ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಬ್ಬಾರ್‌ ಟ್ರಾವೆಲ್ಸ್‌ನ ನಾಲ್ವರ ಬಂಧನ

ಪಾಲೆಂ ಬಳಿ ವೋಲ್ವೊ ಬಸ್‌ ದುರಂತ ಪ್ರಕರಣ
Last Updated 9 ಜನವರಿ 2014, 20:05 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಮೆಹಬೂಬ್‌­­­ನಗರದಲ್ಲಿ ಅ.30ರಂದು ಸಂಭವಿಸಿದ್ದ ವೋಲ್ವೊ ಬಸ್‌ ದುರಂತ ಪ್ರಕರಣ ಸಂಬಂಧ ಆಂಧ್ರದ ಸಿಓಡಿ ಅಧಿಕಾರಿಗಳು ಗುರುವಾರ ಜಬ್ಬಾರ್‌ ಟ್ರಾವೆಲ್ಸ್‌ನ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಜಬ್ಬಾರ್‌ ಟ್ರಾವೆಲ್ಸ್‌ನ ಕಲಾಸಿ­ಪಾಳ್ಯದ ಕಚೇರಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಡಿಎಸ್‌ಪಿ ಮುರಳೀಧರ್‌ ನೇತೃತ್ವದ ತಂಡ, ಟ್ರಾವೆಲ್ಸ್‌ನ ಏಜೆಂಟ್‌ಗಳಾದ ಶಬೀರ್‌, ಅಕ್ರಂ, ಅಮನುಲ್ಲ ಶರೀಫ್‌ ಮತ್ತು ಮಹಮದ್‌ ರಫೀಕ್‌ ಎಂಬುವರನ್ನು ಬಂಧಿಸಿದರು. ನಂತರ ತಮ್ಮದೇ ವಾಹನ­ದಲ್ಲಿ ಅವರನ್ನು ಹೈದರಾ­ಬಾದ್‌ಗೆ ಕರೆದೊಯ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಾವೆಲ್ಸ್‌ ಮಾಲೀಕ ಜಮೀಲ್‌ ಜಬ್ಬಾರ್‌ ಇರಲಿಲ್ಲ. ಹೀಗಾಗಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ಅಧಿಕಾರಿ­ಗಳು, ಜಮೀಲ್‌, ಶುಕ್ರವಾರ ಸಂಜೆ­ಯೊಳಗೆ ಹೈದರಾಬಾದ್‌ನ ಸಿಓಡಿ ಕಚೇರಿಗೆ ಹಾಜರಾಗಿ ಹೇಳಿಕೆ ನೀಡ­ಬೇಕು. ಅವರಿಗೆ ಈ ವಿಷಯ ತಿಳಿಸಿ ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಅ.30ರಂದು ಮೆಹಬೂಬ್‌ನಗರದ ಪಾಲೆಂ ಬಳಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು 45 ಜನ ಸಜೀವ ದಹನವಾಗಿದ್ದರು. ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿ­ಕೊಂಡಿದ್ದ ಆಂಧ್ರ ಪೊಲೀಸರು,  ಜಬ್ಬಾರ್‌ ಟ್ರಾವೆಲ್ಸ್‌ನ ಮಾಲೀಕರಲ್ಲಿ ಒಬ್ಬರಾದ ಶಕೀಲ್‌ ಜಬ್ಬಾರ್‌ ಮತ್ತು ಬಸ್‌ ಚಾಲಕ ಫಿರೋಜ್‌ ಖಾನ್‌ನನ್ನು ಬಂಧಿಸಿದ್ದರು. ಬಳಿಕ ಶಕೀಲ್‌ ಜಾಮೀನಿನ ಮೇಲೆ ಬಿಡುಗಡೆ­ಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT