ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಆಮದು: ಹೊಸ ದಾಖಲೆ ನಿರೀಕ್ಷೆ

Last Updated 19 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ


ನವದೆಹಲಿ (ಪಿಟಿಐ): ಉತ್ತಮ ಆರ್ಥಿಕ ಪ್ರಗತಿ ಕಂಡುಬಂದಿರುವ ಹಿನ್ನೆಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ  ಚಿನ್ನಾಭರಣಗಳ ಬೇಡಿಕೆ ದ್ವಿಗುಣಗೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಆಮದು ಪ್ರಮಾಣ 918 ಟನ್‌ಗಳನ್ನು ದಾಟಲಿದೆ ಎಂದು ಮೂಲಗಳು ತಿಳಿಸಿವೆ.

 ‘ಇಷ್ಟು ಬೇಗ ಈ ವರ್ಷದ ಒಟ್ಟು ಆಮದು ಪ್ರಮಾಣವನ್ನು ಅಂದಾಜಿಸುವುದು ಕಷ್ಟ, ಆದರೆ, ಬೇಡಿಕೆ ಗಮನಿಸಿದರೆ ಇದು ಕಳೆದ ವರ್ಷದ ಗುರಿಯನ್ನು ದಾಟುವುದು ನಿಶ್ಚಿತ’ ಎಂದು ವಿಶ್ವ ಚಿನ್ನ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಮಿತ್ರಾ ತಿಳಿಸಿದ್ದಾರೆ.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಿನ್ನ ಮಾರಾಟವಾಗುವ ದೇಶ ಭಾರತವಾಗಿದ್ದು, ಜನವರಿ ಒಂದು ತಿಂಗಳಲ್ಲೇ ಚಿನ್ನದ ಮಾರಾಟ 100 ಟನ್‌ಗಳನ್ನು ದಾಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 85 ಟನ್ ಚಿನ್ನ ಮಾರಾಟವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ  ಆರ್ಥಿಕ ವೃದ್ಧಿ ದರ (ಜಿಡಿಪಿ) ಉತ್ತಮ ಪ್ರಗತಿ ದಾಖಲಿಸಿದೆ. ಕೃಷಿ ಕ್ಷೇತ್ರವೂ ಉತ್ತಮ ಬೆಳವಣಿಗೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಚಿನ್ನ ಕೊಳ್ಳುವ ರೈತರ ಹಾಗೂ ಗ್ರಾಮೀಣಭಾಗದ ಜನತೆಯ ಸಾಮರ್ಥ್ಯ ಹೆಚ್ಚಿದೆ. ಇದು ಹೊಸ ಖರೀದಿ ದಾಖಲೆಯನ್ನು ನಿರ್ಮಿಸಲಿದೆ ಎಂದು ಚಿನ್ನಾಭರಣ ತಯಾರಕರ ಒಕ್ಕೂಟ ಅಭಿಪ್ರಾಯಪಟ್ಟಿದೆ.

2010ನೇ ಸಾಲಿನಲ್ಲಿ ದೇಶದ ಚಿನ್ನದ ಬೇಡಿಕೆ ದಾಖಲೆ ಮಟ್ಟ 963 ಟನ್‌ಗಳನ್ನು ತಲುಪಿತ್ತು. ಹಿಂದಿನ  ವರ್ಷಕ್ಕೆ ಹೋಲಿಸಿದರೆ ಇದು ಶೇ 60ರಷ್ಟು ವೃದ್ಧಿ ಕಂಡಿದೆ. ಸದ್ಯ ಜಾಗತಿಕ ಪೂರೈಕೆಯಲ್ಲಿ ನಿಧಾನಗತಿಯ ಪ್ರಗತಿ ಇರುವುದರಿಂದ ಈ ವರ್ಷ ಚಿನ್ನದ ಬೆಲೆ ಇನ್ನೂ ಹೆಚ್ಚಬಹುದ ಎಂದು ಒಕ್ಕೂಟ ಹೇಳಿದೆ. ಹಣಕಾಸು ವರ್ಷದ ಅಂತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನದ ಧಾರಣೆ ಪ್ರತಿ ಔನ್ಸ್‌ಗೆ 1,500-1,600 ಡಾಲರ್ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂಗಳಿಗೆ ್ಙ 24,000 ದಿಂದ        ್ಙ 25,000 ತಲುಪಲಿದೆ ಎಂದು ಮಿತ್ರಾ ಹೇಳಿದ್ದಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ್ಙ 21,050 ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1,387 ಡಾಲರ್ ಇದೆ. 

ಮುಂಬರುವ ಬಜೆಟ್‌ನಲ್ಲಿ ಸರ್ಕಾರ ಚಿನ್ನದ ಮೇಲಿನ ಆಮದು ಶುಲ್ಕವನ್ನು ಪ್ರತಿ ಟನ್‌ಗಳಿಗೆ ಈಗಿನ ್ಙ 300 ರಿಂದ ್ಙ 400 ಹೆಚ್ಚಿಸುವ ಯೋಜನೆ ಹೊಂದಿದೆ. 2010ರಲ್ಲಿ ಸರ್ಕಾರ ಚಿನ್ನದ ಮೇಲಿನ ಆಮದು ಶುಲ್ಕದ ಮೂಲಕ ್ಙ 2836.6 ಕೋಟಿ ಲಾಭ ಗಳಿಸಿತ್ತು.

ಚಿನ್ನ ಮತ್ತೆ ತುಟ್ಟಿ?
ದೇಶದಲ್ಲಿ ಚಿನ್ನದ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 66ರಷ್ಟು ವೃದ್ಧಿ ಕಂಡಿದೆ. ಕಳೆದ ವರ್ಷ ಚಿನ್ನದ ಒಟ್ಟು ವಹಿವಾಟು ್ಙ 1,733 ಶತಕೋಟಿ ದಾಟಿತ್ತು. ಚಿನ್ನದ ಗಟ್ಟಿ ಮತ್ತು ನಾಣ್ಯದ ಮೇಲಿನ ಹೂಡಿಕೆ ಹೆಚ್ಚಿದ್ದು, ಕಳೆದ ಮೂರು ವರ್ಷಗಳಲ್ಲಿ ಬೆಲೆ ಶೇ 22ರಷ್ಟು ಹೆಚ್ಚಿದೆ. ಅಂತರ್ ರಾಷ್ಟ್ರೀಯ ನಗದು ಮಾರುಕಟ್ಟೆ ಅಸ್ಥಿರತೆಯಿಂದಾಗಿ ಏಷ್ಯಾದ ಹಲವು ಬ್ಯಾಂಕು ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸಿ ಸಂಗ್ರಹಿಸಿವೆ. ಇದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ.

ಭಾರತದಲ್ಲಿ ಚಿನ್ನಾಭರಣ ಒಡವೆಗಳ ಬೇಡಿಕೆ ಶೇ 69ರಷ್ಟು ಹೆಚ್ಚಿದ್ದು, 745 ಟನ್‌ಗಳಿಗೆ ಏರಿದೆ. ಇದರ ಮೌಲ್ಯ ್ಙ 1,342 ಶತಕೋಟಿ. ಚಿನ್ನದ ನಾಣ್ಯ ಮತ್ತು ಗಟ್ಟಿ ಬೇಡಿಕೆ ಶೇ 60ರಷ್ಟು ವೃದ್ಧಿ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT