ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜೀವರಾಶಿ ಉಳಿಸಲು ಯತ್ನಿಸಬೇಕು'

Last Updated 7 ಏಪ್ರಿಲ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು: `ಹಾಳಾದ ಜೀವವೈವಿಧ್ಯವನ್ನು ಸರಿಪಡಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಇರುವ ಜೀವರಾಶಿಯನ್ನು ಉಳಿಸಿಕೊಳ್ಳುವಲ್ಲಿ ಎಲ್ಲರ ಪ್ರಯತ್ನ ಸಾಗಬೇಕು' ಎಂದು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ನಿವೃತ್ತ ನಿರ್ದೇಶಕ ರಾಮಕೃಷ್ಣ ಅಭಿಪ್ರಾಯಪಟ್ಟರು.

ಪರಿಸರ ಮತ್ತು ಅರಣ್ಯ ಸಚಿವಾಲಯವು ಕರ್ನಾಟಕ ರಾಜ್ಯ ವಿಜ್ಞಾನವು  ಪರಿಷತ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಜೀವವೈವಿಧ್ಯ ಸಂರಕ್ಷಣೆ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಕೆಲವು ಜೀವಾವಾಸಗಳನ್ನು ರಾಷ್ಟ್ರೀಯ ವನ, ವನ್ಯಧಾಮ ಅಥವಾ ರಕ್ಷಿತ ಪ್ರದೇಶಗಳೆಂದು ಘೋಷಿಸಬೇಕು. ಅಳಿವಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು' ಎಂದು ಸಲಹೆ ನೀಡಿದರು.

`ವಾಯು ಮತ್ತು ಶಬ್ದ ಮಾಲಿನ್ಯದಿಂದ ಕೆಲವು ಗುಬ್ಬಚ್ಚಿಯಂತಹ ಪಕ್ಷ ಸಂತತಿ ನಾಶವಾಗುತ್ತಿದೆ, ಉದ್ಯಾನ ನಿರ್ಮಾಣ ಮಾಡುವಾಗ ಸಸ್ಯ ಪ್ರಬೇಧದ ಬೀಜ ಬ್ಯಾಂಕುಗಳ ಸ್ಥಾಪನೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಪಾರ್ಥೇನಿಯಂ ತರಹದ ಇತರೆ ಜೀವನಾಶಕ ಕಳೆಯೂ ಇತರೆ ಸಸ್ಯ ಪ್ರಭೇದದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇವುಗಳ ಬಗ್ಗೆಯೂ ಹೆಚ್ಚಿನ ಸಂಶೋಧನೆ ನಡೆಯಬೇಕು' ಎಂದು ತಿಳಿಸಿದರು.

`ಹಡಗುಗಳ ಅತಿಯಾದ ಬಳಕೆಯಿಂದ ಸಮುದ್ರಗಳಲ್ಲಿರುವ ಜಲಚರಗಳು ನಾಶಕ್ಕೆ ಒಳಗಾಗಿದೆ. ಕೆಲವು ಪ್ರಬೇಧದ ಮೀನುಗಳು ಇಲ್ಲವಾಗಿದೆ. ಸಸ್ಯ, ಪ್ರಾಣಿ ಸಂಕುಲವನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ವಿಜ್ಞಾನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು' ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಧಯಕ್ಷ ಡಾ.ಎಚ್.ಎಸ್.ನಿರಂಜನ ಅರಾಧ್ಯ, `ದೇಶದಲ್ಲಿ ಸುಮಾರು 45,000ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿದ್ದು, ಅವುಗಳಲ್ಲಿ ಹೂಬಿಡುವ ಸಸ್ಯ ಪ್ರಬೇಧಗಳ ಸಂಖ್ಯೆ 15,000ಕ್ಕೂ ಹೆಚ್ಚಿದೆ. ಸಸ್ಯ ಸಂಪತ್ತಿನಲ್ಲಿ ರಾಷ್ಟ್ರಕ್ಕೆ ಹತ್ತನೇ ಸ್ಥಾನವಿದೆ. ಇದನ್ನು ಉಳಿಸಿಕೊಳ್ಳುವಲ್ಲಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ' ಎಂದು ಅವರು ನುಡಿದರು.

`ಸಾಕು ಪ್ರಾಣಿ ಹಾಗೂ ಕೃಷಿ ಮಾಡುವ ಬಹುತೇಕ ಪ್ರಬೇಧಗಳಲ್ಲಿ 167ಕ್ಕೂ ಹೆಚ್ಚಿನ ಪ್ರಭೇದಗಳ ಹುಟ್ಟು ದೇಶದಲ್ಲಾಗಿರುವುದು ಹೆಮ್ಮೆಯ ವಿಚಾರ. ಆದರೆ, ಸದ್ಯಕ್ಕೆ ದೇಶದಲ್ಲಿರುವ ಸಸ್ಯ ಹಾಗೂ ಪ್ರಾಣಿಗಳಲ್ಲಿ ಶೇ 10ರಷ್ಟು ಪ್ರಬೇಧಗಳು ವಿನಾಶದ ಅಂಚಿನಲ್ಲಿದೆ' ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಪರಿಷತ್ತಿನ ಖಜಾಂಚಿ ಗಿರೀಶ್ ಕಡ್ಲೇವಾಡ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT