ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ರಾಮಮಟ್ಟದಿಂದ ಬಣಜಿಗ ಸಮಾಜ ಸಂಘಟಿಸಿ'

Last Updated 5 ಸೆಪ್ಟೆಂಬರ್ 2013, 6:09 IST
ಅಕ್ಷರ ಗಾತ್ರ

ವಿಜಾಪುರ: `ಸರ್ಕಾರದ ಸೌಲಭ್ಯ ಪಡೆ ಯಲು ಸಂಘಟನೆ ಅವಶ್ಯವಾಗಿದ್ದು, ಬಣಜಿಗ ಸಮಾಜ ಬಾಂಧವರು ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಗ್ರಾಮ ಮಟ್ಟದಿಂದ ಸಮಾಜದ ಸಂಘಟನೆಗೆ ಒತ್ತು ನೀಡಬೇಕು' ಎಂದು ಮುಧೋಳ ತಾಲ್ಲೂಕು ಶಿರೋಳ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ದಿಂದ ಬುಧವಾರ  ಇಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ  ಮತ್ತು ಸಮಾಜದ ಮಹಿಳಾ ಘಟಕ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, `ಸಮಾಜದ ಒಳಿತಿಗಾಗಿ ಸಂಘಟನೆ ಮಾಡುವುದು ತಪ್ಪೇನಲ್ಲ. ಬೇರೆ ಸಮಾಜದ ಜೊತೆ ಸಮನ್ವಯತೆಯಿಂದ ಇರಬೇಕು. ಬಣಜಿಗ ಸಮಾಜದಿಂದ ವಿಜಾಪುರ ನಗರದಲ್ಲಿ ಒಂದು ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು. ಅದಕ್ಕೆ ನಾನು ಎಲ್ಲ ರೀತಿಯ ಸಹಾಯ ನೀಡುತ್ತೇನೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಲಾಳ ಸಂಗಿ, ಬಣಜಿಗ ಸಮಾಜದ ಮಂಗಲ ಕಾರ್ಯಾಲಯ ನಿರ್ಮಾಣಕ್ಕೆ ತಾವು ಎರಡು ಎಕರೆ ಜಮೀನು ದಾನ ನೀಡಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇರಲಿದೆ. ಈ ಕಟ್ಟಡಕ್ಕೆ ಸಮಾಜ ಬಾಂಧವರು ಉದಾರ ದೇಣಿಗೆ ನೀಡಲು ಮುಂದೆ ಬರಬೇಕು ಎಂದು ವಿನಂತಿಸಿದರು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಯಲ್ಲಿ  ಹೆಚ್ಚು ಅಂಕ ಗಳಿಸಿದ ಸಮಾಜದ 41 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಣಜಿಗ ಸಮಾಜದ ಮುಖಂಡ ರಾದ ಭಾರತಿ ಜಿ. ಜೋಗೂರ ಅವರು ಸಂಘದ ಜಿಲ್ಲಾ ಮಹಿಳಾ ಘಟಕ ಉದ್ಘಾ ಟಿಸಿದರು.
ಇಂದುಮತಿ ಸಾಲಿಮಠ, ಬಣಜಿಗ ಸಮಾಜದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಹುರಕಡ್ಲಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಮುತ್ತುರಾಜ ಕೊಂಡಗೂಳಿ, ನಗರ ಘಟಕದ ಅಧ್ಯಕ್ಷ ಎಸ್.ಎಸ್. ಹತ್ತಿ, ಮಹಾಂತೇಶ ಉಕ್ಕಲಿ, ಮಲ್ಲಿಕಾರ್ಜುನ ರೋಡಗಿ, ಶರಣು ಸಬರದ ವೇದಿಕೆ ಯಲ್ಲಿದ್ದರು.

ಸಿದ್ದಣ್ಣ ಸಕ್ರಿ ಸ್ವಾಗತಿಸಿದರು. ರಾಚಣ್ಣ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು.
ಅಶೋಕ ಹಂಚಲಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್.ವಾಮಾ ವಂದಿಸಿದರು.

ಪದಾಧಿಕಾರಿಗಳ ಆಯ್ಕೆ: ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸುವರ್ಣಾ ಹುರಕಡ್ಲಿ (ಅಧ್ಯಕ್ಷೆ), ಭಾರತಿ ಜೋಗೂರ (ಗೌರವಾಧ್ಯಕ್ಷೆ), ಕಸ್ತೂರಿ ಬಣಜಿಗರ (ಉಪಾಧ್ಯಕ್ಷೆ),  ನಿರ್ಮಲಾ ಕೋರಿ (ಪ್ರಧಾನ ಕಾರ್ಯದರ್ಶಿ), ಸುವರ್ಣಾ ಹುಂಡೇಕಾರ (ಕಾರ್ಯದರ್ಶಿ),  ಸುವರ್ಣಾ ಚಿತ್ತ ವಾಡಗಿ (ಸಹ ಕಾರ್ಯದರ್ಶಿ), ಗಂಗಾಬಾಯಿ ಹತ್ತಿ (ಖಜಾಂಚಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT