ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಪೊಲೀಸರಿಗೆ ಉತ್ತಮ ಹೆಸರು

Last Updated 21 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಸಾಗರ: ದೇಶದಲ್ಲಿ ಇರುವ ಜನಸಂಖ್ಯೆಗೆ ಅಗತ್ಯವಾದ ರಕ್ಷಣೆ ನೀಡುವಷ್ಟು ಸಿಬ್ಬಂದಿ ಪೊಲೀಸ್ ಇಲಾಖೆಯಲ್ಲಿ ಇಲ್ಲದಿರುವುದರಿಂದ ಅಪರಾಧ ತಡೆಗಟ್ಟುವ ಹಾಗೂ ಅಪರಾಧಿ ಚಟುವಟಿಕೆ ತಕ್ಷಣ ಕಂಡು ಹಿಡಿಯುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಅಗತ್ಯ ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಸಹಾಯ್ ಹೇಳಿದರು.

ಇಲ್ಲಿನ ಮಾರಿಕಾಂಬಾ ವೇದಿಕೆಯಲ್ಲಿ ನಗರಸಭೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆರ್ಥಿಕ ಸಹಕಾರದಿಂದ ಸುಮಾರು  5.50 ಲಕ್ಷ ವೆಚ್ಚದಲ್ಲಿ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ 10 ಸಿಸಿ ಕ್ಯಾಮೆರಾವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಹಾಗೂ ಪೊಲೀಸರು ಸಾಮರಸ್ಯ ಆಗಿದ್ದಲ್ಲಿ ಅಪರಾಧ ಕೃತ್ಯವನ್ನು ತಡೆಗಟ್ಟಲು ಸಾಧ್ಯವಿದೆ. ನಾಗರಿಕರು ಅಪರಾಧ ಚಟುವಟಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸುವ ಅಗತ್ಯವಿದೆ. ಪೊಲೀಸರು ಸಹ ಜನಸ್ನೇಹಿಯಾಗಿ ಇದ್ದರೆ ಉತ್ತಮ ಹೆಸರು ಪಡೆಯಲು ಸಾಧ್ಯ ಆಗುತ್ತದೆ ಎಂದರು.

ಲಾಡೆನ್, ಕಸಬ್ ಇನ್ನಿತರ ಭಯೋತ್ಪಾದಕರ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಆಧುನಿಕ ತಂತ್ರಜ್ಞಾನ ಹೆಚ್ಚಿನ ನೆರವು ನೀಡಿದೆ. ಅದೇರೀತಿ ದೊಡ್ಡದೊಡ್ಡ ನಗರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಅಪರಾಧಿಗಳು ಪೊಲೀಸರ ಕಣ್ಗಾವಲಲ್ಲಿಯೇ ಇರುತ್ತಾರೆ. ಎಂತಹ ಚಾಣಕ್ಷ್ಯತನದಿಂದ ಅಪರಾಧ ಮಾಡಿದರೂ ಅವರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿ ಅಪರಾಧಿಗಳನ್ನು ಹಿಡಿಯಲು ಸುಲಭವಾಗುತ್ತದೆ.

ಅದರಲ್ಲಿಯೂ ದಾನಿಗಳು ಹಾಗೂ ಸಂಘ-ಸಂಸ್ಥೆಗಳು ತಾವೇ ಆರ್ಥಿಕ ಸಹಕಾರ ನೀಡಿ ಸಿಸಿ ಕ್ಯಾಮೆರಾ ಅಳವಡಿಸಲು ಸಹಕಾರ ನೀಡಿರುವುದು ಮಾದರಿ ಆಗಿದೆ ಎಂದು ಹೇಳಿದರು.  ಪೊಲೀಸ್ ವರಿಷ್ಠಾಧಿಕಾರಿ ರಮನ್‌ಗುಪ್ತ ಮಾತನಾಡಿ, ಇದು ತಂತ್ರಜ್ಞಾನ ಯುಗವಾಗಿದೆ. ಪೊಲೀಸರು ಅಹೋರಾತ್ರಿ ಜನರ ರಕ್ಷಣೆಗೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಎಷ್ಟೇ ಕಟ್ಟೆಚ್ಚರ ವಹಿಸಿದ್ದರೂ ಕೆಲವೊಮ್ಮೆ ಅಪರಾಧಗಳು ನಡೆದು ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಸಿಸಿ ಕ್ಯಾಮೆರಾದಂತಹ ತಂತ್ರಜ್ಞಾನಗಳು ಅಪರಾಧಿಗಳನ್ನು ಹಿಡಿಯಲು ನಮ್ಮ ನೆರವಿಗೆ ಬರುತ್ತದೆ ಎಂದು ಹೇಳಿದರು.

ಎಎಸ್‌ಪಿ ಡಾ.ಎಸ್.ಡಿ. ಶರಣಪ್ಪ, ನಗರಸಭೆ ಅಧ್ಯಕ್ಷ ರಾಧಾಕಷ್ಣ ಬೇಂಗ್ರೆ, ಉಪಾಧ್ಯಕ್ಷ ಡಿ. ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾ.ಸ. ನಂಜುಂಡಸ್ವಾಮಿ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಓಮನ್‌ಸಿಂಗ್, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಗೋಪಾಲಕಷ್ಣ ಶ್ಯಾನಭಾಗ್, ಎಸ್.ಕೆ. ಮಂಜುನಾಥ ಶೇಟ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT