ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಂಭ್ರಮ

Last Updated 21 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಂಬೆ ಹೈಕೋರ್ಟ್  ಕಸಾಬ್‌ಗೆ ಮರಣ ದಂಡನೆ ಶಿಕ್ಷೆಯನ್ನು ಕಾಯಂಗೊಳಿಸಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೋರ್ಟಿನ ಹೊರಗೆ ನೆರೆದಿದ್ದ ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾದ ‘ಮುಂಬೈ ಯುವ ಸಂಘಟನೆ’ ಯ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ತೀರ್ಪನ್ನು ಸ್ವಾಗತಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಪ್ರದೀಪ್ ಭವನಾನಿ, ‘ಅಮಾಯಕ ಮುಗ್ಧರನ್ನು ಕೊಂದಿದ್ದ ಕಸಾಬ್ ಈ ಶಿಕ್ಷೆ ಪಡೆಯಲೇಬೇಕಿತ್ತು’ ಎಂದು ಹೇಳಿದರು.

ಈ ದಿಸೆಯಲ್ಲಿನ ನ್ಯಾಯಾಂಗ ಹೋರಾಟದಲ್ಲಿ ಸರ್ಕಾರಿ ವಿಶೇಷ ವಕೀಲ ಉಜ್ವಲ್ ನಿಕ್ಕಂ ಅವರ ಶ್ರಮ ಅನನ್ಯವಾದುದು ಎಂದು ಹೇಳಿದ ಅವರು ಕಸಾಬ್‌ನನ್ನು ಸಾಧ್ಯವಾದಷ್ಟು ಶೀಘ್ರ ನೇಣಿಗೆ ಏರಿಸಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಮುಂಬೈನಲ್ಲಿ  ಉಜ್ವಲ್ ನಿಕ್ಕಂ ಅವರು ತಂಗಿರುವ ಹೋಟೆಲ್ ಬಳಿಯೂ ಸಾರ್ವಜನಿಕರು ಪಟಾಕಿ ಸಿಡಿಸಿ, ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT