ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 4-10-1962

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಎಲ್ಲ ಕ್ರಮಗಳಿಗೂಭಾರತ ಸಿದ್ಧ
ನವದೆಹಲಿ, ಅ. 3 -ಚೀಣವು ಇಲ್ಲ ಸಲ್ಲದ ಅಸಂಬದ್ಧ ಆಪಾದನೆಗಳು ಮತ್ತು ಬೆದರಿಕೆಗಳನ್ನು ಎಷ್ಟೇ ಹಾಕಿದರೂ, ಚೀಣೀ ಪಡೆಗಳು ಭಾರತದ ಗಡಿಯಲ್ಲಿ ನಡೆಸುವ ಯಾವುದೇ ಅತಿಕ್ರಮಣವನ್ನು ತೀವ್ರ ರೀತಿ ಪ್ರತಿಭಟಿಸುವ ಕ್ರಮಕೈಗೊಳ್ಳಲು ಭಾರತವು ಹಿಂದೆಗೆಯುವುದಿಲ್ಲ. ಸೆ. 25 ರಂದು ಭಾರತ ಸರ್ಕಾರವು ಚೀಣಕ್ಕೆ ಬರೆದ ಪತ್ರದಲ್ಲಿ ಈ ಅಂಶವನ್ನು ಸ್ದಷ್ಟಪಡಿಸಲಾಗಿದೆ.

ನಗರದಲ್ಲಿ ಎಂ.ಐ.ಜಿ. ಎಂಜಿನ್ ವಿಮಾನದ ಪರೀಕ್ಷೆ
ನವದೆಹಲಿ, ಅ. 3 - ಭಾರತದಲ್ಲಿ ಎಂ. ಐ. ಜಿ. ಜೆಟ್ ವಿಮಾನಗಳ ಹಾರಾಟಕ್ಕೆ ಅಗತ್ಯ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲು ರಷ್ಯದ ಎಂಜಿನಿಯರುಗಳು ಮತ್ತು ತಾಂತ್ರಿಕ ಪರಿಣಾಮಗಳನ್ನೊಳಗೊಂಡ ಭಾರಿ ತಂಡವೊಂದು ಸದ್ಯದಲ್ಲಿಯೇ ಇಲ್ಲಿಗೆ ಬರಲಿದೆ.
`ಎಂ.ಐ.ಜಿ. ಜಿ- 19ಕ್ಕೆ ವಿಮಾನದಲ್ಲಿ ಬಳಸಲಾಗುವ `ವಿ. ಕೆ. - 5~ ಎಂಜಿನನ್ನೇ `ಹಿಂದೂಸ್ತಾನ್ ಫೈಟರ್~ ವಿಮಾನಕ್ಕೆ ಬಳಸಲು ಮಾಡಬೇಕಾದ ನಕ್ಷೆಯನ್ನು ರಷ್ಯ ಪರಿಣತರು ಆಗಲೇ ಸಿದ್ಧಪಡಿಸಿದ್ದಾರೆ.

ಕಾರ್ಪೊರೇಷನ್ ವಶಕ್ಕೆ ರಾಜಾಜಿನಗರ, ಜಯನಗರ
ಬೆಂಗಳೂರು, ಅ. 3 - ರಾಜಾಜಿನಗರ ಮತ್ತು ಜಯನಗರದ 3ನೇ ಬ್ಲಾಕಿನಿಂದ 8ನೇ ಬ್ಲಾಕಿನವರೆಗಿನ ಪ್ರದೇಶ ಅಕ್ಟೋಬರ್ 1 ರಿಂದ ಬೆಂಗಳೂರು ನಗರ ಕಾರ್ಪೊರೇಷನ್ನಿನ ಆಡಳಿತ ಸರಹದ್ದಿಗೆ ಒಳಪಟ್ಟಿದೆ ಎಂದು ಇಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT