ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: ಇಂದಿನ ವಿಶೇಷ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶ್ರೀ ವಿದ್ಯಾಗಣಪತಿ ಭಕ್ತ ಮಂಡಳಿ: ಜೂಗನಹಳ್ಳಿ, ರಾಜಾಜಿನಗರ. ಸಂಜೆ 7ಕ್ಕೆ ಚಿನ್ನರ್‌ ನಾಗೇಶ್‌ ತಂಡದವರಿಂದ ನೃತ್ಯ.
ಲಕ್ಕಸಂದ್ರ ಶ್ರೀ ವಿನಾಯಕ ಗೆಳೆಯರ ಬಳಗ: 8ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಲಕ್ಕಸಂದ್ರ. ಸಂಜೆ 7ಕ್ಕೆ ಯಾದವ್‌ ಮೆಲೋಡಿಸ್‌ ತಂಡದಿಂದ ವಾದ್ಯಗೋಷ್ಠಿ.

ಶ್ರೀ ವಿನಾಯಕ ಯುವಕರ ಸಂಘ: 13ನೇ ಅಡ್ಡರಸ್ತೆ, ಕಬ್ಬನ್‌ಪೇಟೆ. ಬೆಳಿಗ್ಗೆ 11ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 2ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 6ಕ್ಕೆ ಗಣಪತಿ ಮೂರ್ತಿ ವಿಸರ್ಜನೆ.

ಶ್ರೀ ಶಾರದಾ ಸಾಂಸ್ಕೃತಿಕ ಸಂಘ: ಬಸವೇಶ್ವರನಗರ. ಗಣೇಶೋತ್ಸವದ ಅಂಗವಾಗಿ ಸಂಗೀತ ಕಛೇರಿ. ಸಂಜೆ 6.30ಕ್ಕೆ ಎಸ್‌.ಎಂ. ನಾಗಚೇತನ್‌ ಅವರಿಂದ ಗಾಯನ. ಅರ್ಜುನ ದಿನಕರ್‌ (ವಯಲಿನ್‌),

ಕೆ.ವಿ ರವಿಶಂಕರ್‌ ಶರ್ಮಾ ಅವರಿಂದ (ಮೃದಂಗ), ಜಿ.ಎಸ್‌.ನಾಗರಾಜ್‌ (ಖಂಜರಿ). ಸಂಜೆ 7.30ಕ್ಕೆ ಶ್ರೀರಾಮ ಶಾಸ್ತ್ರಿ ಅವರಿಂದ ಗಾಯನ, ಅರ್ಜುನ ದಿನಕರ್‌ (ವಯಲಿನ್‌), ಕೆ.ವಿ ರವಿಶಂಕರ್‌ ಶರ್ಮಾ ಅವರಿಂದ (ಮೃದಂಗ), ಜಿ.ಎಸ್‌. ನಾಗರಾಜ್‌ (ಖಂಜರಿ).
ಶ್ರೀ ವಿನಾಯಕ ಚೌತಿ ಮಹೋತ್ಸವ ಸಮಿತಿ: ಶ್ರೀ ಕುಮಾರವ್ಯಾಸ ಮಂಟಪ, 58ನೇ ಅಡ್ಡರಸ್ತೆ, 4ನೇ ವಿಭಾಗ, ರಾಜಾಜಿನಗರ. ಬೆಳಿಗ್ಗೆ ‘ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ.

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ: 6ನೇ ಬ್ಲಾಕ್‌, ರಾಜಾಜಿನಗರ. ಗಣಪತಿ ಪೂಜಾ ಮಹೋತ್ಸವದಲ್ಲಿ ಆರ್‌.ಪಿ.ಎ. ನೃತ್ಯ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’. ಗೋಪುರಂ ಶಿಲ್ಪಿ ಪಿ. ಮಾಯಲಗು ಅವರಿಗೆ ಸನ್ಮಾನ. ಸಂಜೆ 7.

ವರಸಿದ್ಧಿ ವಿನಾಯಕ ಗೆಳೆಯರ ಬಳಗ: ರಾಘವೇಂದ್ರ ಕಾಲೊನಿ, ಚಾಮರಾಜಪೇಟೆ. 7ನೇ ವರ್ಷದ ಮಹಾಗಣಪತಿ ಉತ್ಸವದಲ್ಲಿ ಬೆಳಿಗ್ಗೆ 10. 30ಕ್ಕೆ ಮಹಾಗಣಪತಿ ಪ್ರತಿಷ್ಠಾಪನೆ. ಸಂಜೆ 6.30ಕ್ಕೆ ರಾಯಚೂರ್‌ ಶೇಷಗಿರಿದಾಸರು ಮತ್ತು ತಂಡದಿಂದ ದಾಸವಾಣಿ, ರಾತ್ರಿ 8.30ಕ್ಕೆ ಕೇಶವನಿಧಿ ತೀರ್ಥ ಅವರಿಗೆ ತುಲಾಭಾರ.

ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ: ಸಂಘದ ಸಭಾಂಗಣ, ಶೇಷಾದ್ರಿಪುರ. 77ನೇ ವಿದ್ಯಾಗಣಪತಿ ಪೂಜಾ ಮಹೋತ್ಸವದಲ್ಲಿ ಪ್ರತಿಭಾ ನಾಟ್ಯಾಲಯ ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯಾರ್ಪಣ. ಸಂಜೆ 6.
ಶ್ರೀ ವಿನಾಯಕ ದೇವಸ್ಥಾನ ಸಮಿತಿ: 1ನೇ ಅಡ್ಡರಸ್ತೆ, 2ನೇ ಬ್ಲಾಕ್‌, ಆರ್‌.ಟಿ. ನಗರ. 25ನೇ ವಿನಾಯಕ ಚತುರ್ಥಿ ಸಮಾರಂಭ. ಬೆಳಿಗ್ಗೆ 9ಕ್ಕೆ 

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ: ದೊಡ್ಡ ಗಣಪತಿ ದೇವಸ್ಥಾನ, ಬುಲ್‌ಟೆಂಪಲ್‌ ರಸ್ತೆ. 45ನೇ ವರ್ಷದ ಗಣಪತಿ ಉತ್ಸವದಲ್ಲಿ ಟಿ.ಎಸ್‌. ರಮಾ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ. ಸಂಜೆ 6.45.

ಕಣಿಯರ ಸೇವಾ ಸಮಾಜ: ಗಾಯನ ಮಂದಿರ, 74/2, 2ನೇ ಮುಖ್ಯರಸ್ತೆ, ಕಣಿಯರ ಕಾಲೊನಿ, ಚಾಮರಾಜಪೇಟೆ. ವಿದ್ಯಾಗಣಪತಿ ಪೂಜಾ ಮಹೋತ್ಸವದಲ್ಲಿ ಪೂರ್ವಿಕಲಾ ಕೇಂದ್ರದವರಿಂದ ಭಜನೆ. ಸಂಜೆ 6.30.

ವಿಘ್ನೇಶ್ವರ ದೇವಸ್ಥಾನ: 26ನೇ ಮುಖ್ಯರಸ್ತೆ, ಬಿ.ಟಿ.ಎಂ. ಬಡಾವಣೆ, 2ನೇ ಹಂತ. ರಜತಮಹೋತ್ಸವ ಮತ್ತು ಗಣೇಶೋತ್ಸವದಲ್ಲಿ ಧನ್ವಂತರಿ ಹೋಮ. ಬೆಳಿಗ್ಗೆ 9.

ಶ್ರೀ ವರವೇಂಕಟ ಕೋದಂಡ ರಾಮಭದ್ರ ಕ್ಷೇತ್ರ: 31ನೇ ವರ್ಷದ ವಿದ್ಯಾಗಣಪತಿ ಪೂಜಾ ಮಹೋತ್ಸವದಲ್ಲಿ ಬೆಳಿಗ್ಗೆ 9ಕ್ಕೆ ಪೂಜೆ, ದಾಳಿಂಬೆ ಅಲಂಕಾರ, ಸಂಜೆ 7ಕ್ಕೆ ಜಯಮಣಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ.

ನಿರ್ಮಾಣ್‌ ಶೆಲ್ಟರ್ಸ್‌: ಪುರಂದರ ಮಂಟಪ, ನಿಸರ್ಗ ಬಡಾವಣೆ, ಕೊಪ್ಪಗೇಟ್‌ ಸಮೀಪ, ಬನ್ನೇರುಘಟ್ಟ ಅಂಚೆ. 13ನೇ ಗಣೇಶೋತ್ಸವದಲ್ಲಿ ಸಮೂಹ ಕಲಾವಿದರಿಂದ ‘ಪಾಂಚಾಲಿ’ ಏಕವ್ಯಕ್ತಿ ನೃತ್ಯ ಪ್ರಸ್ತುತಿ ಹಾಗೂ ‘ಕುಚೇಲಕೃಷ್ಣ’ ಗೀತ ರೂಪಕ. ನಿರ್ಮಾಣ, ರಂಗ ನಿರ್ದೇಶನ– ಪ್ರೊ.ಉದ್ಯಾವರ ಮಾಧವ ಆಚಾರ್ಯ. ಸಂಜೆ 6.

ಶ್ರೀ ವಿನಾಯಕ ಸೇವಾ ಸಮಿತಿ: 7ನೇ ‘ಬಿ’ ಮುಖ್ಯ ರಸ್ತೆ, ಜಯನಗರ 4ನೇ ಬಡಾವಣೆ. ಸ್ವರ್ಣಗೌರಿ ಮತ್ತು ವರಸಿದ್ಧಿ ವಿನಾಯಕ ಮಹೋತ್ಸವದಲ್ಲಿ ಬೆಳಿಗ್ಗೆ 7ಕ್ಕೆ ಅಭಿಷೇಕ, ಸಂಜೆ 7ಕ್ಕೆ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್‌ ದಿ ಬ್ಲೈಂಡ್‌ ವಿದ್ಯಾರ್ಥಿಗಳಿಂದ ನೃತ್ಯ ರೂಪಕ.

ಶ್ರೀ ವರಸಿದ್ಧಿ ವಿನಾಯಕ ನಾಟ್ಯರಂಗ ಕಲಾ ಮಂಡಳಿ: 6ನೇ ಅಡ್ಡರಸ್ತೆ, ಬಿ ಮುಖ್ಯರಸ್ತೆ, ಪೈಪ್‌ ಲೈನ್‌, ಮಲ್ಲೇಶ್ವರ. 30ನೇ ವಾರ್ಷಿಕೋತ್ಸವದಲ್ಲಿ ಸಂಜೆ 7ಕ್ಕೆ ವಿನಾಯಕ ಸ್ವಾಮಿಯ ವಿಸರ್ಜನೆ.

ಲೇಕ್‌ ವ್ಯೂ ಮಹಾಗಣಪತಿ ದೇವಾಲಯ ಟ್ರಸ್ಟ್‌: ಟ್ಯಾಂಕ್‌ ರಸ್ತೆ, ಹಲಸೂರು ಕೆರೆ. 27ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ 8ಕ್ಕೆ ಮಹಾ ಚಂಡಿಕಾ ಹೋಮ ಹಾಗೂ ಸಂಜೆ 6ಕ್ಕೆ ಕಲ್ಯಾಣೋತ್ಸವ.

ಅಡ್ವೊಕೇಟ್ಸ್‌ ಫ್ರೆಂಡ್ಸ್‌ ಸರ್ಕಲ್‌ ಹಾಗೂ ಬೆಂಗಳೂರು ಅಡ್ವೊಕೇಟ್ಸ್‌ ಅಸೋಸಿಯೇಷನ್‌: ಹೈಕೋರ್ಟ್‌ ಆವರಣ. ಗೌರಿ ಗಣೇಶೋತ್ಸವದ ಅಂಗವಾಗಿ ಎಂ.ಎ. ಕುಶಾಲಪ್ಪ ಪುತ್ತೂರ್‌ ಅವರಿಂದ ಭರತನಾಟ್ಯ. ಮಧ್ಯಾಹ್ನ 1.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT