ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲಾಸಿನ ಮಧ್ಯೆ ಬಿರಡೆ ನಿಲ್ಲಿಸಬಲ್ಲಿರಾ?

ಮಾಡಿ ನಲಿ ಸರಣಿ-17
Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಸಾಮಗ್ರಿ:

ಗಾಜಿನ ಗ್ಲಾಸು, ಇಂಕ್ ಡ್ರಾಪರ್, ನೀರು, ಕಾರ್ಕ್ (ಬೆಂಡಿನ ಬಿರಡೆ)

ವಿಧಾನ:

1. ಒಂದು ಗ್ಲಾಸಿನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ.

2. ಅದರ ಮಧ್ಯದಲ್ಲಿ ಒಂದು ಬೆಂಡಿನ ಬಿರಡೆ (ಕಾರ್ಕ್) ಇಡಿ.

3. ಈಗ ಗ್ಲಾಸಿನಲ್ಲಿ ಸಾವಕಾಶವಾಗಿ ನೀರನ್ನು ತುಂಬುತ್ತಾ ಹೋಗಿ.

4. ಗ್ಲಾಸಿನ ಅಂಚಿನವರೆಗೆ ಬರುವವರೆಗೂ ನೀರು ಹಾಕುತ್ತಾ ಬಿರಡೆಯನ್ನು ವೀಕ್ಷಿಸಿ.

5. ಅನಂತರ ಇಂಕ್ ಡ್ರಾಪರ್‌ನ ಸಹಾಯದಿಂದ, ಗ್ಲಾಸಿನಲ್ಲಿನ ನೀರಿನ ಮೇಲ್ಮೈ ಪೀನದಂತೆ ಕಾಣುವವರೆಗೆ ನೀರು ಹಾಕಿ.

ಪ್ರಶ್ನೆ:

1. ಗ್ಲಾಸಿನಲ್ಲಿನ ನೀರು ಮುಕ್ಕಾಲು ಭಾಗದಿಂದ, ಅಂಚಿನವರೆಗೆ ಇದ್ದಾಗ ಬೆಂಡಿನ ಬಿರಡೆ ಎಲ್ಲಿ ತೇಲುತ್ತಿತ್ತು?

2. ಗ್ಲಾಸಿನಲ್ಲಿ ಅಂಚಿನ ಕೆಳಗೆ ನೀರಿದ್ದಾಗ, ಎಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ? ಯಾಕೆ?

3. ಗ್ಲಾಸಿನಲ್ಲಿನ ನೀರಿನ ಮೇಲ್ಮೈ ಪೀನ ಆಕಾರ ಪಡೆದಾಗ ಬೆಂಡಿನ ಬಿರಡೆ ಎಲ್ಲಿ ತೇಲುತ್ತದೆ? ಯಾಕೆ?

4. ಗ್ಲಾಸಿನಲ್ಲಿ ಅಂಚಿನವರೆಗೆ ನೀರಿದ್ದಾಗಲೂ ಹೆಚ್ಚು ನೀರನ್ನು ಹಾಕಲು ಹೇಗೆ ಸಾಧ್ಯವಾಯಿತು?

ಉತ್ತರ:

1. ಬಿರಡೆ ಗ್ಲಾಸಿನ ಒಳಮೈಗೆ ಅಂಟಿಕೊಂಡಂತೆ ಕಾಣುತ್ತದೆ. ಬಿರಡೆ ಎತ್ತರದ ಸ್ಥಳದಲ್ಲಿ ತೇಲುತ್ತದೆ. ಆದ್ದರಿಂದ ಬಿರಡೆ ಗ್ಲಾಸಿನ ಮೈ ಪಕ್ಕಕ್ಕೆ ಬರುತ್ತದೆ. ನೀರು ಗ್ಲಾಸಿನ ಅಂಚಿಗಿದ್ದಾಗ ಬಿರಡೆ ಮಧ್ಯದಲ್ಲಿ ಬರುತ್ತದೆ.

2. ನೀರು ಮತ್ತು ಗ್ಲಾಸಿನ ಮೈ ಸ್ಪರ್ಶಿಸುವ ಸ್ಥಳದಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ. ಯಾಕೆಂದರೆ ಅಲ್ಲಿ ನೀರು ಮತ್ತು ಗ್ಲಾಸಿನ ಅಣುಗಳ ಮಧ್ಯೆ ಆಸಂಜಕ ಬಲ  (Adhesive force) ಇರುವುದರಿಂದ ಅಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ.

3. ಬೆಂಡಿನ ಬಿರಡೆ ನೀರಿನ ಮಧ್ಯದಲ್ಲಿ ತೇಲುತ್ತದೆ.

4. ನೀರಿನ ಮೇಲ್ಮೈ ಎಳೆತದ (Surface Tension) ಪರಿಣಾಮದಿಂದ ನೀರಿನ ಮೇಲ್ಮೈ ಜಗ್ಗಿದ ರಬ್ಬರ್‌ನಂತೆ ಕೆಲಸ ಮಾಡುತ್ತದೆ. ನೀರಿನ ಮೇಲ್ಮೈ ಎಳೆತ ಹಾಗೂ ಆಸಂಜಕ ಬಲದ ಪರಿಣಾಮದಿಂದ ಗ್ಲಾಸಿನಲ್ಲಿ ಹೆಚ್ಚು ನೀರನ್ನು ತುಂಬಲು ಸಾಧ್ಯ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT