ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಸಂಚಾರಿ ಪ್ರಯೋಗಾಲಯ

Last Updated 4 ಜುಲೈ 2012, 9:35 IST
ಅಕ್ಷರ ಗಾತ್ರ

ಕಮಲನಗರ: ನಿಮ್ಮ ಮಕ್ಕಳಿಗೆ ಉಚಿತವಾಗಿ ವಿಜ್ಞಾನ ಪ್ರಯೋಗಗಳ ಕುರಿತು ಮಾಹಿತಿ ನೀಡಬೇಕೇ.... ಹಾಗಾದರೆ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನಕ್ಕೆ ಸಂಪರ್ಕಿಸಿ.

ರಾಜ್ಯದಲ್ಲಿ ಗ್ರಾಮೀಣ ಭಾಗದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಪ್ರಥಮಾನುಭವವನ್ನುಂಟು ಮಾಡುವ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಬೆಂಗಳೂರು ಇವರು ಅಗಸ್ತ್ಯ ಪ್ರತಿಷ್ಠಾನದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಬೀದರ್ ಜಿಲ್ಲೆಯಲ್ಲಿ ಸಂಚಾರಿ ಪ್ರಯೋಗ ಶಾಲೆಯನ್ನು ಆರಂಭಿಸಿದ್ದಾರೆ.

5ರಿಂದ 10ನೇ ತರಗತಿವರೆಗೆ 120 ಕ್ಕಿಂತ ಹೆಚ್ಚಿನ ಪ್ರಯೋಗಗಳನ್ನು ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ನೀಡುವುದಲ್ಲದೇ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿಸುತ್ತಿದೆ.

ಔರಾದ್ ತಾಲ್ಲೂಕಿನ ಎಲ್ಲ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ 1 ಮೊಬೈಲ್ (ಸಂಚಾರಿ) ವಾಹನದ ವ್ಯವಸ್ಥೆ ಇದೆ. ಈ ವಾಹನದಲ್ಲಿ ಪ್ರಯೋಗಕ್ಕೆ ಅಗತ್ಯವಾದ ಸಲಕರಣೆಗಳು, ಮಾದರಿಗಳು ಇವೆ.

ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ವೇಳೆಯಲ್ಲಿ ಪ್ರತಿಷ್ಠಾನದವರೆ ಬಂದು ಮಕ್ಕಳಿಗೆ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಮಕ್ಕಳಲ್ಲಿ ಮೂಡಿರುವ ವಿವಿಧ ವಿಜ್ಞಾನದ ಪ್ರಯೋಗಗಳ ಕುರಿತು ಮಾಹಿತಿ               ಸಂಗ್ರಹಿಸುತ್ತಾರೆ.

ಪ್ರಯೋಗದ ಕುರಿತು ಮಕ್ಕಳಿಗಿರುವ ಅನುಮಾನಗಳನ್ನು ನಿವಾರಿಸಿ, ವ್ಯವಸ್ಥಿತವಾದ ಕ್ರಮದಲ್ಲಿ ಪ್ರಯೋಗಗಳನ್ನು ಮಾಡುವ ರೀತಿಯನ್ನು ತಿಳಿಸಿ ಪ್ರೋತ್ಸಾಹಿಸುತ್ತಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಶುಲ್ಕ ತೆರಬೇಕಾಗಿಲ್ಲ. ಕೇವಲ ಅವರ ಬುದ್ಧಿಮಟ್ಟ ಖರ್ಚು ಮಾಡಿದರೆ ಸಾಕು.

ಸರ್ಕಾರಿ ಅಲ್ಲದೇ ಖಾಸಗಿ ಶಾಲೆಯ ಮಕ್ಕಳೂ ವಲಯ ಮಟ್ಟದಲ್ಲಿ ಏರ್ಪಡಿಸಿದ `ವಿಜ್ಞಾನ ಮೇಳ~ಗಳಲ್ಲಿ ಪಾಲ್ಗೊಂಡು ಇದರ ಉಪಯೋಗ ಪಡೆಯಬಹುದಾಗಿದೆ ಎಂದು ಪ್ರತಿಷ್ಠಾನದ ಸಿದ್ರಾಮ ಒಳಖಿಂಡೆ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಖತಗಾಂವ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅಗಸ್ತ್ಯ ಪ್ರತಿಷ್ಠಾನದ ಸಂಚಾರಿ ವಿಜ್ಞಾನ ಪ್ರಯೋಗಾಲಯ ಆಗಮಿಸಿತ್ತು. 5, 6 ಮತ್ತು 7 ನೇ               ತರಗತಿ ಮಕ್ಕಳಿಗೆ ಬೆಳಿಗ್ಗೆಯಿಂದ ಶಾಲೆ ಬಿಡುವವರೆಗೂ ವಿಜ್ಞಾನದ ಅನೇಕ ಪ್ರಯೋಗಗಳನ್ನು ಪ್ರತಿಷ್ಠಾನದ               ಸಂಗಮೇಶ ಬಳಿಗೇರ್ ಮಾಡಿ ತೋರಿಸಿದ್ದಲ್ಲದೇ, ವಿದ್ಯಾರ್ಥಿಗಳಿಗೆ ಅನೇಕ ವೈಜ್ಞಾನಿಕ ವಿಷಯಗಳ ಪರಿಚಯ ಮಾಡಿಕೊಟ್ಟರು. ಹಗಲು-ರಾತ್ರಿ,        ಗ್ರಹಣಗಳು ಹೇಗೆ ಸಂಭವಿಸುತ್ತವೆ. ಶಬ್ದ, ಶಾಖ ವಿಷಯದ ಕುರಿತು ಪ್ರಾಯೋಗಿಕವಾಗಿ ಮಕ್ಕಳಿಗೆ ತರಬೇತಿ ನೀಡಿ ಗಮನ ಸೆಳೆದರು.

ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಪ್ರಯೋಜನ ಪಡೆಯಲು ಬಯಸುವವರು 96635 59493 ಮೊಬೈಲ್ ಸಂಖ್ಯೆಗೆ ಸಂಪರ್ಕಿಸ                  ಬಹುದು.

ಪ್ರಪಂಚದಾದ್ಯಂತ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಅತಿ ದೊಡ್ಡ ಜಾಲವನ್ನು ಹೊಂದಿರುವ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ಗ್ರಾಮೀಣ ಮಕ್ಕಳಲ್ಲಿ, ಶಿಕ್ಷಕರಲ್ಲಿ ಮತ್ತು ಜನಸಾಮಾನ್ಯರಲ್ಲಿ ಕ್ರಿಯಾಶೀಲತೆ, ವೈಚಾರಿಕತೆ, ಪ್ರಶ್ನಾರ್ಥಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟನಲ್ಲಿ ಸಾಗುತ್ತಿರುವುದು                 ಶ್ಲಾಘನೀಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT