ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಗೋಧಿ ಉತ್ಪಾದನೆ ಹೆಚ್ಚಳ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯೂರೋಪ್, ಆಸ್ಟ್ರೇಲಿಯಾ ಮತ್ತು ಕಜಕಿಸ್ತಾನದಲ್ಲಿ ಹೆಚ್ಚಿನ ಇಳುವರಿ ದಾಖಲಾದ ಹಿನ್ನೆಲೆಯಲ್ಲಿ,  2011-12ನೇ ಸಾಲಿನ ಜಾಗತಿಕ ಗೋಧಿ ಉತ್ಪಾದನೆಯನ್ನು ಅಂತರರಾಷ್ಟೀಯ ಧಾನ್ಯ ಮಂಡಳಿ (ಐಜಿಸಿ) ಪರಿಷ್ಕರಿಸಿದೆ.

ಕಳೆದ ತಿಂಗಳು `ಐಜಿಸಿ~ ಜಾಗತಿಕ ಗೋಧಿ ಉತ್ಪಾದನೆ 679 ದಶಲಕ್ಷ ಟನ್ ಇರಲಿದೆ ಎಂದು ಹೇಳಿತ್ತು. ಆದರೆ, ಉತ್ತಮ ಇಳುವರಿಯಿಂದ ಈ ಅಂದಾಜು 5 ದಶಲಕ್ಷ ಟನ್‌ಗಳಷ್ಟು ಏರಿಕೆಯಾಗಿದ್ದು, 684 ದಶಲಕ್ಷ ಟನ್‌ಗಳಷ್ಟಾಗಿದೆ.

2009-10ನೇ ಸಾಲಿನಲ್ಲಿ 651 ದಶಲಕ್ಷ ಟನ್‌ಗಳಷ್ಟು ಜಾಗತಿಕ ಗೋಧಿ ಉತ್ಪಾದನೆ ದಾಖಲಾಗಿತ್ತು. ಉತ್ಪಾದನೆ ಹೆಚ್ಚಿದಂತೆ, ಗೋಧಿ ಬಳಕೆ ಪ್ರಮಾಣವೂ ಏರಿಕೆಯಾಗಿದೆ. ಕಳೆದ ವರ್ಷ 655 ದಶಲಕ್ಷ ಟನ್ ಇದ್ದ ಜಾಗತಿಕ ಗೋಧಿ ಬಳಕೆ, 2011-12ನೇ ಸಾಲಿನಲ್ಲಿ 677 ದಶಲಕ್ಷ ಟನ್‌ಗಳಷ್ಟಾಗಲಿದೆ ಎಂದು `ಐಜಿಸಿ~ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT