ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಲಿಗಳ ಸೇಲ್ ಮೇಳ!

Last Updated 23 ಫೆಬ್ರುವರಿ 2011, 9:30 IST
ಅಕ್ಷರ ಗಾತ್ರ

ಬೆಳಗಾವಿ: ಚಪ್ಪಲಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಯಿತು. ಜನರೂ ಮುಗಿ ಬಿದ್ದು ಖರೀದಿ ಮಾಡಿದರು. ಹಾಗಂತ ಇದು ಕಡಿಮೆ ಬೆಲೆಗೆ ಮಾರಾಟ ಮಾಡುವ ‘ಸೇಲ್’ ಮೇಳ ಅಲ್ಲ.
ವಿಶ್ವ ಕನ್ನಡ ಸಮ್ಮೇಳನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ರಸ್ತೆ ಬದಿ ಇರುವ ಡಬ್ಬಾ ಅಂಗಡಿಗಳ ತೆರವು ಮಾಡುತ್ತಿದೆ. ಮಂಗಳವಾರ ಗೊಂಧಳಿಗಲ್ಲಿ ಬಳಿ ಇರುವ ಚಪ್ಪಲಿ ಅಂಗಡಿಗಳ ಮಾಲೀಕರು, ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಅಂಗಡಿಯಲ್ಲಿರುವ ಸ್ಟಾಕ್ ಕ್ಲಿಯರ್ ಮಾಡಲು ಯೋಚಿಸಿದರು. ಪರಿಣಾಮ ಕಡಿಮೆ ಬೆಲೆ ಮಾರಾಟಕ್ಕೆ ಇಳಿದರು.

ಒಂದೆಡೆ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದರಿಂದ ಮುಂದೆ ಎಲ್ಲಿ ವ್ಯಾಪಾರ ಆರಂಭಿಸಬೇಕು ಎಂಬ ಸಮಸ್ಯೆ ಇದ್ದರೆ, ಮತ್ತೊಂದೆಡೆ ಸ್ಟಾಕ್ ಅನ್ನು ಮನೆಯಲ್ಲಿ ಒಯ್ದು ಇಟ್ಟುಕೊಳ್ಳುವುದು ಎಲ್ಲಿ ಎಂಬ ಸಮಸ್ಯೆ ಅವರಿಗೆ ಎದುರಾಗಿದೆ.ಆದ್ದರಿಂದ ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಸ್ಟಾಕ್ ಕ್ಲಿಯರ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಅಷ್ಟು ಬೇಗನೆ ಕೊಂಡುಕೊಳ್ಳುವವರು ಯಾರು? ಅದಕ್ಕೆಂದೇ ಕಡಿಮೆ ಬೆಲೆಗೆ ಮಾರಾಟಕ್ಕೆ ಮಾಡುತ್ತಿದ್ದಾರೆ.

ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎರಡು ಬಾರಿ ಕೂಗು ಹಾಕಿದ್ದೇ ತಡ ಜನರು ಒಬ್ಬೊಬ್ಬರಾಗಿಯೇ ಜಮಾಯಿಸತೊಡಗಿಸಿದರು. ಹತ್ತು ನಿಮಿಷದಲ್ಲಿ ಜನರು ಮುಗಿಬಿದ್ದು ಖರೀದಿಸಲಾರಂಭಿಸಿದರು.ಅಂಗಡಿಯಲ್ಲಿ ಗದ್ದಲವಾಗುತ್ತಿದ್ದಂತೆಯೇ ಕೈಚಳಕ ತೋರಿಸುವ ಕೆಲವರು ಅಲ್ಲಿ ಸೇರಿಕೊಂಡರು. ಸದ್ದಿಲ್ಲದೇ ಹಲವಾರು ಜತೆ ಚಪ್ಪಲಿಯೊಂದಿಗೆ ಮಾಯವಾದರು.
ಇದು ಇಂದು ಒಂದು ದಿನದ್ದಲ್ಲ. ಕಳೆದ ಹಲವಾರು ದಿನಗಳಿಂದ ಪಾಲಿಕೆಯು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿದೆ. ಆ ಅಂಗಡಿಗಳ ಜನರು ಹೀಗೆಯೇ ತಮ್ಮಲ್ಲಿರುವ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT