ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ

Last Updated 19 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಮುಧೋಳ: ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.ಮುಗಳಖೋಡದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಗಳಖೋಡ ಗ್ರಾಮಕ್ಕೆ ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ರೂ. 64.56 ಲಕ್ಷ ಚರಂಡಿ ನಿರ್ಮಾಣಕ್ಕೆ ರೂ 7.5 ಲಕ್ಷ, ಸಮುದಾಯ ಭವನಕ್ಕೆ ರೂ 40 ಲಕ್ಷ ಸೇರಿ ಒಟ್ಟು 1.35 ಕೋಟಿ ವೆಚ್ಚ ಮಾಡಲಾಗಿದ್ದು, ಕಾಮಗಾರಿಗಳೂ ಉದ್ಘಾಟನೆಗೊಂಡಿವೆ ಎಂದರು.

ನಬಾರ್ಡ್ ಯೋಜನೆಯಲ್ಲಿ ಮುಧೋಳ -ಮುಗಳಖೋಡ ಕೂಡು ರಸ್ತೆಯನ್ನು ರೂ 80 ಲಕ್ಷದಲ್ಲಿ ನಿರ್ಮಾಣ, ರೂ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಶೀಘ್ರ ಪ್ರಾರಂಭಗೊಳ್ಳಲಿವೆ ಎಂದರು.
ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆರ್.ಎಸ್. ತಳೇವಾಡ, ಜಿಪಂ ಮಾಜಿ ಸದಸ್ಯ ಕೆ.ಟಿ. ಪಾಟೀಲ, ಉದಯ ಸಾರವಾಡ, ಅನಂತರಾವ್ ಘೋರ್ಪಡೆ ಮಾತನಾಡಿದರು.
 
ಗುರುಪಾದಯ್ಯ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ರಂಗಾಪುರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಕ್ಕರೆ ಕಾರ್ಖಾನೆ ಮಹಾಮಂಡಳದ ಅಧ್ಯಕ್ಷ ಆರ್.ಟಿ. ಪಾಟೀಲ, ಜಿಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ತಾಪಂ ಅಧ್ಯಕ್ಷೆ ನಿಂಬೆವ್ವ ಹುಲಯಾಳ, ಜಿಪಂ ಸದಸ್ಯೆ ದುರ್ಗವ್ವ ರಗಪ್ಪಗೋಳ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕಾಶೀನಾಥ ಹುಡೇದ, ಗಂಗಪ್ಪ ಉಳ್ಳಾಗಡ್ಡಿ, ಸೋಮಪ್ಪ ಮದುಕರಿ, ಮಹಮ್ಮದ ಬಡಖಾನ, ಪರಸಪ್ಪ ಗಣಿ, ಹಣಮಂತ ಮಂಟೂರ, ಗಂಗಪ್ಪ ಕಳ್ಳೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT