ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ನೌಕರರ ಪ್ರತಿಭಟನೆ

Last Updated 20 ಏಪ್ರಿಲ್ 2011, 7:00 IST
ಅಕ್ಷರ ಗಾತ್ರ

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೌಕರರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಾ.ಪಂ.ಕಚೇರಿ ಎದುರು ಧರಣಿ ನಡೆಸಿದರು. ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲಿಸಿ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲ್ಲೂಕು ಪಂಚಾಯಿತಿಗೆ ಆಗಮಿಸಿ ಧರಣಿ ಆರಂಭಿಸಿದರು.

ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಕಾಳೆ ಮಾತನಾಡಿ, ಹಲವು ದಶಕಗಳಿಂದ ಹೋರಾಡುತ್ತಿರುವ ಗ್ರಾ.ಪಂ. ನೌಕರರಿಗೆ ಕೂಡಲೇ ಸೇವಾ ಭದ್ರತೆ ಒದಗಿಸಬೇಕು. ನೌಕರರ ಬೇಡಿಕೆಗಳಾದ ಜನಸಂಖ್ಯೆಗೆ ಅನುಗುಣವಾಗಿ ಗ್ರಾ.ಪಂ.ಗಳಿಗೆ ಅನುದಾನ, ಕರ ವಸೂಲಿಗಾರರ ನೇಮಕಾತಿಯಲ್ಲಿ ಪರೀಕ್ಷಾ ಪದ್ಧತಿ ಕೈಬಿಡಬೇಕು, ಸರ್ಕಾರದ ನೂತನ ಆದೇಶದಂತೆ ನೌಕರರಿಗೆ ಕನಿಷ್ಠ ವೇತನ ನೀಡುವುದು, ಮೂರನೇ ಹಣಕಾಸು ಆಯೋಗದ ಸಿಫಾರಸ್ಸಿನಂತೆ ನೌಕರರ ವೇತನ ನೀಡಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

2010ರ ಡಿಸೆಂಬರ್ ವರೆಗೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ನೌಕರರನ್ನು 1993ರ ಪಂಚಾಯತ್ ರಾಜ್ಯ ಕಾಯ್ದೆ ಕಾಲಂ 112 ರಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗಿರುವ ಅಧಿಕಾರವನ್ನು ಬಳಸಿ ಎಲ್ಲ ನೌಕರರಿಗೆ ಅನುಮೋದನೆ ನೀಡಿ, ಅಕ್ರಮ ನೇಮಕಾತಿಯನ್ನು ತಡೆಗಟ್ಟಬೇಕು. 2008, ಅಕ್ಟೋಬರ್ 26ರ ಆದೇಶದಂತೆ ಎಲ್ಲ ನೌಕರರಿಗೆ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಜನಶ್ರೀ ವಿಮಾ ಯೋಜನೆ ಜಾರಿಗೆ ತರಬೇಕು. ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು, ನೌಕರರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ. ಸಿಇಓ ಡಾ. ಬಸವರಾಜಪ್ಪ ಅವರಿಗೆ ನೀಡಿದರು.

ಗ್ರಾ.ಪಂ. ನೌಕರರ ಸಂ.ಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನೆಪ್ಪ ಹೆಬಸೂರು, ಖಜಾಂಚಿ ಜಗದೀಶ ಮಣ್ಣಮ್ಮನವರ, ಗೌರವ ಕಾರ್ಯದರ್ಶಿ ಬಿ.ಐ.ಈಳಗೇರ, ಕೆ.ಸಿ. ಅಜ್ಜೊಡಿಮಠ, ಉಪಾಧ್ಯಕ್ಷ ಎಂ.ಆರ್. ದೊಡ್ಮನಿ, ಸಹ ಕಾರ್ಯದರ್ಶಿ ಬಸವರಾಜ ಪೂಜಾರ ಸೇರಿದಂತೆ ನೂರಾರು ಗ್ರಾ.ಪಂ. ನೌಕರರು ಭಾಗವಹಿಸಿದ್ದರು.

ಶಿಗ್ಗಾಂವ ವರದಿ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಗ್ರಾಮ ಪಂಚಾಯತ ನೌಕರರ ಸಂಘದ ಪದಾಧಿಕಾರಿಕಾರಿಗಳು ಮಂಗಳವಾರ ಪಟ್ಟಣದ ತಾ.ಪಂ. ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಗ್ರಾ.ಪಂ. ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾ.ಪಂ. ಕಾರ್ಯನಿರ್ವಾಕ ಅಧಿಕಾರಿ ಬಿ. ರೇವಣ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಪೂಜಾರ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪದಾಧಿಕಾರಿಗಳಾದ ಎಂ.ಡಿ. ವಿಜಾಪುರ, ಜೆ.ಡಿ.ಅಂಗಡಿ, ಬಿ.ಎಸ್. ಅಣ್ಣಿಗೇರಿ, ಕೆ.ಎಸ್. ನಾಗರಹಳ್ಳಿ, ಬಿ.ಎಚ್. ಓಲೇಕಾರ, ಪಿ.ಎಸ್. ಕಡಕಬಾವಿ, ಎಸ್.ಎಂ.ಕಲಾಲ, ವಿ.ಎಸ್. ಗುಲಗಂಜಿಕೊಪ್ಪ, ಜಿ.ಎಚ್. ಗುಳೇದ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸವಣೂರ ವರದಿ
ಕನಿಷ್ಠ ವೇತನ, ವಿಮಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿರುವ ತಾಲ್ಲೂಕಿನ ಎಲ್ಲ ಗ್ರಾ.ಪಂ. ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ಸವಣೂರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಗ್ರಾ.ಪಂ. ನೌಕರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಗಿರೀಶ ಪಾಟೀಲ, ಕಾರ್ಯದರ್ಶಿ ಶ್ರೀಕಾಂತ ಮತ್ತೂರ, ಪದಾಧಿಕಾರಿಗಳಾದ ಐ.ಬಿ ಬಿಕ್ಕಣ್ಣನವರ್, ಎಮ್.ಟಿ ಹೂಗಾರ, ಎಂ.ಬಿ ನೆಲ್ಲೂರ, ಬಿ.ವೈ. ವಡ್ಡರ್, ರಾಜು ಹರಿಜನ್ ಸೇರಿದಂತೆ ಎಲ್ಲ ಪಂಚಾಯ್ತಿಗಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ತಾ.ಪಂ ಇ.ಓ ಪರವಾಗಿ ವ್ಯವಸ್ಥಾಪಕರಾದ ಎಫ್.ಎಮ್ ಕೊರಚರ, ಸಹಾಯಕರಾದ ಬಿ.ಎಸ್ ದೇವಗಿರಿ ಮನವಿ ಸ್ವೀಕರಿಸಿದರು.

ಹಿರೇಕೆರೂರ ವರದಿ
ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಗ್ರಾ.ಪಂ. ನೌಕರರು ಮಂಗಳವಾರ ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾ.ಪಂ. ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ದೊಡ್ಡಮನಿ, ಗುಡ್ಡಪ್ಪ ಗೌಡರ, ಎಲ್.ಬಿ. ಹೊಗೆಸೊಪ್ಪಿನವರ, ಸಿ.ಎಸ್. ತಂಬಳ್ಳೇರ, ಚಂದ್ರಪ್ಪ ಲೆಕ್ಕಪ್ಪಳವರ, ಹನುಮಂತಪ್ಪ ತಳವಾರ, ಕುಸುಮಾ ದೊಡ್ಡಗೌಡ್ರ, ಸಣ್ಣಗೌಡ ಹೊಟ್ಟೇರ, ಶಂಕ್ರು ಪಾಟೀಲ, ಕೆ.ಜಿ.ಮಟ್ಟಿಕೋಟಿ, ಪರಮೇಶಪ್ಪ ಬಡಿಗೇರ, ಎಂ.ಎಂ. ಬಾರ್ಕಿ, ಭೀಮಣ್ಣ ನಾಗಪ್ಪನವರ, ಪರಮೇಶಪ್ಪ ಗಿರಿಯಣ್ಣನವರ, ಚನ್ನಬಸಪ್ಪ ಸಿಂಗ್ರೇರ, ಮಲ್ಲೇಶಪ್ಪ ಭರಮಣ್ಣನವರ, ಬಸವರಾಜ ಸೀತಿಕೊಂಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT