ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 29 ನಾಮಪತ್ರ ತಿರಸ್ಕೃತ

Last Updated 19 ಏಪ್ರಿಲ್ 2013, 13:11 IST
ಅಕ್ಷರ ಗಾತ್ರ

ಕೋಲಾರ: ಮೇ 5 ರಂದು ನಡೆಯುವ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯ ಆರು ಕ್ಷೇತ್ರಗಳಿಂದ ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಒಟ್ಟು 29 ನಾಮಪತ್ರಗಳು ಪರಿಶೀಲನೆ ಸಂದರ್ಭದಲ್ಲಿ ತಿರಸ್ಕೃತಗೊಂಡಿವೆ.

ಮುಳಬಾಗಲು ಕ್ಷೇತ್ರದಲ್ಲಿ 9 ನಾಮಪತ್ರ ತಿರಸ್ಕೃತಗೊಂಡಿವೆ. ಮಾಲೂರಿನಲ್ಲಿ 2, ಕೆಜಿಎಫ್‌ನಲ್ಲಿ 16, ಕೋಲಾರ-1, ಶ್ರೀನಿವಾಸಪುರ-1 ನಾಮಪತ್ರ ತಿರಸ್ಕೃತಗೊಂಡಿದೆ.  ಬಂಗಾರಪೇಟೆ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ತಿರಸ್ಕೃತಗೊಂಡಿಲ್ಲ.

ಮುಳಬಾಗಲು 8 ನಾಮಪತ್ರ ತಿರಸ್ಕೃತ
ಮುಳಬಾಗಲು: ನಾಮ ಪತ್ರಗಳ ಪರಿಶೀಲನೆ ದಿನವಾದ ಗುರುವಾರ ಒಟ್ಟು 40 ನಾಮಪತ್ರ ಪರಿಶೀಲನೆ ನಡೆದು ಎಂಟು ನಾಮಪತ್ರಗಳು ಅನೂರ್ಜಿತಗೊಂಡವು. ಮೂವತ್ತೊಂದು  ನಾಮಪತ್ರ ಅಂಗೀಕಾರಗೊಂಡವು. ಕಾಂಗ್ರೆಸ್‌ನ ಶಾಸಕ ಅಮರೇಶ್, ಜೆಡಿಎಸ್ ಪಕ್ಷದ ಮುನಿಆಂಜಪ್ಪ, ಸಿಪಿಐ ಅಂಬರೀಶ್, ಬಿಜೆಪಿ ಪಟಾಪಟ್ ಶ್ರೀನಿವಾಸ್, ಕೆಜೆಪಿ ದೊಡ್ಡಚೌಡಪ್ಪ, ಬಿಎಸ್‌ಆರ್ ಸಿ.ಕೆ.ಜಗದೀಶ್, ಜೆಡಿಯು ಎಚ್.ಕೆ.ಲಕ್ಷ್ಮಯ್ಯ, ಆರ್‌ಪಿಐ ಸಿ.ರಾಮಕೃಷ್ಣಪ್ಪ, ಪಕ್ಷೇತರರಾದ ಜಿ.ಮಂಜುನಾಥ್, ಆದಿನಾರಾಯಣ, ಸಿ.ವಿ.ಗೋಪಾಲ್, ಚಂದ್ರಪ್ಪ, ವೆಂಕಟರವಣಪ್ಪ, ಶ್ರೀನಿವಾಸ್, ಚೌಡಪ್ಪ, ಶ್ರೀನಿವಾಸ್, ಚಲಪತಿ, ಸುಬ್ರಮಣಿ, ರಂಜಿತ್‌ಕುಮಾರ್, ಟಿ.ವಿ.ಬಾಲಕೃಷ್ಣ, ಎನ್.ಹನುಮಪ್ಪ, ಪಿ.ಎಂ.ಶಿವಣ್ಣ, ವಿ.ಮಾರಪ್ಪ, ವಿ.ನಾಗರಾಜ್, ಕೋದಂಡಪ್ಪ, ಎನ್.ಶ್ರೀನಿವಾಸ್, ಟಿ.ಆರ್.ವೆಂಕಟೇಶಮೂರ್ತಿ, ಎಂ.ಜಿ.ಪಾಪಮ್ಮ, ವೆಂಕಟೇಶಪ್ಪ.ಅಲಂಗೂರು ರಾಮಣ್ಣ, ಕೆ.ಎಂ.ಜಯರಾಮ್ ಅವರ ನಾಮಪತ್ರಗಳು ಅಂಗೀಕಾರಗೊಂಡವು.

ಚಿಕ್ಕವೆಂಕಟಪ್ಪ, ಡಿ.ಎಂ.ನರಸಿಹಪ್ಪ, ಸಿಂಗಪೂರ್ ಗೋವಿಂದ್, ಚಂದ್ರಪ್ಪ, ಎಂ.ವೆಂಕಟೇಶಪ್ಪ, ರಾಧಾಕೃಷ್ಣ, ಪಿ.ರಾಮಚಂದ್ರಪ್ಪ, ಎಂ.ವೆಂಕಟರವಣಪ್ಪ ಅವರ ನಾಮಪತ್ರಗಳು ತಿರಸ್ಕೃತಗೊಂಡವು.

ಅಖಾಡದಲ್ಲಿ 16 ಅಭ್ಯರ್ಥಿಗಳು
ಬಂಗಾರಪೇಟೆ: ಇಲ್ಲಿನ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ್ದ 16 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಲಾಗಿದ್ದು, ಎಲ್ಲ ನಾಮಪತ್ರಗಳು ಅಂಗೀಕಾರವಾಗಿವೆ ಎಂದು ಚುನಾವಣಾಧಿಕಾರಿ ಆಯಿಷಾ ಪರ್ವೀನ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ನಾಮಪತ್ರ ಪರಿಶೀಲನೆ ನಂತರ ಅವರು ಮಾತನಾಡಿ, ನಾಮಪತ್ರ ವಾಪಸ್ ಪಡೆಯಲು ಏ.20 ಶನಿವಾರ 3ರವರೆಗೆ ಕಾಲಾವಕಾಶ ಇದೆ ಎಂದು ಹೇಳಿದರು.

ಅಂತಿಮ ಕಣದಲ್ಲಿನ ಅಭ್ಯರ್ಥಿಗಳು: ಬಿಜೆಪಿಯಿಂದ ಎಂ.ನಾರಾಯಣಸ್ವಾಮಿ, ಕಾಂಗ್ರೆಸ್‌ನಿಂದ ಎಸ್.ಎನ್.ನಾರಾಯಣಸ್ವಾಮಿ, ಜೆಡಿಎಸ್‌ನಿಂದ ರಾಮಚಂದ್ರಪ್ಪ, ಬಿಎಸ್‌ಆರ್‌ನಿಂದ ಕಳವಂಚಿ ವೆಂಕಟೇಶ್, ಸಮಾಜವಾದಿ ಜನತಾ ಪಾರ್ಟಿಯಿಂದ ಕೆ.ವಿ.ಸಂಪತ್ ಕುಮಾರ್, ಕೆಜೆಪಿಯಿಂದ ವಿ.ಶೇಷು, ಬಿಎಸ್‌ಪಿಯಿಂದ ನಾಗರಾಜ್, ಪಕ್ಷೇತರರಾಗಿ ವಿ.ಮಂಜುನಾಥ್, ಮುನಿರತ್ನಂ, ಪಿ.ಎಂ.ರಮೇಶ್, ಶ್ರೀನಾಥ, ಶ್ರೀನಿವಾಸ್, ಸಿ.ನಾಗೇಂದ್ರ, ಸುದರ್ಶನ್, ಜಿ.ಕೆ.ಮಂಜುನಾಥ, ವಿ.ಆರ್.ಪ್ರತಿಮಾ ಅವರು ಅಂತಿಮ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮಾಲೂರು: 2 ನಾಮಪತ್ರ ತಿರಸ್ಕೃತ
ಮಾಲೂರು:  ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರಗಳನ್ನು ಗುರುವಾರ  ಚುನಾವಣಾಧಿಕಾರಿ ಲಿಂಗಣ್ಣಯ್ಯ ಪರಿಶೀಲಿಸಿದರು. 34 ನಾಮಪತ್ರಗಳ ಪೈಕಿ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 32 ನಾಮಪತ್ರಗಳು ಅಂಗೀಕಾರವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಜಿ.ಇ.ರಾಮೇಗೌಡ ರವರಿಗೆ `ಬಿ'ಫಾರಂ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಿರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಬಿಎಸ್‌ಪಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಮುನಿರಾಜು ನಾಮಪತ್ರ ತಿರಸ್ಕೃತಗೊಂಡಿದ್ದು, ರವಿಕುಮಾರ್ ಕಣದಲ್ಲಿ ಉಳಿದುಕೊಂಡಿದ್ದಾರೆ.

ರಾಷ್ಟ್ರೀಯ ಪಕ್ಷಗಳು 3, ರಾಜ್ಯ ಪಕ್ಷಗಳು 5, ಪಕ್ಷೇತರರು 18 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಚನ್ನಕೇಶವ ಮತ್ತು ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ ರವರ ನಾಮಪತ್ರಗಳು ಅಂಗೀಕಾರವಾಗಿವೆ. ಕೆಜೆಪಿ  ಲೋಕಜನಶಕ್ತಿ, ಆರ್‌ಪಿಐ, ಸಮಾಜವಾದಿ ಜನತಾಪಕ್ಷ ಕರ್ನಾಟಕ ಸೇರಿದಂತೆ ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT