ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಹರ್ ಯೂನಿಯನ್ ಜಯಭೇರಿ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜವಾಹರ್ ಯೂನಿಯರ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜವಾಹರ್ ತಂಡ 3-2 ಗೋಲುಗಳಿಂದ ಸರ್ಕಾರಿ ಮುದ್ರಣಾಲಯ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ 1-2 ರಲ್ಲಿ ಹಿನ್ನಡೆ ಅನುಭವಿಸಿದ್ದ ಜವಾಹರ್ ತಂಡ ಆ ಬಳಿಕ ಮರುಹೋರಾಟ ನಡೆಸಿ ಗೆಲುವು ಪಡೆಯಿತು.

ರಾಬಿನ್ (28ನೇ ನಿಮಿಷ) ಜವಾಹರ್ ತಂಡಕ್ಕೆ ಮೊದಲ ಗೋಲು ತಂದಿತ್ತರೆ, ಸಜಿತ್ ಕುಮಾರ್ (31) ಮತ್ತು ರಾಜು (45) ಗಳಿಸಿದ ಗೋಲಿನ ನೆರವಿನಿಂದ ಸರ್ಕಾರಿ ಮುದ್ರಣಾಲಯ ಮೇಲುಗೈ ಸಾಧಿಸಿತು. ಆದರೆ ಎರಡನೇ ಅವಧಿಯಲ್ಲಿ ಅತುಲ್ (51) ಹಾಗೂ ನಿರವ್ (69) ಚೆಂಡನ್ನು ಗುರಿ ಸೇರಿಸಿ ಜವಾಹರ್ ತಂಡದ ಗೆಲುವಿಗೆ ಕಾರಣರಾದರು.

ಮಿನರ್ವ ಮತ್ತು ಜುಪಿಟರ್ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನ ಡ್ರಾದಲ್ಲಿ ಅಂತ್ಯಕಂಡಿತು. ಅಲ್ವಿನ್ (53) ಮಿನರ್ವ ಪರ ಹಾಗೂ ಕೊತಾಸ್ (23) ಜುಪಿಟರ್ ಪರವೂ ಗೋಲು ಗಳಿಸಿದರು.

ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಶ್ರೀ ಗಜಾನನ- ಬೆಂಗಳೂರು ಕಿಕ್ಕರ್ಸ್ ಮತ್ತು ನ್ಯಾಷನಲ್ಸ್- ಸನ್ ರೈಸಿಂಗ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT