ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದು ಕೇವಲ ‘ಅಂಕಿ-ಅಂಶಗಳ ಮೋಡಿಗಾರ’

ಹಣಕಾಸು ಸಚಿವರಿಗೆ ಬಿಜೆಪಿ ತಿರುಗೇಟು
Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಎನ್‌ಡಿಎ ಆಡಳಿ­ತಾ ವಧಿಯಲ್ಲಿಯ ಅಭಿವೃದ್ಧಿ ಕಾರ್ಯಗಳ ಕುರಿತು ನರೇಂದ್ರ ಮೋದಿ ಅವರ ಹೇಳಿಕೆಯನ್ನು ‘ವಾಸ್ತವಾಂಶಗಳ ನಕಲಿ ಎನ್‌ಕೌಂಟರ್‌’ ಎಂದು ಮೂದಲಿ ಸಿದ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಬಿಜೆಪಿ ಸೋಮವಾರ ತಿರುಗೇಟು ನೀಡಿದೆ.

‘ವಾಸ್ತವಾಂಶಗಳ ಮೇಲೆ ಭಯೋತ್ಪಾದನೆ’ ನಡೆಸುತ್ತಿರುವ ಹಣಕಾಸು ಸಚಿವ ಚಿದಂಬರಂ ಅವರು ಕೇವಲ ’ಅಂಕಿ, ಸಂಖ್ಯೆಗಳ ಮೋಡಿಗಾರ’ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ್‌ ಸಿನ್ಹಾ ಲೇವಡಿ ಮಾಡಿದ್ದಾರೆ.

ಒಂಬತ್ತು ವಷರ್ಗಳ ಯುಪಿಎ ಆಡಳಿತಾವಧಿಯನ್ನು ಕೇವಲ ಐದು ವರ್ಷಗಳ ಎನ್‌ಡಿಎ ಆಡಳಿತಾವಧಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಎನ್‌ಡಿಎ ಆಡಳಿತಾವಧಿಯಲ್ಲಿ ಆರ್ಥಿಕ ಬೆಳವಣಿಗೆ 8.4ರಷ್ಟಿತ್ತು. ಆದರೆ, ಇಂದು ಇದರ ಪ್ರಮಾಣ 4.8ಕ್ಕೆ ಕುಸಿದಿದೆ. ಈ ಬಗ್ಗೆ ಚಿದಂಬರಂ ಏನು ಹೇಳುತ್ತಾರೆ ಎಂದು ಮಾಜಿ ಹಣಕಾಸು ಸಚಿವ ಸಿನ್ಹಾ ಸವಾಲು ಹಾಕಿದ್ದಾರೆ. 

ಎನ್‌ಡಿಎ ಕೇವಲ ಐದು ವರ್ಷಗಳಲ್ಲಿ 600 ಲಕ್ಷ ಉದ್ಯೋಗ ಸೃಷ್ಟಿಸಿತ್ತು. ಆದರೆ, ಯುಪಿಎ ಒಂಬತ್ತು ವರ್ಷಗಳಲ್ಲಿ ಸೃಷ್ಟಿಸಿರುವ ಉದ್ಯೋಗ ಕೇವಲ 270 ಲಕ್ಷ ಮಾತ್ರ ಎಂದರು. ಮೋದಿ  ಭಯ ದಲ್ಲಿರುವ ಕಾಂಗ್ರೆಸ್‌ ಅವರ ವಿರುದ್ಧ ದಾಳಿ ನಡೆಸಲು ಸಿಕ್ಕ ಅವಕಾಶಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವು ದಿಲ್ಲ. ಅವರು ದಾಳಿ ನಡೆಸಿದಷ್ಟೂ ಮೋದಿ ಅವರಿಗೆ ಅನುಕೂಲವಾವೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT