ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿ ಕಾರ್ಯದಿಂದ ಪಾಠ ಪ್ರವಚನಕ್ಕೆ ಅಡ್ಡಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಜನಗಣತಿಯು ನಾಳೆಯಿಂದ 28ರವರೆಗೆ ನಡೆಯುತ್ತಿರುವುದು ಸಂತೋಷದ ವಿಷಯ. ಈ ಕಾರ್ಯಕ್ಕೆ ಬಹುಪಾಲು ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳುವುದರಿಂದ ಪಾಠ ಪ್ರವಚನಗಳು, ಪರೀಕ್ಷಾ ಸಿದ್ಧತೆಗಳಲ್ಲಿ ತೊಡಗಬೇಕಾದ ಶಿಕ್ಷಕರಿಗೆ ಈ ಎರಡೆರಡು ಕಾರ್ಯಗಳು ಮಾನಸಿಕ ಒತ್ತಡವನ್ನುಂಟು ಮಾಡುವುದಿಲ್ಲವೆ?

ಕೆಲವು ಕಡೆ ಬೆಳಗಿನ ಒಂದು ಅವಧಿಯನ್ನು ಮಾತ್ರ ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಕೆಲವು ಕಡೆ ದಿನಬಿಟ್ಟು ದಿನ ಗಣತಿ ನಿರ್ವಹಿಸಿ, ಉಳಿದ ದಿನಗಳು ಶಾಲೆಯಲ್ಲಿರುವಂತೆ ತಿಳಿಸಲಾಗಿದೆ. ಇದು ಸಾಧ್ಯವೆ? ಎರಡು ಕೆಲಸಗಳ ಒತ್ತಡದಲ್ಲಿರುವ ಶಿಕ್ಷಕರಿಂದ ಜವಾಬ್ದಾರಿ ನಿರ್ವಹಣೆ ಕಷ್ಟವಲ್ಲವೆ?

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ, ಪೋಷಕರಿಗೆ ತಿರಸ್ಕಾರ ಭಾವನೆ ಇದೆ. ಕಾರಣ, ಶಿಕ್ಷಕರು ಶೈಕ್ಷಣಿಕ ಕೆಲಸಗಳಿಗಿಂತ ಶಿಕ್ಷಣೇತರ ಕಾರ್ಯಗಳಲ್ಲಿಯೇ ತೊಡಗಿ, ಬೋಧನೆಯನ್ನು ಪರಿಣಾಮಕಾರಿಯನ್ನಾಗಿಸಲು ಕಷ್ಟಪಡುತ್ತಿದ್ದಾರೆ. ಸಭೆಗಳು, ತರಬೇತಿಗಳು, ಗಣತಿ, ಚುನಾವಣೆ, ಬಿಸಿಯೂಟ ನಿರ್ವಹಣೆ, ಕಾಮಗಾರಿ, ದಾಖಲೆಗಳ ನಿರ್ವಹಣೆ ಹೀಗೆ ಶಿಕ್ಷಕರ ಜವಾಬ್ದಾರಿ ಬೆಳೆಯುತ್ತಲೇ ಇರುತ್ತದೆ.

ಗಣತಿ ಕಾರ್ಯವನ್ನು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಸಬಹುದಿತ್ತಲ್ಲವೆ? ಅದನ್ನು ಬಿಟ್ಟು ಶಾಲಾ ಕಾಲೇಜುಗಳಲ್ಲಿ ಪರೀಕ್ಷಾ ಕಾರ್ಯಗಳು ಪ್ರಾರಂಭವಾಗುವ ಇಂಥ ಸಮಯದಲ್ಲಿ ನಡೆಸುವುದು  ಎಷ್ಟು ಸರಿ? ಕೆಲವು ಶಾಲೆಗಳಲ್ಲಿ ಇಬ್ಬರು, ಮೂವರು ಶಿಕ್ಷಕರಿದ್ದು, ಬಹುಪಾಲು ಶಿಕ್ಷಕರಿಗೆ  ಗಣತಿಕಾರ್ಯ ಮಾಡಲು ಆದೇಶ ಬಂದಿದೆ. ಹೀಗಾದಾಗ ಶಾಲೆಯ ಗತಿ ಏನು? ಸಂಬಂಧಿಸಿದವರು ಇತ್ತ ಗಮನಹರಿಸುವರೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT