ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ 10.36ರಷ್ಟಿತ್ತು. `ಸಿಪಿಐ~ ತಗ್ಗಿದರೂ, ಆಹಾರ ಪದಾರ್ಥ ಮತ್ತು ತರಕಾರಿ ಬೆಲೆ ಹೆಚ್ಚಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಜಾರಿ ಖಾತೆಯ ರಾಜ್ಯ ಸಚಿವ ಶ್ರೀಕಾಂತ್ ಕುಮಾರ್ ಜೀನಾ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ತರಕಾರಿ ಶೇ 27, ಖಾದ್ಯ ತೈಲ ಶೇ 16 ಮತ್ತು ಹಾಲಿನ ಉತ್ಪನ್ನಗಳು ಶೇ 12ರಷ್ಟು ತುಟ್ಟಿಯಾಗಿವೆ. ಮೊಟ್ಟೆ, ಮಾಂಸ, ಮೀನು ಮತ್ತು ಬೇಳೆಕಾಳುಗಳ ಧಾರಣೆ ಶೇ 9ರಿಂದ ಶೇ 12ರಷ್ಟು ಹೆಚ್ಚಿದೆ.