ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ರೂ.260, ಬೆಳ್ಳಿ ರೂ.1,320 ಕುಸಿತ

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ (ಪಿಟಿಐ):  ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಶನಿವಾರ ಮತ್ತೆ ಅಲ್ಪ ಇಳಿಕೆ ಕಂಡಿದೆ. ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ 10 ಗ್ರಾಂಗಳಿಗೆ  ನವದೆಹಲಿಯಲ್ಲಿ ರೂ.280, ಮುಂಬೈನಲ್ಲಿ ರೂ.260ರಷ್ಟು ಕಡಿಮೆ ಆಗಿದೆ. ಸಿದ್ಧ ಬೆಳ್ಳಿ ನವದೆಹಲಿಯಲ್ಲಿ  ರೂ.1,600, ಮುಂಬೈನಲ್ಲಿ ರೂ.1,320ರಷ್ಟು ಇಳಿಯಿತು.

ನವದೆಹಲಿ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.30,300ರಲ್ಲೂ, ಅಪರಂಜಿ ಚಿನ್ನ ರೂ.30,500ರಲ್ಲೂ  ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ.49,500ರಲ್ಲಿ ಮಾರಾಟವಾಯಿತು.

ಮುಂಬೈ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ.30,000ಕ್ಕೂ, ಅಪರಂಜಿ ಚಿನ್ನ ರೂ.30,145ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ  ರೂ.50,275ರಲ್ಲಿ  ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT