ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳೆಮ್ಮ ದೇವಿ ರಥೋತ್ಸವ

Last Updated 9 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬರುವ ಗಾಳೆಮ್ಮನಗುಡಿ ಗ್ರಾಮದ ಆರಾದ್ಯ ದೈವ ಗಾಳೆಮ್ಮದೇವಿ ರಥೋತ್ಸವವು ಬುಧವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.

ಪ್ರತಿವರ್ಷದಂತೆ ದುರ್ಗಾಷ್ಟಮಿ ಯಂದು ಜರುಗುವ ರಥೋತ್ಸವದ ಅಂಗವಾಗಿ ಗಾಳೆಮ್ಮದೇವಿಗೆ ವಿಶೇಷ ಪೂಜೆ, ಅಭಿಷೇಕ, ವಿಶೇಷ ಅಲಂಕಾರ ಹಾಗೂ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು
.
ಸ್ಥಳೀಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ನೂರಾರು ಜನರು ದೇವಸ್ಥಾನಕ್ಕೆ ಭೇಟಿ ದೇವಿಯ ದರ್ಶನ ಪಡೆದು, ಹೂಹಣ್ಣುಕಾಯಿ ಅರ್ಪಿಸಿದರು. ನವರಾತ್ರಿಯ ಅಂಗವಾಗಿ ಪ್ರತಿದಿನವು ದೇವಿಗೆ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರವನ್ನು ನೆರವೇರಿಸಿದ್ದರು.

ಸಂಜೆ 5 ಗಂಟೆಗೆ ಸಕಲ ವಾದ್ಯ ಗಳೊಂದಿಗೆ ನೂರಾರು ಭಕ್ತ ಸಮೂಹ ದೆದುರು ರಥೋತ್ಸವಕ್ಕೆ ವಿವಿಧ ಅಲಂಕಾರಿಕ ವಸ್ತುಗಳನ್ನು, ವಿವಿಧ ಬಗೆಯ ಹೂಗಳಿಂದ ಅಲಕೃಂತ ಗೊಂಡಿದ್ದ ರಥಕ್ಕೆ ಪೂಜೆ ನೆರವೇರಿಸಿ  ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ದೇವಿ ಚಿತ್ರಪಟ ವನ್ನು ಹರಾಜು ಹಾಕಲಾಯಿತು. ಕಳೆದ ವರ್ಷ ರಥೋತ್ಸವ ಸಂದರ್ಭದಲ್ಲಿ ಹರಾಜಿನಲ್ಲಿ ಪಟವನ್ನು ಪಡೆದ ಭಕ್ತರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ, ಹಾರಾಜಿನ ಮೊತ್ತದೊಂದಿಗೆ ಅರ್ಪಿಸಿದರು.

ರಥೋತ್ಸವದಲ್ಲಿ ಸ್ಥಳೀಯರು ಸೇರಿದಂತೆ ಹನುಮನಹಳ್ಳಿ, ಡಣಾಪುರ, ಮರಿಯಮ್ಮನಹಳ್ಳಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸದಲ್ಲಿ  ಭಾಗವಹಿಸಿ, ರಥಕ್ಕೆ ಹೂಹಣ್ಣು ಎಸೆದು ಹರಕೆ ತೀರಿಸಿಕೊಂಡರು.

ಹೆದ್ದಾರಿಯಲ್ಲಿ ಜರುಗುವ ರಥವನ್ನು ಭಕ್ತಾದಿಗಳು ದೇವಸ್ಥಾನದಿಂದ ದೂರದವರೆಗೆ ಎಳೆದುಕೊಂಡು ಹೋಗಿ ಸ್ವಸ್ಥಾನಕ್ಕೆ ಎಳೆದು ತಂದು ನಿಲ್ಲಿಸಿದರು. ನಂತರ ಸಾಂಪ್ರದಾಯಿಕ ಪದ್ಧತಿಯಂತೆ ಸಿಹಿತಿನಿಸುಗಳನ್ನು ಖರೀದಿಸಲು ಜನರು ಅಂಗಡಿ ಮುಂಗಟ್ಟುಗಳ ಮುಂದೆ ನೆರೆದಿದ್ದರು. ಹೆಂಗಸರು ಬಳೆಗಳನ್ನು ಖರೀದಿಸುವಲ್ಲಿ ಮುಂದಾಗಿದ್ದರು.

ಕಳೆದ ವರ್ಷಕ್ಕಿಂತ ಈ ಬಾರಿ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು. ಪಟ್ಟಣದ ಠಾಣೆಯ ಪೊಲೀಸ್ ಸಿಬ್ಬಂದಿ ಜಾತ್ರೆ ಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ  ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಸಂಚಾರ ವ್ಯತ್ಯಯ: ಗಾಳೆಮ್ಮ ದೇವಿಯ ರಥೋತ್ಸವವು ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಜರುಗಿದ್ದರಿಂದ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು.

ರಥೋತ್ಸವ ಜರುಗುವ ಸಮಯದಲ್ಲಿ ಎರಡು ಬದಿಗಳಲ್ಲಿ ಸುಮಾರು ಏಳೆಂಟು ಕಿ.ಮೀಗಳಷ್ಟು ದೂರ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT