ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಕ್ಕಳು ಶಾಲೆಗೆ ಸೇರಲಿ: ಖಂಡ್ರೆ

ಗಡಿನಾಡು ಕನ್ನಡ ಶಾಲೆ ಉದ್ಘಾಟನೆ
Last Updated 27 ಡಿಸೆಂಬರ್ 2012, 8:53 IST
ಅಕ್ಷರ ಗಾತ್ರ

ಭಾಲ್ಕಿ: ಗ್ರಾಮೀಣ ಭಾಗದ ಸಣ್ಣ ಸಣ್ಣ ಮಕ್ಕಳು ಕೂಲಿಗೆ ಹೋಗದೇ ಶಾಲೆಗೆ ಸೇರಬೇಕು. ಯಾವುದೇ ಭಾಷೆಯ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೇ ಎಲ್ಲ ಭಾಷೆಗಳನ್ನು ಗೌರವಿಸಿ ಕಲಿಯಬೇಕು ಎಂದು ಶಾಸಕ ಈಶ್ವರ ಖಂಡ್ರೆ ನುಡಿದರು.

ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದಲ್ಲಿ ಬುಧವಾರ ನಡೆದ ಗಡಿನಾಡು ಕನ್ನಡ ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ವಂಚಿತ ಮಕ್ಕಳು ಯಾವ ಕಡೆಯೂ ಸಿಗದಂತೆ ಶಿಕ್ಷಕರು ನಿಗಾ ವಹಿಸಬೇಕೆಂದು ಬಿಇಓ ಹುನಗುಂದ ಹೇಳಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಬಾಲಿಕಾ ಗೋವಿಂದರಾವ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಕಸಾಪ ಅಧ್ಯಕ್ಷ ಸುಭಾಷ ಹುಲಸೂರೆ, ನಿಕಟಪೂರ್ವ ಅಧ್ಯಕ್ಷ ವೀರಶಟ್ಟಿ ಬಾವುಗೆ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ, ಮುಖ್ಯಗುರು ದಿಲೀಪರಾವ ಸಿಂಧೆ, ವೆಂಕಟರಾವ ಪಾಟೀಲ ಮುಂತಾದವರು ವೇದಿಕೆಯಲ್ಲಿ ಇದ್ದರು. ರಮೇಶ ಬಾಬು ಇಂಚೂರ ಸ್ವಾಗತಿಸಿದರು. ಗೀತಾ ನಿರ್ವಹಿಸಿದರು. ಹರಿದೇವ ಸುಂಕನಾಳೆ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT