ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಜತೆ ವ್ಯವಹಾರ: ಇಂಗ್ಲೆಂಡ್ ಸರ್ಕಾರ ಅಸ್ತು

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಗುಜರಾತ್‌ನೊಂದಿಗೆ ತನ್ನೆಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದ ಇಂಗ್ಲೆಂಡ್, ಹತ್ತು ವರ್ಷಗಳ ನಂತರ ಪುನಃ ಆ ರಾಜ್ಯದೊಂದಿಗೆ ತನ್ನ ವ್ಯವಹಾರಿಕ ಸಂಬಂಧಗಳನ್ನು ಮುಂದುರವರೆಸಲು ನಿರ್ಧರಿಸಿದೆ. 

ಈ ಸಂಬಂಧ ಗುಜರಾತ್‌ಗೆ ಭೇಟಿ ನೀಡಿ ಉಭಯ ದೇಶ ಮತ್ತು ರಾಜ್ಯಗಳ ಪರಸ್ಪರ ಸಹಕಾರ, ಹಿತಾಸಕ್ತಿ ಹಾಗೂ ಅವಕಾಶಗಳು ಸೇರಿದಂತೆ 2002ರ `ಗೋಧ್ರಾ ಹತ್ಯಾಕಾಂಡ~ದಲ್ಲಿ ಮಡಿದ ಬ್ರಿಟಿಷ್ ಪ್ರಜೆಗಳ ಕುಟುಂಬಗಳಿಗೆ ನ್ಯಾಯ ಒದಗಿಸುವ ಕುರಿತು ಚರ್ಚಿಸುವಂತೆ ಭಾರತದಲ್ಲಿರುವ ತನ್ನ ರಾಯಭಾರಿ ಜೇಮ್ಸ ಬೆವನ್ ಅವರಿಗೆ ಬ್ರಿಟನ್ ಸರ್ಕಾರ ಸೂಚಿಸಿದೆ.

ಇಂಗ್ಲೆಂಡ್‌ನ ಈ ನಿರ್ಧಾರವನ್ನು ಸ್ವಾಗತಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, `ದೇವರು ದೊಡ್ಡವನು. ರಾಜ್ಯದೊಂದಿಗೆ ಇಂಗ್ಲೆಂಡ್ ಪುನಃ ವ್ಯವಹಾರ ಮುಂದುವರೆಸಲು ಇಚ್ಛಿಸಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ~ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ನೂರಾರು ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ 2002ರ `ಗೋಧ್ರಾ ಹತ್ಯಾಕಾಂಡ~ವನ್ನು ಪ್ರಬಲವಾಗಿ ಖಂಡಿಸಿದ್ದ ಇಂಗ್ಲೆಂಡ್, ಆನಂತರ ಆ ರಾಜ್ಯದೊಂದಿಗಿನ ತನ್ನೆಲ್ಲಾ ವ್ಯವಹಾರಿಕ ಸಂಬಂಧಗಳನ್ನು ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT