ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣಕೂಡ ಸ್ಮಾರ್ಟ್‌ಫೋನ್ ಬಿಟ್ಟಿರದ ಅಮೆರಿಕನ್ನರು!

Last Updated 15 ಮೇ 2012, 19:30 IST
ಅಕ್ಷರ ಗಾತ್ರ

`ಅಮೆರಿಕನ್ನರು ಸ್ಮಾರ್ಟ್‌ಫೋನ್ ಬಿಟ್ಟು ಒಂದು ಕ್ಷಣವೂ ಇರಲಾರರು~ ಎನ್ನುತ್ತದೆ ಹೊಸ ಅಧ್ಯಯನ.

ಸಭೆ ಸಮಾರಂಭಗಳನ್ನು ಆಯೋಜಿಸಲು, ಹೋಟೆಲ್, ರೆಸ್ಟೋರೆಂಟ್ ಮಾಹಿತಿ ತಿಳಿಯಲು, ವಾಣಿಜ್ಯ ಭೇಟಿ ನಿಗದಿಪಡಿಸಲು, ವಿಳಾಸ ಹುಡುಕಲು, ಆಟಗಳ ಸ್ಕೋರ್ ತಿಳಿಯಲು  ಕೊನೆಗೆ ಗಂಡ-ಹೆಂಡತಿ ತಮ್ಮ ಜಗಳ ಬಗೆಹರಿಸಿಕೊಳ್ಳಲು ಸಹ  ಸ್ಮಾರ್ಟ್‌ಫೋನ್ ಬಳಸುತ್ತಾರಂತೆ!

`ದ ಪೀವ್ ಇಂಟರ್‌ನೆಟ್ ಅಂಡ್ ಅಮೆರಿಕನ್ ಲೈಫ್ ಪ್ರಾಜೆಕ್ಟ್~ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿಗಳು ಬೆಳಕಿಗೆ ಬಂದಿವೆ. ಸ್ಮಾರ್ಟ್‌ಫೋನ್ ಮೂಲಕ ಅಮೆರಿಕನ್ನರು ನಿತ್ಯ ಮಾಡುವ ಏಳು ಪ್ರಮುಖ ಕೆಲಸಗಳನ್ನು ಸಮೀಕ್ಷಾ ತಂಡ ಹೀಗೆ ಪಟ್ಟಿ ಮಾಡಿದೆ. ಈ ಮೇಲಿನವುಗಳಲ್ಲಿ ಕನಿಷ್ಠ 2 ಕೆಲಸಗಳನ್ನಾದರೂ ಪ್ರತಿನಿತ್ಯ ಸ್ಮಾರ್ಟ್‌ಫೋನ್ ಮೂಲಕವೇ ಅಮೆರಿಕನ್ನರು ಮಾಡುತ್ತಾರಂತೆ.

ಅಮೆರಿಕದಲ್ಲಿ ಶೇ 62ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಮಧ್ಯವಯಸ್ಕರು. ಅಂದರೆ 35ರಿಂದ 65 ವರ್ಷದೊಳಗಿನವರು. 18ರಿಂದ -29 ವರ್ಷದ ನಡುವೆ ಇರುವ ಯುವಸಮೂಹದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಶೇ 88ರಷ್ಟಿದೆ.

ಇವರಲ್ಲಿ ಶೇ 65ರಷ್ಟು ಜನ ಸ್ಮಾರ್ಟ್‌ಫೋನ್ ಮೂಲಕ `ನೇವಿಗೇಶನ್~ ಅಪ್ಲಿಕೇಷನ್ ಹೆಚ್ಚು ಬಳಸುತ್ತಾರೆ. ಒಟ್ಟಿನಲ್ಲಿ ಸ್ಮಾರ್ಟ್‌ಫೋನ್‌ಎನ್ನುವುದು ಅಮೆರಿಕನ್ನರ ಆತ್ಮದೊಳಗೂ ಸೇರಿಕೊಂಡು ಬಿಟ್ಟಿದೆ!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT