ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ

Last Updated 25 ಫೆಬ್ರುವರಿ 2012, 10:50 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ ಘಟನೆ ಗುರುವಾರ ಜರುಗಿದೆ.

ಗುರುವಾರ ಅಧ್ಯಕ್ಷ ಶಂಕರ ರಾಮಪ್ಪಾ ಧೂಳಿ ಅವರ ವಿರುದ್ಧ 21 ಜನ ಸದಸ್ಯರು  ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಗ್ರಾಮ ಪಂಚಾಯತಿ ಒಟ್ಟು 24 ಜನ ಸದಸ್ಯರಲ್ಲಿ 21 ಜನ ಸದಸ್ಯರು  ಹಾಜರಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಪರ  ನಿರ್ಣಯಿಸಿದರು.

ಇದಕ್ಕೂ ಮೊದಲು ಅವರು ಕಳೆದ 2ರಂದು ಬೆಳಗಾವಿ ಉಪವಿಭಾಗಾಧಿ ಕಾರಿ  ವಿಜಯ ಮಹಾಂತೇಶ ಅವರಿಗೆ  ಬಸ್ಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು  ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದರು.

ಬೆಳಗಾವಿ ಉಪವಿಭಾಗಾಧಿಕಾರಿ ಗಳು ಗುರುವಾರದಂದು ವಿಶೇಷ ಸಭೆಯನ್ನು ಕರೆದಿದ್ದರು. ಸದಸ್ಯರು ಅವಿಶ್ವ್ವಾಸ ಗೊತ್ತುವಳಿ ಮಂಡನೆಗೆ ನಿರ್ಣಯ ಅಂಗಿಕರಿಸಿದ ನಂತರ ಉಪವಿಭಾಗಾಧಿಕಾರಿ ವಿಜಯ ಮಹಾಂತೇಶ ಮಾತನಾಡಿ ಅಧ್ಯಕ್ಷರು ತಕ್ಷಣವೆ ಪಂಚಾಯಿತಿಯ ಯಾವುದೆ ಕಾರ್ಯಕಲಾಪಗಳನ್ನು ನಡೆಸತಕ್ಕ ದಲ್ಲಾ ಎಂದು ಸೂಚನೆ ನೀಡಿದರು.

ಯಮಕನಮರಡಿ ಕಂದಾಯ ನಿರೀಕ್ಷಕ ಎಸ್. ಜೆ. ಸಾಳುಂಕೆ, ಹುಕ್ಕೇರಿ ತಾಲ್ಲೂಕು ಪಂಚಾಯತಿ ಗ್ರಾಮೀಣಾಭಿ ವೃದ್ಧಿ ಸಹಾಯಕ ನಿರ್ದೇಶಕ ಡಿ.ಎಂ. ಜಕ್ಕಪಗೋಳ, ಎಸ್.ಎಸ್.ತುಪ್ಪದ, ಪಿ.ಎಲ್.ನಾಯಿಕ ಮತ್ತಿತರರು ಹಾಜರಿದ್ದರು.

ಹಿನ್ನೆಲೆ: ಅಧ್ಯಕ್ಷ ಶಂಕರ ರಾಮಪ್ಪಾ ದೂಳಿ ಇವರು ಗ್ರಾಮ ಪಂಚಾಯತಿ ಯಾವುದೆ ಅಭಿವದ್ಧಿ ಕಾರ್ಯಗಳ ಬಗ್ಗೆ ಸದಸ್ಯರ ಗಮನಕ್ಕೆ ತರದೆ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದರು. ಸದಸ್ಯರೊಂದಿಗೆ ಸರಿಯಾಗಿ ಸಹಕರಿಸು ತ್ತಿರಲಿಲ್ಲಾ, ಪಂಚಾಯತಿ ಕಾರ್ಯಗ ಳನ್ನು ಕಾರ್ಯಾಲಯದಲ್ಲಿ ಮಾಡದೆ ಬೇರೆಡೆ ಕುಳಿತು ಮಾಡುತ್ತಿದ್ದರು. ಇದರಿಂದ ಬೇಸತ್ತು ಅವಿಶ್ವಾಸ ಗೊತ್ತು ವಳಿಯನ್ನು ಮಂಡಿಸ ಬೇಕಾಯಿತು ಎಂದು ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT