ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಭಾರತ ತಂಡದಲ್ಲಿ ಚಿಕ್ಕರಂಗಪ್ಪ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ಕರ್ನಾಟಕದ ಎಸ್. ಚಿಕ್ಕರಂಗಪ್ಪ ಸೇರಿದಂತೆ ಒಟ್ಟು ಆರು ಪ್ರಬಲ ಸ್ಪರ್ಧಿಗಳನ್ನು ಒಳಗೊಂಡ ಭಾರತ ಗಾಲ್ಫ್ ತಂಡ ಸಿಂಗಪುರ-ಐಸ್ಲೆಂಡ್ ಕ್ಲಬ್‌ನಲ್ಲಿ ಸೆ. 29ರಿಂದ ಅ. 2ರ ವರೆಗೆ ನಡೆಯಲಿರುವ ಏಷ್ಯನ್ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದ ಅಭಿಜಿತ್ ಚಡಾ ಸೇರಿದಂತೆ ಒಟ್ಟು ಆರು ಸ್ಪರ್ಧಿಗಳು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ಖಾಲೀನ್ ಜೋಶಿ, ತ್ರಿಶೂಲ್ ಚಿನ್ನಪ್ಪ, ಅಂಗದ್ ಚೀಮಾ ಹಾಗೂ ಹನಿ ಬೈಸೊಯಿ ತಂಡದಲ್ಲಿರುವ ಇತರ ಸ್ಪರ್ಧಿಗಳು. ಈ ತಂಡ ಕಳೆದ ವರ್ಷದ ಏಷ್ಯಾ ಫಾಲ್ದೊ ಸರಣಿಯಲ್ಲಿ ಚಾಂಪಿಯನ್ ಆಗಿತ್ತು.

ಇದರಲ್ಲಿ ಒಟ್ಟು 120 ಗಾಲ್ಫರ್‌ಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಏಷ್ಯಾ ಫೆಸಿಫಿಕ್ ಗಾಲ್ಫ್  ಒಕ್ಕೂಟ (ಎಪಿಜಿಸಿ) ಈ ಚಾಂಪಿಯನ್‌ಷಿಪ್ ಆಯೋಜಿಸಿದೆ.

ಇಲ್ಲಿ ಪ್ರಶಸ್ತಿ ಜಯಿಸಿದ ತಂಡ 2012ರ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದೆ. ಹಾಗೆಯೇ ವಿಜೇತ ಹಾಗೂ ರನ್ನರ್ ಅಪ್ ತಂಡಗಳು ಮುಂದಿನ ವರ್ಷ ನಡೆಯುವ ಓಪನ್ ಚಾಂಪಿಯನ್‌ಷಿಪ್ ಅಂತರರಾಷ್ಟ್ರೀಯ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅಡುವ ಅವಕಾಶ ಗಳಿಸಲಿದೆ. ಈ ಎಲ್ಲಾ ಕಾರಣದಿಂದ ಈ ಚಾಂಪಿಯನ್‌ಷಿಪ್‌ಗೆ ಹೆಚ್ಚು ಪ್ರಾಮುಖ್ಯತೆ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT