ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಯನ್ನು ಸ್ಥಳಾಂತರಿಸಬಹುದೇ?

ಮಾಡಿ ನಲಿ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಾಮಗ್ರಿಗಳು: ಬಕೆಟ್, ಎರಡು ಲೋಟಗಳು, ನೀರು.
ವಿಧಾನ:

1. ಒಂದು ಬಕೆಟ್‌ನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ.
2. ಒಂದೇ ಅಳತೆಯ ಎರಡು ಗಾಜಿನ ಅಥವಾ ಪ್ಲಾಸ್ಟಿಕ್ ಲೋಟಗಳನ್ನು ತೆಗೆದುಕೊಂಡು ಅವುಗಳಿಗೆ  `ಅ' ಮತ್ತು `ಬ' ಎಂದು ಹೆಸರಿಸಿ.
3. `ಬ'ದಲ್ಲಿ ಪೂರ್ಣ ನೀರು ತುಂಬಿ ಹಾಗೂ `ಅ' ಖಾಲಿ ಲೋಟವನ್ನು ನೀರಿನಲ್ಲಿ ತಿರುವು ಮುರುವು ಮಾಡಿ ಚಿತ್ರದಲ್ಲಿ ತೋರಿಸಿದಂತೆ ಮುಳುಗಿಸಿ ಹಿಡಿದುಕೊಳ್ಳಿ.
4. `ಅ' ಲೋಟವನ್ನು `ಬ' ಲೋಟದ ಕಡೆಗೆ ಓರೆ ಮಾಡುತ್ತಾ ಹೋಗಿ.

ಪ್ರಶ್ನೆ 
1. `ಅ' ಲೋಟವನ್ನು ಓರೆ ಮಾಡುತ್ತಾ ಹೋದಾಗ ಏನಾಯಿತು? ಯಾಕೆ?
2.  `ಅ' ಲೋಟವನ್ನು `ಬ'ದ ಕೆಳಗೆ ತಂದಾಗ ಏನಾಯಿತು? ಯಾಕೆ?
3.  ಗುಳ್ಳೆಗಳು ನೀರಿನಲ್ಲಿ ಮೇಲೆಯೇ ಯಾಕೆ ಹೋಗುತ್ತವೆ?

ಉತ್ತರ 
1. `ಅ' ಲೋಟದಲ್ಲಿ ಗಾಳಿ ಇದ್ದು, ಓರೆ ಮಾಡುತ್ತಾ ಹೋದಾಗ, ಗಾಳಿಯು ಗುಳ್ಳೆಗಳ ರೂಪದಲ್ಲಿ ಹೊರಗೆ ಹೋಗಿ ಅದರ ಸ್ಥಳದಲ್ಲಿ ನೀರು ತುಂಬಿಕೊಳ್ಳುತ್ತದೆ.
2. `ಅ'ದಲ್ಲಿಯ ಗಾಳಿ `ಬ'ದಲ್ಲಿ ಸೇರಿ `ಬ'ದಲ್ಲಿಯ ನೀರು ಹೊರಹೋಗುತ್ತದೆ.
3. ಗಾಳಿಯ ಗುಳ್ಳೆಗಳ ಸಾಂದ್ರತೆ ನೀರಿಗಿಂತ ಬಹಳ ಕಡಿಮೆ ಇರುವುದರಿಂದ ಅವು ಮೇಲೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT