ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಪಾಂಜಿಗಳಿಗೂ ಅಡುಗೆ ಮೋಹ!

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಐಎಎನ್ಎಸ್): ಆಲೂಗಡ್ಡೆ, ಸಿಹಿಗೆಣಸು ಸಿಕ್ಕಿದರೆ ಬಾಚಿಕೊಂಡು ತಿನ್ನುವ ಚಿಂಪಾಂಜಿಗಳು ಪಾಕಶಾಸ್ತ್ರ ಪ್ರವೀಣವಾಗುವ ಲಕ್ಷಣಗಳನ್ನೂ ಹೊಂದಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಬೆಂಕಿಯ ಸಹಾಯದಿಂದ ಅಡುಗೆ ತಯಾರಿಸುವ ಕಲೆ ‘ಮಂಗನಿಂದ ಮಾನವ’ ಎಂಬ ವಿಕಾಸವಾದದಲ್ಲಿ ಬೆಳೆದುಬಂತು. ಮನುಷ್ಯನಿಗಷ್ಟೇ ಕರಗತ­ವಾಗಿರುವ ಕಲೆಯಿದು. ಆದರೆ ಚಿಂಪಾಂಜಿಗಳ ಮೆದುಳಿನಲ್ಲೂ ಪಾಕಶಾಸ್ತ್ರ ಪ್ರಾವೀಣ್ಯಕ್ಕೆ ಬೇಕಾದ ಕೆಲವೊಂದು ಅಂಶಗಳು ಇವೆ. ಅವು­ಗಳನ್ನು ಪಳಗಿಸಿದರೆ ಅಥವಾ ತರಬೇತಿ ನೀಡಿದರೆ ಅವುಗಳೂ ಅಡುಗೆ ಮಾಡಬಲ್ಲವು ಎಂಬುದು ಇತ್ತೀಚಿನ ಅಧ್ಯಯನದಿಂದ ಪತ್ತೆಯಾಗಿದೆ ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿ ಫೆಲಿಕ್ಸ್‌ ವಾರ್ನ್‌ಕೆನ್‌ ಅವರು ಹೇಳಿದ್ದಾರೆ.

ಕೆಲವು ಚಿಂಪಾಂಜಿಗಳಿಗೆ ಸಿಹಿಗೆಣಸನ್ನು ತಿನ್ನಲು ಕೊಟ್ಟಾಗ ಅವುಗಳಲ್ಲಿ ಒಂದು ಚಿಂಪಾಂಜಿ ಅದನ್ನು ಅಡುಗೆ ಮಾಡುವ ಸಾಧನದ ಮೇಲೆ ಇರಿಸಿತಲ್ಲದೆ ಚೆನ್ನಾಗಿ ಬೆಂದ ನಂತರ ಅದನ್ನು ತಿಂದಿತು. ಅಪ್ಪಿತಪ್ಪಿ ಒಂದು ಚಿಂಪಾಂಜಿ ಹಾಗೆ ಮಾಡಿತು ಅಂದುಕೊಳ್ಳು­ವಷ್ಟ­ರಲ್ಲಿ ಇನ್ನೂ ಕೆಲವು ಚಿಂಪಾಂಜಿಗಳು ಹಾಗೇ ಮಾಡಿದ್ದು ಕಂಡುಬಂತು. ಇದು ನಮಗೆ ಅಧ್ಯಯನಕ್ಕೆ ಪ್ರೇರಣೆ ನೀಡಿತು ಎಂದು ಫೆಲಿಕ್ಸ್‌ ವಿವರಿಸಿ­ದ್ದಾರೆ. ಈ ಅಧ್ಯಯನ ವರದಿ ‘ರಾಯಲ್‌ ಸೊಸೈಟಿ ಬಿ’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT