ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮೂರ್ತಿ ವಿಸರ್ಜನೆ

Last Updated 7 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ವಿವಿಧೆಡೆ ಐದು ದಿನ ಪ್ರತಿಷ್ಠಾಪಿಸಿ ಪೂಜಿಸಿದ ಗಣೇಶನ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಸೋಮವಾರ ಸಂಜೆಯಿಂದ ರಾತ್ರಿವರೆಗೆ ನಡೆಯಿತು.

ಇಲ್ಲಿನ ರಿಕ್ಷಾ ಚಾಲಕ ಮಾಲಕ ಸಂಘ, ಕೆ.ಎಸ್. ಆರ್.ಟಿ.ಸಿ ನೌಕರರ ಸಂಘ, ಮಣಕುಳಿ ಯುವಕ ಸಂಘ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಿದ್ದ  ಗಣೇಶನ ಮೂರ್ತಿಗಳನ್ನು ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡಿ, ತಾಲ್ಲೂಕಿನ ಚೌಥನಿಯ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಪಟಾಕಿಗಳನ್ನು ಸಿಡಿಸಿ, ಬಣ್ಣ ಎರಚಿಕೊಳ್ಳುತ್ತ ಸೋಮವಾರ ರಾತ್ರಿಯಿಡೀ ಅದ್ದೂರಿ ಮೆರವಣಿಗೆ ಮಾಡಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.

ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಗಳ ಜತೆಯಲ್ಲೇ, ಗ್ರಾಮೀಣ ಭಾಗಗಳಾದ ಮುಂಡಳ್ಳಿ, ಶಿರಾಲಿ, ನೀರಕಂಠ, ಮುರ್ಡೇಶ್ವರದ ನ್ಯಾಶನಲ್ ಕಾಲೊನಿ, ಬೈಲೂರು ಮಡಿಕೇರಿ, ಮಠದಹಿತ್ಲು, ಯಕ್ಷೆಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಗಳನ್ನು ಸಮೀಪದ, ಕೆರೆ, ಹೊಳೆ, ಸಮುದ್ರದಲ್ಲಿ ವಿಸರ್ಜಿಸಲಾಯಿತು.
 
ಡಿಎಸ್‌ಪಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಸಿ.ಪಿ.ಐ ಶಿವಪ್ರಕಾಶ ನಾಯ್ಕ, ಎಸ್‌ಐಗಳಾದ ಪ್ರಕಾಶ ದೇವಾಡಿಗ, ಸುರೇಶ ನಾಯಕ, ಉಮೇಶ ಕಾಂಬಳೆ ಮತ್ತು ಸಿಬ್ಬಂದಿ  ಬಂದೋಬಸ್ತ್ ಏರ್ಪಡಿಸಿದ್ದರು.

ಬುಧವಾರ ಮುರ್ಡೇಶ್ವರದ ಓಲಗ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶನ ಮೂರ್ತಿ ವಿಸರ್ಜನೆ ನಡೆಯುವ ಮೂಲಕ ತಾಲ್ಲೂಕಿನ ಎಲ್ಲಾ ಗಣೇಶನ ಮೂರ್ತಿಗಳ ವಿಸರ್ಜನಾ ಕಾರ್ಯ ಸಂಪನ್ನಗೊಳ್ಳಲಿದೆ.

ಗವ್ಯ ಉತ್ಪನ್ನಗಳ ಪ್ರದರ್ಶನ: ತಾಲ್ಲೂಕಿನ ಮುರ್ಡೇಶ್ವರದ ಓಲಗ ಮಂಟಪದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಎಲ್ಲರ ಗಮನ ಸೆಳೆಯುತ್ತಿದೆ.

ಮುರ್ಡೇಶ್ವರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು 35ನೇ ವರ್ಷದ ಉತ್ಸವವನ್ನು ಅದ್ದೂರಿಯಿಂದ 7 ದಿನ ನಡೆಸುತ್ತಿದ್ದಾರೆ.ಈ ಉತ್ಸವದಲ್ಲಿ ಸುರಿಯುವ ಮಳೆಯ ನಡುವೆಯೂ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ,ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಆಕರ್ಷಿಸುತ್ತಿದೆ.

ಇದರ ಜತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹೊನ್ನಾವರ ಹವ್ಯಕ ಮಂಡಳದವರು ಮಹನಂದಿ ವರ್ಷದ ಅಂಗವಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದವರ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯು ಎಲ್ಲರನ್ನೂ ಆಕರ್ಷಿಸುತ್ತಿದೆ.
 
ಗವ್ಯದ ಉತ್ಪನ್ನಗಳ ಉಪಯುಕ್ತತೆಯ ಬಗ್ಗೆ ವಿವರ ನೀಡುವ ಸಮಿತಿಯ ಅಧ್ಯಕ್ಷ ಶಂಕರ ಎನ್ ಭಟ್ರಹಿತ್ಲು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT