೊಯೊ ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಔಟಾದರು. ಜುನೈದ್‌ ಖಾನ್‌ (55ಕ್ಕೆ 3) ಎದುರಾಳಿ ತಂಡಕ್ಕೆ ಆಘಾತ ನೀಡಿದರು.

ತಂಡದ ಮೊತ್ತ 31 ಆಗಿದ್ದಾಗ ವುಸಿ ಸಿಬಾಂಡ (14) ಔಟಾದರು. ಈ ಹಂತದಲ್ಲಿ ಜೊತೆಯಾದ ಮಸಕಜ ಮತ್ತು ಟೇಲರ್‌ ಮೂರನೇ ವಿಕೆಟ್‌ಗೆ 110 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು.

169 ಎಸೆತಗಳನ್ನು ಎದುರಿಸಿದ ಮಸಕಜ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಆದರೆ ಈ ಜೊತೆಯಾಟ ಮುರಿದ ಬಳಿಕ ಪಾಕ್‌ ಬೌಲರ್‌ಗಳು  ಮೇಲುಗೈ ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 237 (ವುಸಿ ಸಿಬಾಂಡ 14, ಹ್ಯಾಮಿಲ್ಟನ್‌ ಮಸಕಜ 75, ಬ್ರೆಂಡನ್‌ ಟೇಲರ್‌ 51, ಮಾಲ್ಕಂ ವಾಲೆರ್‌ 23, ಪ್ರಾಸ್ಪರ್‌ ಉತ್ಸೆಯಾ ಬ್ಯಾಟಿಂಗ್‌ 14, ಜುನೈದ್‌ ಖಾನ್‌ 55ಕ್ಕೆ 3, ರಾಹತ್‌ ಅಲಿ 48ಕ್ಕೆ 2, ಅಬ್ದುರ್‌ ರಹ್ಮಾನ್‌ 37ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT