ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಚರೋತ್ಸವ ನೃತ್ಯ ವೈವಿಧ್ಯ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಖೇಚರ ಭರತನಾಟ್ಯ ಅಕಾಡೆಮಿಯು ತನ್ನ 18ನೇ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ (ಮೇ12) `ಖೇಚರೋತ್ಸವ~ ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

ನಗರದಲ್ಲಿ `ಖೇಚರ ಭರತನಾಟ್ಯ ಅಕಾಡೆಮಿ~ ಮೂಲಕ ನೃತ್ಯಾಸಕ್ತರಿಗೆ ಭರತನಾಟ್ಯ ಶಿಕ್ಷಣ ನೀಡುತ್ತಿರುವ ನಟ ಶ್ರೀಧರ್ ಮತ್ತು ಅನುರಾಧಾ ದಂಪತಿ ವಿದೇಶಿ ಕಲಾವಿದರನ್ನೂ ಸೆಳೆದಿದೆ. ಈ ಕಾರಣಕ್ಕಾಗಿ ಅಕಾಡೆಮಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರೂ ಬಂದಿರುವ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಕಲಾವಿದರನ್ನು ತಯಾರುಗೊಳಿಸಿದ ಹೆಮ್ಮೆ ಈ ಸಂಸ್ಥೆಯದು.

ಶ್ರೀಧರ್ ಮತ್ತು ಅನುರಾಧಾಗೆ ಆರಂಭಿಕ ನಾಟ್ಯಶಿಕ್ಷಣ ನೀಡಿದವರು  ನೃತ್ಯಗುರು ರಾಧಾ ಶ್ರೀಧರ್. ಚೆನ್ನೈನ ಕಲಾಕ್ಷೇತ್ರದ ಕೃಷ್ಣಮೂರ್ತಿ ಮತ್ತು ಕೃಷ್ಣವೇಣಿ ಲಕ್ಷ್ಮಣನ್ ಅವರ ಬಳಿ ಉನ್ನತ ಶಿಕ್ಷಣ ಪಡೆದಿದ್ದು ದೇಶವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರತಿಭೆಗೆ ತಕ್ಕ ಪ್ರಶಸ್ತಿಗಳೂ ಸಂದಿವೆ.

`ಖೇಚರೋತ್ಸವ~ದಲ್ಲಿ ಮೃದಂಗ ವಿದ್ವಾಂಸ ಜಿ.ಗುರುಮೂರ್ತಿ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ನೃತ್ಯಕಲಾ ಪರಿಷತ್ ಅಧ್ಯಕ್ಷೆ ನೃತ್ಯಗುರು ಲಲಿತಾ ಶ್ರೀನಿವಾಸ್, ಕಲಾ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್ ಅತಿಥಿಗಳು. ಅಕಾಡೆಮಿಯ ಐವತ್ತು ಮಂದಿ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ. ಸಂಜೆ 6.15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT