ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೋಬಲ್ ಬಿಸಿನೆಸ್ ಚಾಲೆಂಜ್

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಾರ್ಟೆಡ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ (ಸಿಐಎಂಎ) ನಡೆಸಿದ್ದ ಸಿಐಎಂಎ ಗ್ಲೋಬಲ್ ಬಿಸಿನೆಸ್ ಚಾಲೆಂಜ್ (ಜಿಬಿಸಿ) 2012ರ ಸ್ಪರ್ಧೆಯ ಅಂತಿಮ ವಿಜೇತರನ್ನು ಘೋಷಿಸಿದೆ. ಇದರ ಅಂತಿಮ ಸ್ಪರ್ಧೆಯು ಮುಂಬೈನಲ್ಲಿ ಮಾರ್ಚ್ 10ರಂದು ನಡೆಯಲಿದೆ.

4ನೇ ಆವೃತ್ತಿಯ ಗ್ಲೋಬಲ್ ಬಿಸಿನೆಸ್ ಚಾಲೆಂಜ್ ಸ್ಪರ್ಧೆಗೆ ಈ ಬಾರಿ ದೇಶದಾದ್ಯಂತ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ವಿದ್ಯಾರ್ಥಿಗಳಲ್ಲಿ ವ್ಯಾಪಾರ ಕುಶಲತೆ ಪ್ರದರ್ಶಿಸಲು ಅತ್ಯುನ್ನತ ವೇದಿಕೆ ಈ ಸ್ಪರ್ಧೆಯಾಗಿದೆ ಎಂದು ಸಿಐಎಂಎ ಇಂಡಿಯಾ ಮುಖ್ಯ ಪ್ರತಿನಿಧಿ ಆರತಿ ಪೋರ್ವಾಲ್ ಹೇಳುತ್ತಾರೆ.

ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ `ವಿಷಯ ಅಧ್ಯಯನ~ ಸ್ಪರ್ಧೆ ಇದಾಗಿದ್ದು, ದೇಶದ ವಿವಿಧ ಕಾಲೇಜುಗಳ 400 ತಂಡಗಳು ನೋಂದಣಿಯಾಗಿದ್ದವು. ದೇಶದ 100 ವಿಶ್ವವಿದ್ಯಾಲಯಗಳ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೀಗ ಸ್ಪರ್ಧೆಗೆ ಆಯ್ಕೆಯಾದವರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು), ಕಾರ್ಪೊರೇಟ್ ಹಾಂಕೋಸ್- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿರುಚಿ), ಕ್ರೈಸಿಸ್ ಬ್ರೇಕರ್ಸ್ - ಚಿನ್ಮಯ ವಿದ್ಯಾಪೀಠ (ಎರ್ನಾಕುಲಮ್ - ಕೊಚ್ಚಿ), ಗ್ರೇ ಹಾಕ್ಸ್ - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎನ್‌ಕೋರ್ `ಇವು~ ತಂತ್ರಜ್ಞಾನ (ತಿರುಚಿ), ಶುದ್- ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಸುರತ್ಕಲ್) ಮತ್ತು ಎಸ್ಪ್ರಿಟ್ - ಎಸ್‌ಪಿರಿಟ್ ಕಾಲೇಜು (ಕೊಟ್ಟಾಯಂ) ದಕ್ಷಿಣ ಪ್ರಾದೇಶಿಕದ ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT