ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಚೇತರಿಕೆ: ತಜ್ಞರ ಸ್ವಾಗತ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕ­ದಲ್ಲಿ ಸ್ವಲ್ಪ ಮಟ್ಟಿಗಾದರೂ ಪ್ರಗತಿ (ಶೇ 0.4ರಷ್ಟು) ಸಾಧಿಸಿರು­ವುದನ್ನು ಹಣ ಕಾಸು ತಜ್ಞರು ಸ್ವಾಗತಿ­ಸಿದ್ದಾರೆ.

‘ಮಾರುಕಟ್ಟೆ ತಜ್ಞರು ‘ಜಿಡಿಪಿ’ ಶೇ 4ಕ್ಕೆ ಕುಸಿಯಲಿದೆ ಎಂದು ಅಂದಾಜು ಮಾಡಿದ್ದರು. ಆದರೆ, ನಿರೀಕ್ಷೆ ಮೀರಿ ಶೇ 4.8ಕ್ಕೆ ಏರಿಕೆ ಕಂಡಿದೆ. ಇದು ಆಶಾದಾ­ಯಕ ಬೆಳವಣಿಗೆ. ಆದರೆ, ಸರ್ಕಾರ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ದಲ್ಲಿ ಯೋಜನಾ ವೆಚ್ಚದಲ್ಲಿ ಕಡಿತ ಮಾಡಲು ಮುಂದಾದರೆ ಆರ್ಥಿಕ ಪ್ರಗತಿ ಮತ್ತೆ ಕುಸಿಯಲಿದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಆರ್ಥಿಕ ಸಮೀಕ್ಷಾ ತಂಡ ಎಚ್ಚರಿಕೆ ನೀಡಿದೆ.

‘ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಬಜೆಟ್‌ನಲ್ಲಿ ಅಂದಾಜು ಮಾಡಿದ್ದ ಯೋಜನಾ ವೆಚ್ಚ ದಲ್ಲಿ ಶೇ 84ರಷ್ಟು ವ್ಯಯಿಸಲಾಗಿದೆ. ಉಳಿದಿ­ರುವ ಶೇ 16ರಷ್ಟು ಮೊತ್ತವನ್ನು ಉಳಿದ ಐದು ತಿಂಗಳಿಗೆ ಹಂಚಿಕೆ ಮಾಡ ಬೇಕು. ವರ್ಷಾಂತ್ಯದಲ್ಲಿ ಯೋಜನಾ ವೆಚ್ಚದಲ್ಲಿ ಕಡಿತ ಆಗುವುದರಿಂದ ‘ಜಿಡಿಪಿ’ ಕುಸಿಯುವ ಸಾಧ್ಯತೆ ಇದೆ’ ಎಂದು ಈ ಅಧ್ಯಯನ ವಿಶ್ಲೇಷಿಸಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ರಷ್ಟು ‘ಜಿಡಿಪಿ’ ದಾಖ­ಲಾಗುವುದು ಕಷ್ಟ. ಆದರೆ, ಹಣಕಾಸು ಮಾರುಕ­ಟ್ಟೆ ಯಲ್ಲಿ ಸ್ಥಿರತೆ ಮೂಡಿ­ರುವು­ದರಿಂದ ಎರಡು ಮತ್ತು ಮೂರನೇ ತ್ರೈಮಾ­ಸಿಕ ದಲ್ಲಿ ‘ಜಿಡಿಪಿ’ ಚೇತರಿಕೆ ಕಾಣ­ಬಹುದು’ ಎಂದು ಷೇರು ದಲ್ಲಾಳಿ ಸಂಸ್ಥೆ ‘ನೊಮುರಾ’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT