ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ಫ್ಲೆಕ್ಸ್‌ಗಳ ತೆರವು

Last Updated 4 ಆಗಸ್ಟ್ 2013, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಜಾಹೀರಾತು ವಿಭಾಗದ ಸಿಬ್ಬಂದಿ, ಜಾಹೀರಾತು ಶುಲ್ಕ ಪಾವತಿಸದ ಕಂಪೆನಿಗಳು ಬಸ್ ತಂಗುದಾಣದಲ್ಲಿ ಅಳವಡಿಸಿದ್ದ ಜಾಹೀರಾತಿನ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.

`ಶುಲ್ಕ ಪಾವತಿಸದ ಕಾರಣ 178 ಬಸ್ ತಂಗುದಾಣಗಳ ಜಾಹೀರಾತಿನ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಮೂಲಕ ರೂ. 1.3 ಕೋಟಿ ಜಾಹೀರಾತು ಶುಲ್ಕ ಸಂಗ್ರಹವಾಗಿದೆ. ನಗರದಲ್ಲಿ 7 ಕಂಪೆನಿಗಳು ಒಟ್ಟು ರೂ.28 ಕೋಟಿ ಜಾಹೀರಾತು ಶುಲ್ಕ ಬಾಕಿ ಉಳಿಸಿಕೊಂಡಿವೆ. ರಿಲಯನ್ಸ್ ಆ್ಯಡ್ಸ್ ರೂ.12.25 ಕೋಟಿ ಮತ್ತು ಒಒಎಚ್ ಟೈಮ್ಸ ಕಂಪೆನಿಯು ರೂ.10.71 ಕೋಟಿ ಬಾಕಿ ಉಳಿಸಿಕೊಂಡಿದೆ. ಬಾಕಿ ಪಾವತಿಗೆ ಈ ಕಂಪೆನಿಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ' ಎಂದು ಜಾಹೀರಾತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT