ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಾಪಿಲ್ಲಿ : ನಗರದಲ್ಲಿ ಐಸ್ ಸ್ಕೇಟಿಂಗ್ ಮೋಜು

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ನಗರದಲ್ಲಿ ಐಸ್ ಸ್ಕೇಟಿಂಗ್ ಮೋಜು
ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ಈಗ ಮೋಜಿನ ತಾಣವಾಗಿ ಮಾರ್ಪಟ್ಟಿದೆ. ನಗರದಲ್ಲಿ ಮೊದಲ ಬಾರಿಗೆ ತಲೆಎತ್ತಿರುವ `ಐಸ್ ಸ್ಕೇಟಿಂಗ್ ಮತ್ತು ಐಸ್ ಸ್ಲೈಡ್' ಸ್ಕೇಟಿಂಗ್ ಪ್ರಿಯರಿಗೆ ರಸದೌತಣ ನೀಡುತ್ತಿದೆ. ಅಂದಹಾಗೆ, ಈ ಮನರಂಜನಾ ವಲಯವನ್ನು ನಗರಿಗರಿಗೆ ಪರಿಚಯಿಸಿರುವುದು `ಬಿಯಾಂಡ್ ಬೌಂಡರೀಸ್ ಎಂಟರ್‌ಟೇನ್‌ಮೆಂಟ್ ಲಿಮಿಟೆಡ್'.

ಐದು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಐಸ್ ಸ್ಕೇಟಿಂಗ್ ಅಖಾಡ ಸೊನ್ನೆ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣತೆ ಹೊಂದಿದೆ.

ಸ್ಕೇಟಿಂಗ್ ರಿಂಕ್‌ನಲ್ಲಿ ಮಕ್ಕಳು, ಹದಿಹರೆಯದವರು ಹಾಗೂ ಹಿರಿಯರೆಲ್ಲರೂ ಮಂಜುಗಡ್ಡೆಯ ಮೇಲೆ ಚಿಣ್ಣಾಟ ಆಡಬಹುದು. ಸ್ಕೇಟಿಂಗ್ ಬರದವರಿಗಾಗಿ ಸಹಾಯ ಹಸ್ತ ಚಾಚಲು ಇಲ್ಲಿ ತರಬೇತಿ ಪಡೆದ ಸಿಬ್ಬಂದಿ ಇದೆ. 10-15 ನಿಮಿಷದಲ್ಲಿ ತರಬೇತಿ ನೀಡಿ, ನೀವೇ ಸ್ಕೇಟಿಂಗ್ ಮಾಡುವಷ್ಟು ನೈಪುಣ್ಯ ಕಲಿಸಿಕೊಡುತ್ತಾರೆ. ಇದರ ಜತೆಗೆ  ಐಸ್ ಸ್ಕೇಟಿಂಗ್ ಕಲಾವಿದರು ರಿಂಗ್ ಮೇಲೆ ಪ್ರದರ್ಶನ ನೀಡಿ ಸ್ಕೇಟಿಂಗ್ ಪ್ರಿಯರನ್ನು ರಂಜಿಸಲಿದ್ದಾರೆ' ಎನ್ನುತ್ತಾರೆ ಬಿಯಾಂಡ್ ಬೌಂಡರೀಸ್ ಎಂಟರ್‌ಟೇನ್‌ಮೆಂಟ್ ಲಿಮಿಟೆಡ್‌ನ ನಿರ್ದೇಶಕಿ ರೇಣುಕಾ ರಾಜಮೋಹನ್.

ಟಾಟಾ ಡೊಕೊಮೊ ಕೊಡುಗೆ
ಟಾಟಾ ಟೆಲಿ ಸರ್ವೀಸಸ್‌ನ ಏಕೀಕೃತ ದೂರಸಂಪರ್ಕ ಬ್ರ್ಯಾಂಡ್ ಟಾಟಾ ಡೊಕೊಮೊ, ಜಿಎಸ್‌ಎಂ ಪ್ರಿಪೇಯ್ಡ ಗ್ರಾಹಕರಿಗಾಗಿ 2ಜಿ ಡಾಟಾ ಪ್ಯಾಕ್ ಪರಿಚಯಿಸಿದೆ.

ಈ ಕೊಡುಗೆ ಕರ್ನಾಟಕದ ಎಲ್ಲ ಪ್ರಿಪೇಯ್ಡ ಗ್ರಾಹಕರಿಗೆ ಲಭ್ಯವಾಗಲಿದೆ. ರೂ. 46ರ 2ಜಿ ಡಾಟಾ ಪ್ಯಾಕ್ 2013 ಎಂಬಿ ಡಾಟಾ ಸಾಮರ್ಥ್ಯದೊಂದಿಗೆ ಐದು ದಿನಗಳ ವ್ಯಾಲಿಡಿಟಿ ಹೊಂದಿದೆ. 2ಜಿ ಡಾಟಾಪ್ಯಾಕ್ ಎಲೆಕ್ಟ್ರಾನಿಕ್‌ರಿಚಾರ್ಜ್‌ನೊಂದಿಗೆ ಜನವರಿ 3ರವರೆಗೆ ಲಭ್ಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT