ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್ ಮಾರುಕಟ್ಟೆಯಲ್ಲಿ ಕಸದ ರಾಶಿ!

Last Updated 8 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಹಾಸನ: ಶುಚಿತ್ವದ ಕೊರತೆಯಿಂದ ಮೊದಲೇ ಗಬ್ಬು ನಾರುತ್ತಿದ್ದ ಹಾಸನದ ಚಿಕನ್ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಜನರು ಕಾಲಿಡಲೂ ಹಿಂಜರಿಯುತ್ತಿದ್ದಾರೆ. ಎರಡು ದಿನಗಳಿಂದ ಇ್ಲ್ಲಲಿ ಕಸ ಎತ್ತದಿರುವ ಕಾರಣ ಒಳಗೆ ಅಸಹನೀಯವಾದ ವಾತಾವರಣ           ನಿರ್ಮಾಣವಾಗಿದೆ.

ನಗರಸಭೆಯ ಪಕ್ಕದಲ್ಲೇ ಇರುವ ಚಿಕನ್ ಮಾರ್ಕೆಟ್ ಹಿಂದಿನಿಂದಲೂ ಶುಚಿತ್ವದ ಕೊರತೆ ಎದುರಿಸುತ್ತಿತ್ತು. ಇಷ್ಟಾದರೂ ಸುಮಾರು ಒಂದು ವರ್ಷದ ಹಿಂದೆ ಹೊಸಲೈನ್ ರಸ್ತೆ ಮಧ್ಯ ಭಾಗದಲ್ಲಿದ್ದ ಮಟನ್ ಮಾರುಕಟ್ಟೆಯನ್ನೂ ಇದೇ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇದಾದ ನಂತರ ಇಲ್ಲಿಯ ಪರಿಸ್ಥಿತಿ ತೀರ ಹದಗೆಟ್ಟಿತ್ತು.
ಮಾರುಕಟ್ಟೆ ದೂರ ಹೋದ ಕಾರಣ ಅನೇಕ ಬಡಾ    ವಣೆಗಳಲ್ಲೂ ಸಣ್ಣ-ಪುಟ್ಟ ಅಂಗಡಿಗಳು ಆರಂಭವಾಗಿದ್ದವು. ಅದೇನೇ ಇದ್ದರೂ ಶುಕ್ರವಾರ ಇಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಮಾರುಕಟ್ಟೆಯಲ್ಲಿ ಇರಲು ಸಾಧ್ಯವಾಗದೆ ಕೆಲವು ಅಂಗಡಿಗಳ ಮಾಲೀಕರೇ ಅಂಗಡಿಗಳನ್ನು ಮುಚ್ಚ್ದ್ದಿದರು. ಇನ್ನು ಗ್ರಾಹಕರ ಸ್ಥಿತಿಯನ್ನು ಹೇಳಬೇಕಾಗಿಲ್ಲ. ಬೆಳಿಗ್ಗೆ ಮಾರುಕಟ್ಟೆಯೊಳಗೆ ಹೋಗಿ ನೋಡಿದರೆ ಎಲ್ಲೆಂದರಲ್ಲಿ ಪ್ರಾಣಿಗಳ ಅಂಗಾಂಗಗಳು ಬಿದ್ದಿರುವುದು ಗೋಚರಿಸಿತು.
ಇಂಥ ಸ್ಥಿತಿಗೆ ನವರಾತ್ರಿ ಹಬ್ಬದ ಒತ್ತಡವೇ ಕಾರಣ ಎಂದು ಪಾಲಿಕೆ ಅಧಿಕಾರಿಗಳು ನುಡಿದಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ  ಕಸ್ತೂರಬಾ ರಸ್ತೆಯ ಸುತ್ತ ಮುತ್ತ     ಮಾರುಕಟ್ಟೆಯಲ್ಲಿ ಸುಮಾರು ಒಂದು ವಾರದಿಂದ ಭಾರಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಪ್ರತಿ ದಿನ ಲೋಡುಗಟ್ಟಲೆ ಕಸ ಸಂಗ್ರಹವಾಗುತ್ತಿತ್ತು. ಇದನ್ನು ಶುಚಿಗೊಳಿಸುವುದರೊಳಗೆ ಸಿಬ್ಬಂದಿ ಸುಸ್ತಾಗುತ್ತಿದ್ದರು. ಆದ್ದರಿಂದ ಚಿಕನ್ ಮಾರುಕಟ್ಟೆ ಪ್ರದೇಶವನ್ನು ಶುಚಿಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಇಂಥ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನುಡಿಯುತ್ತಾರೆ.

ಅವರದ್ದೇ ಹೊಣೆ: `ಚಿಕನ್ ಮಾರುಕಟ್ಟೆಯ ಕಸವನ್ನು ದೂರದ ಅಗಿಲೆಯಲ್ಲಿ ನಿರ್ಮಿಸಿರುವ ಕಸದ ತೊಟ್ಟಿಗೆ ಹಾಕುವುದು ವ್ಯಾಪಾರಿಗಳದ್ದೇ ಜವಾಬ್ದಾರಿ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಾಗಲೇ ಅವರಿಗೆ ಈ ಕರಾರು ಹಾಕಲಾಗಿದೆ~ ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.

`ಜನರಿಗೆ ತೊಂದರೆಯಾಗದಂತೆ ಇಲ್ಲಿಯ ಕಸವನ್ನು ಸಾಗಾಣಿಕೆ ಮಾಡುವುದು ಮತ್ತು ಶುಚಿತ್ವ ಕಾಪಾಡು ವುದು ವ್ಯಾಪಾರಿಗಳ ಜವಾಬ್ದಾರಿ. ಆದರೆ ಅವರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ನಗರಸಭೆ ಆ ಕಾರ್ಯವನ್ನು ಮಾಡುತ್ತಿದೆ. ಅಗಿಲೆಯಲ್ಲಿ ವೈಜ್ಞಾ        ನಿಕವಾಗಿ ತ್ಯಾಜ್ಯ ವಸ್ತು ವಿಲೇವಾರಿ ಘಟಕವನ್ನು ಒಂದೆರಡು ತಿಂಗಳಲ್ಲೇ ಸಿದ್ಧಪಡಿಸಲಾಗುವುದು. ಇದಾದ ಮೇಲೆ ಇಲ್ಲಿನ ವ್ಯಾಪಾರಿಗಳಿಗೆ ಒಂದು ಆಟೋ ನೀಡಿ ಕಸವನ್ನು ಸಾಗಿಸಲು ವ್ಯವಸ್ಥೆ ಮಾಡಲಾಗುವುದು~ ಎಂದು ಅವರು ತಿಳಿಸಿದ್ದಾರೆ.

ಹಬ್ಬದ ಸಂದರ್ಭಗಳಲ್ಲಿ ಕಸ್ತೂರಬಾ ರಸ್ತೆಯ ಮಾರ್ಕೆಟ್ ಆವರಣದಲ್ಲಿ ಸಾಮಾನ್ಯ ದಿನಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕಸ ಸಂಗ್ರಹವಾಗುತ್ತದೆ. ನಗರಸಭೆಯ ಸಿಬ್ಬಂದಿ ಇಲ್ಲಿಯೇ ಹೆಚ್ಚು ಗಮನ ಕೊಡಬೇಕಾಗುತ್ತದೆ. ನವರಾತ್ರಿ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಲ್ಲಿ ಶುಚಿತ್ವ ಕಾಯ್ದುಕೊಳ್ಳುವುದೇ ದೊಡ್ಡ ಸಾಹಸವಾಗಿತ್ತು ಎಂದು ಆಯುಕ್ತರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT