ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜಿಯಾ ಕಾಲೇಜಿನೊಂದಿಗೆ ಬೆಂಗಳೂರು ವಿವಿ ಒಪ್ಪಂದ?

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಅಮೆರಿಕ ಸ್ಟೇಟ್ ವಿ.ವಿ.ಯ ಜಾರ್ಜಿಯಾ ಕಾಲೇಜಿನೊಂದಿಗೆ ಜ್ಞಾನ, ಸಂಪನ್ಮೂಲ ಮತ್ತು ಪ್ರಾಧ್ಯಾಪಕರನ್ನು ವಿನಿಮಯ ಮಾಡಿಕೊಳ್ಳುವ ಸಂಬಂಧ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ವೇದಿಕೆ ಸಿದ್ಧಗೊಂಡಿದೆ.

ಜಾರ್ಜಿಯಾ ಕಾಲೇಜಿನ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ಭಾನುವಾರ ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದರು. ಆನ್‌ಲೈನ್ ಮೂಲಕ ಅಲ್ಲಿನ ಪ್ರಾಧ್ಯಾಪಕರು ವಿ.ವಿ. ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿಕೊಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು.

ಜಾರ್ಜಿಯಾ ಕಾಲೇಜಿನ ಶೈಕ್ಷಣಿಕ ವಿಭಾಗದ ಅಧಿಕಾರಿ ಟಾಮ್ ಓರ್ಮ್ಯಾಂಡ್ ಮಾತನಾಡಿ, `ಈ ಒಪ್ಪಂದದ ಮುಖ್ಯ ಉದ್ದೇಶ ಎರಡು ವಿ.ವಿ.ಗಳ ಸಾಮ್ಯತೆಗಳನ್ನು ವೃದ್ಧಿಸಿ ಜ್ಞಾನ, ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಾಗಿದೆ~ ಎಂದರು.

ಕುಲಪತಿ ಡಾ.ಎನ್.ಪ್ರಭುದೇವ್, `ಈ ಒಪ್ಪಂದವು ಖಂಡಿತವಾಗಿಯೂ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸ್ನೇಹಿಯಾಗಿರುತ್ತದೆ~ ಎಂದು ನುಡಿದರು.ಬೆಂಗಳೂರು ವಿ.ವಿ. ಹಿರಿಯ ಅಧಿಕಾರಿಗಳು, ಪ್ರಾಧ್ಯಾಪಕರು ಜಾರ್ಜಿಯಾ ಕಾಲೇಜಿಗೆ ಭೇಟಿ ನೀಡಿದ ನಂತರವಷ್ಟೇ ಒಪ್ಪಂದಕ್ಕೆ ಅಂತಿಮ ರೂಪ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT