ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಹಿಂದಿನ ವಿದ್ಯಮಾನ ತಿಳಿಸುವ ತಂತ್ರಜ್ಞಾನ

Last Updated 8 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಕೊಠಡಿಯಲ್ಲಿನ ನಾಲ್ಕು ಗೋಡೆಗಳ ನಡುವೆ ನಡೆಯುವ ವಿದ್ಯಮಾನವನ್ನು ಹೊರಗಿನಿಂದಲೇ ನೋಡಬಹುದಾದ `ಲೇಸರ್ ತಂತ್ರಜ್ಞಾನ~ವನ್ನು ಮಸಾಚುಸೆಟ್ಸ್  ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಬೆಳಕಿನ ಕಿರಣಗಳು ಹಾಗೂ ವಿದ್ಯುತ್ಕಾಂತೀಯ ಕಿರಣಗಳಲ್ಲಿ ಕಾಣುವ `ಫೋಟಾನ್~ಗಳು ಯದ್ವಾ ತದ್ವಾ ಓಡಾಡಿ ಕೋಣೆಯ ಮೂಲೆ, ಮೂಲೆಗೂ ವ್ಯಾಪಿಸುತ್ತವೆ. `ಫೋಟಾನ್~ಗಳ ನಡವಳಿಕೆ ಅಭ್ಯಸಿಸಿ, ಅವುಗಳಿಗೆ `ಆಪ್ಟಿಕ್~ ತಂತ್ರ ಅಳವಡಿಸಿ, ಈ ಲೇಸರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

`ಲೇಸರ್ ತಂತ್ರಜ್ಞಾನ ಕೇವಲ `ಗೋಡೆ ಹಿಂದಿನ~ ಮಾಹಿತಿ ನೀಡುವುದಕ್ಕಷ್ಟೇ ಅಲ್ಲ, ಭೂಕಂಪ, ಸುನಾಮಿ, ಬೆಂಕಿ ಅನಾಹುತದಂತಹ ದುರಂತದ ಸಂದರ್ಭದಲ್ಲಿ ಕಟ್ಟಡದೊಳಗೆ ಸಿಕ್ಕಿಬಿದ್ದವರನ್ನು ರಕ್ಷಿಸಲು ನೆರವಾಗುತ್ತದೆ~ ಎಂದು ಎಂಐಟಿ ಸಂಶೋಧಕರು ಹೇಳಿದ್ದಾರೆ.

`ಉದಾಹರಣೆಗೆ, ಮನೆಯೊಂದು ಕುಸಿದಿದೆ ಎಂದುಕೊಳ್ಳಿ. ಮನೆಯ ಅವಶೇಷಗಳಡಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ಹೊರಗಿನವರಿಗೆ ಒಳಗಿರುವ ವ್ಯಕ್ತಿಗಳು ಕಾಣಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ  ಈ ಲೇಸರ್ ತಂತ್ರಜ್ಞಾನ ಬಳಸಬಹುದಾಗಿದೆ~ ಎಂದು ಈ ಸಂಶೋಧನೆಯ ನೇತೃತ್ವ ವಹಿಸಿರುವ ಎಂಐಟಿಯ ವಿದ್ಯಾರ್ಥಿ ಗುಪ್ತಾ ಆಪ್ಟಿಕ್ಸ್ ಎಕ್ಸ್‌ಪ್ರೆಸ್ ನಿಯತಕಾಲಿಕದಲ್ಲಿ ಪ್ರಕಟಿಸಿರುವ ವರದಿಯಲ್ಲಿ ವಿವರಿಸಿದ್ದಾರೆ. ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಲಭ್ಯವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT