ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಕ್ಕೆ ಸಿಕ್ಕ ಅಪರೂಪದ ಮೀನು

Last Updated 16 ಜುಲೈ 2012, 10:00 IST
ಅಕ್ಷರ ಗಾತ್ರ

ಕಾರವಾರ: ಸಮುದ್ರದಲ್ಲಿರುವ ಕಲ್ಲುಬಂಡೆಗಳ ಮಧ್ಯೆ ಹೆಚ್ಚಾಗಿ ವಾಸ ಮಾಡುವ ಕುರುಡೆ, ಕೊಕ್ಕರ್, ಕೆಮ್ಸು ಮೀನು ಹಿಡಿಯಲು ಮೀನುಗಾರರು ಪಾತಿ ದೋಣಿಯಲ್ಲಿ ತೆರಳಿ ಗಾಳ ಹಾಕುತ್ತಾರೆ. ಪಾತಿದೋಣಿಯಲ್ಲಿ ಹೋಗಿದ್ದ ಮೀನುಗಾರರೊಬ್ಬರ ಗಾಳಕ್ಕೆ ಅಪರೂಪದ ಮೀನು ಸಿಕ್ಕು ಅಚ್ಚರಿ ಮೂಡಿಸಿದೆ.

ಅಪರೂಪದ ಮೀನಿಗೆ ಸ್ಥಳೀಯವಾಗಿ ಯಾವುದೇ ಹೆಸರಿಲ್ಲ. `ಬ್ಲಾಸ್ಟಿಡಾ~ ವರ್ಗಕ್ಕೆ ಸೇರಿದ ಮೀನಿನ ವೈಜ್ಞಾನಿಕ ಹೆಸರು `ಸಪ್ಲಾಮೆನ್ ಪ್ರೆನಟಮ್~. ಇವುಗಳ ಜೀವಿತಾವಧಿ 2ರಿಂದ3 ವರ್ಷ.

ಗಾಳಕ್ಕೆ ಸಿಕ್ಕ ಈ ಮೀನು 26 ಸೆ.ಮೀ. ಉದ್ದವಿದ್ದು 10 ಇಂಚು ಅಗಲ, 500 ಗ್ರಾಂ. ತೂಕವಿದೆ. ಹವಳದ ದಿಬ್ಬವಿರುವ ಪ್ರದೇಶದಲ್ಲಿ ಹೆಚ್ಚು ಕಂಡುಬರುವ ಈ ಮೀನುಗಳು ಸುಮಾರು 38 ಸೆಂ. ಮೀ. ಉದ್ದ ಬೆಳೆಯುತ್ತವೆ.
8ರಿಂದ 180 ಮೀಟರ್ ಆಳದ ವರೆಗೆ ಈ ಮೀನುಗಳು ವಾಸ ಮಾಡುತ್ತವೆ.

ಕಪ್ಪೆಚಿಪ್ಪು, ಸಿಗಡಿ, ಮೃದ್ವಂಗಿ, ಸಣ್ಣ ಜಲಚರಗಳು ಇದರ ಪ್ರಮುಖ ಆಹಾರ. ಭೂಮಿಯ ಪಾತಳಿಯಲ್ಲಿರುವ ಈ ಮೀನುಗಳು ಗಿಲ್‌ನೆಟ್ ಅಥವಾ ಆಳಸಮುದ್ರ ಮೀನುಗಾರಿಕೆ ನಡೆಸುವ ಟ್ರಾಲರ್ ದೋಣಿ ಬಲೆಗೆ ಹೆಚ್ಚಾಗಿ ಬೀಳುತ್ತವೆ.ಈ ಮೀನುಗಳು ರೆಡ್‌ಲಿಸ್ಟ್ ಅಥವಾ ಅಳಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸೇರಿಲ್ಲ. ಬದಲಾಗಿ ವಿಶೇಷ ಆಕೃತಿಯ ಮೀನುಗಳು ಎಂದು ಗುರುತಿಸಲಾಗಿದೆ.

`ಹಿಂದು ಶಾಂತ ಮಹಾಸಾಗರ, ಹವಾಯಿ ದ್ವೀಪಗಳು, ದಕ್ಷಿಣಪೂರ್ವ ಆಫ್ರೀಕಾ ಕರಾವಳಿಯಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ. ನೀರಿನ ಸೆಳೆತಕ್ಕೆ ಅಥವಾ ಗುಂಪಿನಿಂದ ಪತ್ಯೇಕಗೊಂಡ ಈ ಮೀನು ಗಾಳಕ್ಕೆ ಸಿಕ್ಕಿರಬಹುದು~ ಎನ್ನುತ್ತಾರೆ ಕವಿವಿ ಕಡಲಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಉಲ್ಲಾಸ ನಾಯಕ ಮತ್ತು ಡಾ. ಶಿವಪ್ರಸಾದ ಹರಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT