ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆಯ ಗಣಿ ಈ ಜಿಲ್ಲೆ

Last Updated 30 ಜೂನ್ 2012, 10:00 IST
ಅಕ್ಷರ ಗಾತ್ರ

ಬಾಗಲಕೋಟೆ: ಹಿರಿಯ ಜಾನಪದ ಕಲಾವಿದರಿಗೆ ಮಾಶಾಸನ ನೀಡುವ ಸಂಬಂಧ ಜಿಲ್ಲೆಯ ಅರ್ಹ ಕಲಾವಿದರ ಸಂದರ್ಶನ ಶುಕ್ರವಾರ ನವನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದ ಆವರಣದಲ್ಲಿ ಶುಕ್ರವಾರ ಆರಂಭವಾಯಿತು.

ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ಮೊದಲ ದಿನವೇ ಸುಮಾರು 165 ಕಲಾವಿದರು ದಾಖಲಾತಿ ಗಳೊಂದಿಗೆ ಆಯ್ಕೆ ಸಮಿತಿ ಮುಂದೆ ಹಾಜರಾಗಿ ಮಾಹಿತಿ ಜೊತೆಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾನಂದೂರು ಕೆಂಪಯ್ಯ, ಬಾಗಲ ಕೋಟೆ ಜಿಲ್ಲೆ ಜಾನಪದ ಕಲೆಗಳ ಗಣಿ ಯಾಗಿದೆ, ಇಲ್ಲಿರುವಷ್ಟು ಜನಪದ ಪ್ರಕಾರ ಮತ್ತು ಕಲಾವಿದರು ರಾಜ್ಯದ ಬೇರಾವ ಜಿಲ್ಲೆಯಲ್ಲಿ ಕಾಣಸಿಗದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡಿನ ಯುವ ಸಮುದಾಯಕ್ಕೆ ಜಾನಪದ ಕಲಾ ಪ್ರಕಾರದ ಬಗ್ಗೆ ಅರಿವು ಮೂಡಿಸಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು  ಎಂದರು.

 ಸರ್ಕಾರದ ಯೋಜನೆಗಳನ್ನು ಅರ್ಹ ಕಲಾವಿದರಿಗೆ ತಲುಪಿಸುವ ಜೊತೆಗೆ ಜಾನಪದ ಉಳಿವಿಗೆ ಅಕಾಡೆಮಿಯಿಂದ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇರುವುದಾಗಿ ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ  ಮಾತನಾಡಿ, ಅರ್ಹ ಜಾನಪದ ಕಲಾವಿದರಿಗೆ ಮಾಸಿಕ ರೂ.1 ಸಾವಿರ ಸಹಾಯಧನ ನೀಡುವ ಯೋಜನೆಗೆ ಜಿಲ್ಲೆಯ ಜನಪದ ಕಲಾವಿದರ ಆಯ್ಕೆ ನಡೆಯುತ್ತಿದೆ ಎಂದರು.

ಎರಡು ದಿನಗಳ ಕಾಲ ನಡೆಯುವ ಸಂದರ್ಶನಕ್ಕೆ ಜಿಲ್ಲೆಯ 315 ಕಲಾವಿದರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ, 58 ವರ್ಷವಾಗಿರುವ ಅರ್ಹ ಜನಪದ ಕಲಾವಿದರನ್ನು ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಆಯ್ಕೆ ಮಾಡಿ ಸರ್ಕಾರಕ್ಕೆ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದರು.

 ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಬಾನಂದೂರು ಕೆಂಪಯ್ಯ ಅವರನ್ನು ಬಾಗಲಕೋಟೆ ಜಾನಪದ ಕಲಾವಿದರ ಸಂಘದಿಂದ ಸನ್ಮಾನಿಸಲಾಯಿತು.ಆಯ್ಕೆ ಸಮಿತಿ ಸದಸ್ಯೆ ಹೇಮಲತಾ ವಸ್ತ್ರದ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿದ್ದರು.
 
ಕೆರೂರ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷರಾಗಿ  ಬದಾಮಿ ಆಯ್ಕೆ

ಕೆರೂರ :
ಇಲ್ಲಿನ ಬದಾಮಿ ತಾಲ್ಲೂಕು ಕೆರೂರ ಬ್ಲಾಕ್ ಪ್ರಾಥಮಿಕ ಶಾಲಾ ಶಿಕ್ಷಕ/ಕಿಯರ ಪತ್ತಿನ ಸಹಕಾರಿ ಸಂಘಕ್ಕೆ ಸನ್ 2012-13 ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಉರ್ದು ಶಾಲೆ ಶಿಕ್ಷಕ ಎಸ್ ಎ ಬದಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘ ದ ಕಾರ್ಯದರ್ಶಿ ಎಂ ಎಸ್ ಸಜ್ಜನ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.ಬದಾಮಿ ಅವರನ್ನು ಆಡಳಿತ ಮಂಡಳಿ ಸದಸ್ಯರು,ಶಿಕ್ಷಕ ಬಳಗ ಅಭಿನಂದಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT