ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಳಿಗರ ಕಲೆ ರಕ್ಷಿಸಲು ಸರ್ಕಾರ ಸಕಲ ನೆರವು

Last Updated 20 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ಹಳಿಯಾಳ: ಗೌಳಿ ಜನಾಂಗದವರ ಹಾಗೂ ಇನ್ನಿತರ ಹಳ್ಳಿ ಗಾಡಿನ ಹಿರಿಯ ಕಲಾವಿದರ ಜೀವಂತ ಕಲೆ ಉಳಿಸಿ ಬೆಳೆ ಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಕಳೆದ 32 ವರ್ಷಗಳಿಂದ ಪ್ರಯತ್ನಿಸುತ್ತಾ ಇದೆ. ಗ್ರಾಮಿಣ ಭಾಗದವರು ತಮ್ಮಲ್ಲಿರುವ ಕಲೆಗಳನ್ನು ಬೆಳೆಸಲು ಪ್ರಯತ್ನಿಸ ಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ರೆಜಿಸ್ಟ್ರಾರ್ ಬಿ.ಎನ್. ಪರಡ್ಡಿ ಹೇಳಿದರು.

ಭಾನುವಾರ ತಾಲ್ಲೂಕಿನ ಭಾಗ ವತಿಯ ಗೌಳಿವಾಡಾದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ರಾಣಿ ಚೆನ್ನಮ್ಮಾ ಕಲಾ ಸಂಘಟನಾ ಸಮಿತಿ ಹಳಿಯಾಳ ಇವರ ಸಂಯುಕ್ತ ಆಶ್ರಯದಲ್ಲಿ 2011-12ನೇ ಸಾಲಿನಲ್ಲಿ ತರಬೇತಿ ಪಡೆದ ಗೌಳಿಗ ಅಭ್ಯರ್ಥಿ ಗಳಿಂದ ಗೌಳಿಗರ ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಗ್ರಾಮೀಣ ಕಲೆಯನ್ನು ಕರಗತ ಮಾಡಿಕೊಂಡ 58 ವರ್ಷ ಮೀರಿದ ವರಿಗೆ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಮಾಶಾಸನ ನೀಡುತ್ತಾ ಇದ್ದಾರೆ. ಆದರೆ ತಾಲ್ಲೂಕಿನಿಂದ ಯಾವುದೇ ಅರ್ಜಿಯು ಅಕಾಡೆಮಿಗೆ ಬರುತ್ತಿಲ್ಲ. ಹಿರಿಯ ಜನಪದ ಕಲೆ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಲಕ್ಷ ಅನುದಾನವನ್ನೂ ಸಹ ಸರ್ಕಾರ ನೀಡುತ್ತಿದೆ. ಗೌಳಿಗರ ಕಲೆ ಬಹಳ ಅದ್ಬುತವಾದ ಕಲೆ. ಮುಂದಿನ ದಿನಗಳಲ್ಲಿ ಗೌಳಿಗರ ಕಲೆ ಪ್ರದರ್ಶಿಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ಸವ ವನ್ನು ಹಮ್ಮಿಕೊಳ್ಳಲಾಗುವುದು. ಈ ಉತ್ಸವದಲ್ಲಿ ಜಾನಪದ ಮತ್ತಿತರ ಗ್ರಾಮೀಣ ಕಲೆಗಳಿಗೆ ಹೆಚ್ಚಿನ ಪ್ರಾಧ್ಯಾ ಹ್ನತೆ ನೀಡಲಾಗುವುದು ಎಂದರು.

ಪ್ರಾಧ್ಯಾಪಕರಾದ ಡಾ.ಪ್ರಕಾಶ ಉಪನ್ಯಾಸ ನೀಡಿದರು. ಗೌಳಿ ಸಮಾ ಜದ ಜಿಲ್ಲಾ ಘಟಕದ ಅಧ್ಯಕ್ಷ  ವಿಠ್ಠಲ ಎಸ್. ಡೋಯಿಪುಡೆ ಅಧ್ಯಕ್ಷತೆ ವಹಿ ಸಿದ್ದರು, ಅತಿಥಿಗಳಾಗಿ ಬಿ.ಆರ್.ವಿಭೂತೆ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ  ರಾಮಕೃಷ್ಣ ಗುನಗಾ, ಗ್ರಾಮ ಪಂಚಾತಿ ಅಧ್ಯಕ್ಷ ಸುಭಾಷ ಗೌಡಾ, ಗಂಗಾರಾಮ ಜೋರೆ, ಮತ್ತಿತ ರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಗು ಪಡತಾರೆ ತಂಡದವರಿಂದ ಜನಪದ ನೃತ್ಯ, ಗಜ ನೃತ್ಯ, ಜನಾಬಾಯಿ ಜೋರೆ ತಂಡದವರಿಂದ ಪುಗಡಿ ಹಾಗೂ ಹೋಳಿ ನೃತ್ಯ, ವಿಜಯಲಕ್ಷ್ಮೀ ಹಾಗೂ ನೇತ್ರಾ ರವರಿಂದ ಭಾವಗೀತೆ, ಗೌಳಿಗ ರಿಂದ ದಸರಾ ಹಬ್ಬದ ಪಾರಂಪರಿಕ ಗಜ ನೃತ್ಯ ಮತ್ತಿತರರ ಕಲೆಗಳನ್ನು ಪ್ರದರ್ಶಿಸಿದರು.

ತರಬೇತಿದಾರರಾದ ವಿಕ್ಟೋರಿಯಾ ಡಿ.ಮನೇಜಸ್ ಗೌಳಿಗರಿಗೆ ನೃತ್ಯ ತರ ಬೇತಿಯನ್ನು ನೀಡಿದ್ದರು. ಶ್ರುತಿ ಗುನಗಾ ಸ್ವಾಗತಿಸಿದರು, ಹೆಸ್ಕಾಂ ಅಭಿಯಂತ ರಾಮಕೃಷ್ಣ ಗುನಗಾ ನಿರೂಪಿಸಿದರು, ಎಮ್.ಡಿ. ವಿಕ್ಟೋರಿಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT